ಚಾಯ್ ಪಕೋಡ ಮಾರುತ್ತಿದ್ದಾರೆ ಭಾರತದ ಅತೀ ದೊಡ್ಡ ರಾಜ್ಯದ ಸಿಎಂ ಅಕ್ಕ!

First Published | Mar 7, 2021, 3:42 PM IST

ಮಾರ್ಚ್ 8 ರಂದು ಮಹಿಳೆಯರನ್ನು ಗೌರವಿಸಿ ಇಡೀ ವಿಶ್ವಾದ್ಯಂತ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಈ ಮೂಲಕ ಪ್ರತಿಯೊಬ್ಬರೂ ನಾರಿ ಶಕ್ತಿಗೆ ಸೆಲ್ಯೂಟ್ ಹೊಡೆಯುತ್ತಾರೆ. ಹೀಗಿರುವಾಗ ಮಹಿಳಾ ಶಕ್ತಿಯನ್ನು ಅನಾವರಣಗೊಳಿಸುವ ವಿಭಿನ್ನ ಕತೆಯೊಂದು ಇಲ್ಲಿದೆ ನೋಡಿ. ಇದು ಉತ್ತರಾಖಂಡ ಪೌಡಿ ಗಢವಾಲಾ ಜಿಲ್ಲೆಯ ಕುಠಾರ್ ಹಳ್ಳಿ ನಿವಾಸಿ ಶಶಿ ದೇವಿ ಕತೆಯಾಗಿದೆ. ಇವರು ತಮ್ಮ ಗಂಡನ ಜೊತೆ ಸೇರಿ ಚಹಾ- ಪಕೋಡಾ ಅಂಗಡಿ ನಡೆಸುತ್ತಾರೆ. ಅದಕ್ಕೂ ಅಚ್ಚರಿಯ ವಿಚಾರ ಎಂದರೆ ಶಶಿ ದೇವಿ ದೇಶದ ಅತೀ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್ ಅಕ್ಕ.
 

ಸಿಎಂ ಆದಿತ್ಯನಾಥ್‌ಗಿಂತ ಶಶಿ ದೇವಿ ಆರು ವರ್ಷ ಹಿರಿಯರು. ಶಶಿ ಅವರಿಗೆ ಓರ್ವ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ತಮ್ಮ ಗಂಡನ ಜೊತೆ ತೀರ್ಥ ನಗರಿ ರಿಷಿಕೇಶದಲ್ಲಿ ಚಹಾ ಅಂಗಡಿ ನಡೆಸುತ್ತಾರೆ. ಇಲ್ಲಿ ಅವರ ಒಡೆತನದ ಎರಡು ಚಿಕ್ಕ ಅಂಗಡಿಗಳಿವೆ.
ಶಶಿ ದೇವಿಯವರ ಗಂಡನ ಮನೆ ರಿಷಿಕೇಶದಲ್ಲಿದೆ. ಇವರ ಗಂಡ ಪೂರನ್ ಸಿಂಗ್ ಪಯಾಲ್ ಪೂರ್ವ ಗ್ರಾಮದ ಮುಖ್ಯಸ್ಥರೂ ಆಗಿದ್ದಾರೆ. ಜೊತೆಗೆ ನೀಲಕಂಠ ಮಂದಿರದ ಬಳಿ ಇವರ ಲಾಡ್ಜ್ ಕೂಡಾ ಇದೆ.
Tap to resize

ಶಶಿ ದೇವಿಯವರ ಒಂದು ಅಂಗಡಿ ನೀಲಕಂಠ ಮಂದಿರ ಬಳಿ ಇದ್ದರೆ, ಮತ್ತೊಂದು ಭುವನೇಶ್ವರೀ ಮಂದಿರದ ಬಳಿ ಇದೆ. ಇಲ್ಲಿ ಚಹಾ, ಪಕೋಡಾ ಹಾಗೂ ಪ್ರಸಾದ ನಿಡಲಾಗುತ್ತದೆ.
ಇನ್ನು ತನ್ನ ತಮ್ಮ ಯೋಗಿ ಆದಿತ್ಯನಾಥ್‌ರವರ ಅಸಲಿ ಹೆಸರು ಅಜಯ್ ಸಿಂಗ್ ವಿಷ್ಠ್ ಆಗಿತ್ತು. ಸನ್ಯಾಸತ್ವದ ಬಳಿಕ ಅವರು ತನ್ನ ಹೆಸರು ಯೋಗಿ ಆದಿತ್ಯನಾಥ್ ಎಂದು ಬದಲಾಯಿಸಲಾಯ್ತು.
ಇನ್ನು ಯೋಗಿಯವರು ಮನೆಯಲ್ಲಿದ್ದಾಗ ತಾನೇ ತಯಾರಿಸಿದ ಊಟ ತಿನ್ನುತ್ತಿದ್ದರು ಎಂದು ಶಶಿ ದೇವಿ ಹೇಳುತ್ತಾರೆ. ಆದರೆ ಅನ್ಯಾಸತ್ವ ಸ್ವೀಕರಿಸಿದ ದಿನದಿಂದ ಅವರು ಮನೆ ಊಟ ಸೇವಿಸಿಲ್ಲ. 2017ರ ಫೆಬ್ರವರಿ 11ರಂದು ಯೋಗಿ ತನಗೆ ಕೊನೆಯ ಬಾರಿ ಸಿಕ್ಕಿದ್ದರು. ಅಂದು ಅವರು ಚುನಾವಣೆ ಸಂಬಂಧ ಇಲ್ಲಿಗೆ ಆಗಮಿಸಿದ್ದರು ಎಂದಿದ್ದಾರೆ.
ಇನ್ನು ತನ್ನ ತಮ್ಮ ಉತ್ತರಾಖಂಡ್ ಅಭಿವೃದ್ಧಿ ಮಾಡಬೇಕೆನ್ನುವುದು ಶಶಿ ದೇವಿ ಆಶಯವಾಗಿದೆ. ತನಗೆ ಏನು ಮಾಡದಿದ್ದರೂ ಪರವಾಗಿಲ್ಲ, ಆದರೆ ಜನತೆಗಾಗಿ ಏನಾದರೂ ಒಳ್ಳೆದು ಮಾಡಬೇಕು ಎಂದಿದ್ದಾರೆ.

Latest Videos

click me!