ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಬಳಕೆಯಾದ 2 ಸಾವಿರಕ್ಕೂ ಅಧಿಕ ಕಾಂಡೋಮ್‌ಗಳು

Published : Jul 31, 2026, 10:53 PM IST

ಚೆಂಗನ್ನೂರಿನ ರಸ್ತೆಯೊಂದರಲ್ಲಿ ಸುಮಾರು 2000 ಬಳಸಿದ ಕಾಂಡೋಮ್‌ಗಳು ಪತ್ತೆಯಾಗಿವೆ. ಈ ಘಟನೆಯ ಫೋಟೋಗಳು ವೈರಲ್ ಆಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಈ ಕೃತ್ಯ ಎಸಗಿದವರನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.

PREV
14
2000 ಬಳಸಿದ ಕಾಂಡೋಮ್‌

ಕೇರಳದ ರಸ್ತೆಯೊಂದರಲ್ಲಿ ಯಾರೋ ಸುಮಾರು 2000 ಬಳಸಿದ ಕಾಂಡೋಮ್‌ಗಳನ್ನು ರಾಶಿ ಹಾಕಿದ್ದಾರೆ. ಚೆಂಗನ್ನೂರಿನ ವೆಳ್ಳಾವೂರ್ ಜಂಕ್ಷನ್ ಬಳಿಯ ಎಂಸಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕಾಂಡೋಮ್‌ಗಳು ಎಲ್ಲಿಂದ ಬಂದವು ಎಂದು ಸಾರ್ವಜನಿಕರು ಗೊಂದಲಕ್ಕೊಳಗಾಗಿದ್ದಾರೆ.

24
ಕಾಂಡೋಮ್‌ಗಳು ಬಿದ್ದ ಸುದ್ದಿ ಸ್ಥಳೀಯವಾಗಿ ವೈರಲ್

ಗುರುವಾರ ರಾತ್ರಿ ಸುಮಾರು 10 ಗಂಟೆ ಈ ಕಾಂಡೋಮ್‌ಗಳು ರಸ್ತೆಯಲ್ಲಿ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಇದನ್ನು ಯಾರಾದರೂ ಚಲಿಸುತ್ತಿದ್ದ ವಾಹನದಿಂದ ಉದ್ದೇಶಪೂರ್ವಕವಾಗಿ ಎಸೆದಿದ್ದಾರೋ ಅಥವಾ ಆಕಸ್ಮಿಕವಾಗಿ ಬಿದ್ದಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಾಂಡೋಮ್‌ಗಳು ಬಿದ್ದ ಸುದ್ದಿ ಸ್ಥಳೀಯವಾಗಿ ವೈರಲ್ ಆಗಿದ್ದು, ಜನರು ಈ ಸ್ಥಳದತ್ತ ಆಗಮಿಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

34
ಪೊಲೀಸರು ಹೇಳಿದ್ದೇನು?

ಈ ಕೃತ್ಯ ಎಸಗಿದ ವಾಹನವನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲು ನಿರ್ಧರಿಸಿದ್ದಾರೆ. ನಗರಸಭೆಯು ತಕ್ಷಣವೇ ರಸ್ತೆಯಿಂದ ಈ ತ್ಯಾಜ್ಯವನ್ನು ತೆರವುಗೊಳಿಸುವಂತೆ ಸೂಚನೆ ನೀಡಿದೆ. ಈ ಪ್ರದೇಶದಲ್ಲಿ ಹಲವು ಕಡೆ ಸಿಸಿಟಿವಿ ಕ್ಯಾಮೆರಾಗಳಿದ್ದು, ಈ ಘಟನೆ ಹಿಂದೆ ಯಾರಿದ್ದಾರೆ ಎಂಬುದನ್ನು ಶೀಘ್ರದಲ್ಲಿಯೇ ಪತ್ತೆ ಮಾಡಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)

44
ಕಾಂಡೋಮ್‌ ಫೋಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಮತ್ತೊಂದೆಡೆ ರಸ್ತೆ ಮೇಲೆ ಬಿದ್ದಿರೋ ಕಾಂಡೋಮ್‌ಗಳ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಏಕಕಾಲದಲ್ಲಿ ಇಷ್ಟೊಂದು ಕಾಂಡೋಮ್‌ಗಳ ಬಗ್ಗೆ ಹಲವು ಅನುಮಾನಗಳು ಮೂಡಿವೆ. (ಸಾಂದರ್ಭಿಕ ಚಿತ್ರ)

ಇದನ್ನೂ ಓದಿ: ಟ್ರಕ್‌ ಹಿಂದೆ ಬರೆಯೋ 'Use Dipper At Night' ಬರಹಕ್ಕೂ ಕಾಂಡೋಮ್‌ಗೆ ಅವಿನಾಭವ ಸಂಬಂಧ

ಇದನ್ನೂ ಓದಿ: ಭಾರತದಲ್ಲಿ ವಿಶ್ವದ ಮೊದಲ 'ಪ್ರೋಟಿನ್ ಕಾಂಡೋಮ್' ಬಿಡುಗಡೆ; ಮಾರುಕಟ್ಟೆಯಲ್ಲಿ ಸಂಚಲನ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories