ಮದುವೆಯೇ ಆಗಿಲ್ಲ: ಮಗು ನನ್ನದಲ್ಲ ಎಂದ ಗಂಡನಿಗೆ ಶಾಕ್‌ ಕೊಟ್ಟ ನುಸ್ರತ್!

First Published Jun 9, 2021, 3:28 PM IST

ಟಿಎಂಸಿ ಸಂಸದೆ ಹಾಗೂ ನಟಿ ಸುಸ್ರತ್ ಜಹಾಂ ಇತ್ತೀಚೆಗೆ ಪ್ರೆಗ್ನೆನ್ಸಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಗರ್ಭಿಣಿಯಾಗಿರುವ ನುಸ್ರತ್ ಶೀಘ್ರದಲ್ಲೇ ತಾಯಿಯಾಗಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಹೀಗಿದ್ದರೂ ಈವರೆಗೆ ಸುಸ್ರತ್ ಆಗಲೀ, ಅವರ ಕುಟುಂಬ ಸದಸ್ಯರಾಗಲೀ ಯಾವುದೇ ಮಾಹಿತಿ ನೀಡಿಲ್ಲ. ನುಸ್ರತ್ ತಾಯಿಯಾಗುತ್ತಿದ್ದಾರೆ ಎಂಬ ವಿಚಾರ ಅಚ್ಚರಿಪಡುವಂತದ್ದಲ್ಲವಾದರೂ, ಅವರ ಗಂಡ ನಿಖಿಲ್ ಜೈನ್‌ ತಾವಿಬ್ಬರೂ ಒಟ್ಟಿಗೆ ಇಲ್ಲವೆಂದಾಗ ಈ ಮಗು ನನ್ನದು ಹೇಗಾಗುತ್ತದೆ? ಎಂದು ಪ್ರಶ್ನಿಸಿರುವುದೇ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ನುಸ್ರತ್ ಜಹಾಂ, ಬೋಡ್ರಮ್ ಟೌನ್‌ನ ಉದ್ಯಮಿ ನಿಖಿಲ್ ಜೈನ್ ಜೊತೆ 2019ರ ಜೂನ್‌ 19 ರಂದು ಮದುವೆಯಾಗಿದ್ದರು. ಖುದ್ದು ನುಸ್ರತ್ ತಮ್ಮ ಮದುವೆ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಆದರೀಗ ಅವರೇ ಈ ಮದುವೆ ಮಾನ್ಯವಲ್ಲ ಎನ್ನುತ್ತಿದ್ದಾರೆ.

ತಮ್ಮ ಪ್ರೆಗ್ನೆನ್ಸಿ ಹಾಗೂ ಗಂಡನ ವಿವಾದಾತ್ಮಕ ಹೇಳಿಕೆ ಬಳಿಕ, ನುಸ್ರತ್ ಜಹಾಂ ಈ ವಿಚಾರವಾಗಿ ಮಾತನಾಡುತ್ತಾ ವಿದೇಶೀ ನೆಲದಲ್ಲಿದ್ದ ಕಾರಣ, ಹಾಗೂ ಟರ್ಕಿ ಮ್ಯಾರೇಜ್ ರೆಗ್ಯುಲೇಷನ್ ಅನ್ವಯ ಈ ಮದುವೆ ಮಾನ್ಯವಲ್ಲ. ಅಲ್ಲದೇ ಇದೊಂದು ಅಪೂರ್ಣ(ಎರಡು ವಿಭಿನ್ನ ಧರ್ಮದವರ ನಡುವೆ ನಡೆದ) ಮದುವೆ. ಹೀಗಾಗಿ ಇದಕ್ಕೆ ಭಾರತದಲ್ಲಿ ಶಾಸನಬದ್ಧ ಮಾನ್ಯತೆ ನೀಡಬೇಕಾದ ಅಗತ್ಯವಿತ್ತು. ಆದರೆ ಹಾಗಾಗಲಿಲ್ಲ ಎಂದಿದ್ದಾರೆ.
undefined
ನುಸ್ರತ್ ಅನ್ವಯ ಕಾನೂನಾತ್ಮಕವಾಗಿ ಈ ಮದುವೆ ಮಾನ್ಯವಲ್ಲ. ಇದನ್ನು ಕೇವಲ ರಿಲೇಷನ್‌ಶಿಪ್‌ ಅಥವಾ ಲಿವ್‌ ಇನ್‌ ರಿಲೇಷನ್‌ಶಿಪ್ ಎನ್ನಬಹುದು. ಹೀಗಾಗಿ ಡೈವೋರ್ಸ್‌ ಪ್ರಶ್ನೆಯೇ ಉದ್ಭವಿಸಲ್ಲ. ನಾವು ತುಂಬಾ ಸಮಯದ ಹಿಂದೆಯೇ ಪ್ರತ್ಯೇಕವಾಗಿದ್ದೇವೆ. ನಾನು ಈ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ ಯಾಕೆಂದರೆ ನಾನು ನನ್ನ ವೈಯುಕ್ತಿಕ ಜೀವನದ ಬಗ್ಗೆ ಇತರರೊಂದಿಗೆ ಹೇಳಿಕೊಳ್ಳುವುದಿಲ್ಲ. ನಮ್ಮ ಸೋ ಕಾಲ್ಡ್ ಮದುವೆ ಕಾನೂನಿನ ಪ್ರಕಾರ ಮಾನ್ಯವಲ್ಲ ಎಂದಿದ್ದಾರೆ.
undefined
ಇನ್ನು ಅತ್ತ ನುಸ್ರತ್ ಹಾಗೂ ನಿಖಿಲ್ ನಡುವೆ ಮನಸ್ತಾಪದ ಏರ್ಪಟ್ಟಿದೆ. ಹೀಗಿರುವಾಗ ನಿಖಿಲ್ ಕೂಡಾ ನುಸ್ರತ್ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ನುಸ್ರತ್ ತನ್ನ ಜೊತೆಗಲ್ಲ, ಬೇರೆಯವರೊಂದಿಗಿರಲು ಇಷ್ಟಪಡುತ್ತಾರೆ ಎಂದು ನಿಖಿಲ್ ದೂರಿದ್ದಾರೆ.
undefined
ಇನ್ನು ನುಸ್ರತ್ 2020ರ ಡಿಸೆಂಬರ್‌ನಿಂದ ತಮ್ಮ ಮನೆ ಬಿಟ್ಟು ಹೋಗಿದ್ದಾರೆ. ಅವರೀಗ ತನ್ನ ತಂದೆ, ತಾಯಿ ಜೊತೆ ಬಾಲೀಗಂಜ್‌ನಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದಿದ್ದಾರೆ. ಅಂದಿನಿಂದ ನಾವಿಬ್ಬರು ಭೇಟಿಯಾಗಿಲ್ಲ. ಹೀಗಿರುವಾಗ ಆ ಮಗು ನನ್ನದು ಹೇಗಾಗುತ್ತದೆ? ಎಂದು ನಿಖಿಲ್ ಪ್ರಶ್ನಿಸಿದ್ದಾರೆ ಎಂದು ಹಲವಾರು ವರದಿಗಳು ಉಲ್ಲೇಖಿಸಿವೆ.
undefined
ನುಸ್ರತ್ ಜಹಾಂ, ಬೋಡ್ರಮ್ ಟೌನ್‌ನ ಉದ್ಯಮಿ ನಿಖಿಲ್ ಜೈನ್ ಜೊತೆ 2019ರ ಜೂನ್‌ 19 ರಂದು ಮದುವೆಯಾಗಿದ್ದರು. ಇಬ್ಬರೂ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಈ ಮೂರೂ ಸಂಪ್ರದಾಯದಂತೆ ಅದ್ಧೂರಿಯಾಗಿ ವಿವಾಹವಾಗಿದ್ದರು. ಅವರ ಗಂಡ ನಿಖಿಲ್ ಜೈನ್ ಕೋಲ್ಕತ್ತಾದ ಪ್ರಸಿದ್ಧ ಜವಳಿ ಉದ್ಯಮಿಯಾಗಿದ್ದಾರೆ. ಇನ್ನು ನುಸ್ರತ್ ಅವರ ಟೆಕ್ಸ್‌ಟೈಲ್‌ ಕಂಪನಿ 'ರಂಗೋಲಿ'ಯ ಬ್ರಾಂಡ್‌ ಅಂಬಾಸಿಡರ್ ಆಗಿದ್ದಾರೆ.
undefined
ಇನ್ನು ಮುಸ್ಲಿಮೇತರ ವ್ಯಕ್ತಿಯನ್ನು ಮದುವೆಯಾಗಿದ್ದ ನುಸ್ರತ್ ವಿರುದ್ಧ ಮುಸ್ಲಿಂ ಧರ್ಮಗುರುಗಳು ಫತ್ವಾ ಹೊರಡಿಸಿದ್ದರು. ಅವರು ಈ ಮದುವೆಯನ್ನು ಇಸ್ಲಾಂ ವಿರೋಧಿ ಎಂದು ಘೋಷಿಸಿದ್ದರು. ಅಲ್ಲದೇ, ನುಸ್ರತ್ ಮದುವೆ ಹಾಗೂ ಮಂಗಳಸೂತ್ರ ಧಾರಣೆಯೂ ತಪ್ಪು ಎಂದು ಹೇಳಿದ್ದರು.
undefined
ಬಂಗಾಳಿ ನಟಿಯಾಗಿರುವ ನುಸ್ರತ್ ಜಹಾಂ, 2019ರ ಲೊಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿ ಪಕ್ಷದ ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬಂಗಾಳದ ಬಶೀರ್‌ಹಾಟ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ನುಸ್ರತ್ ಸುಮಾರು 3.3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
undefined
2011 ರಲ್ಲಿ ನುಸ್ರತ್, ಬಂಗಾಲಿ ಫಿಲಂ 'ಶೋತ್ರು' ಮೂಲಕ ತಮ್ಮ ಸಿನಿ ವೃತ್ತಿ ಆರಂಭಿಸಿದ್ದರು. ಇದಾದ ಬಳಿಕ ಅವರು ಖೋಕಾ 420, ಖಿಲಾಡಿ, ಯೋದ್ಧಾ: ದ ವಾರಿಯರ್, ಜಮಾಯಿ 420, ಕೆಲೋರ್ ಕೀರ್ತಿ, ಲವ್ ಎಕ್ಸ್‌ಪ್ರೆಸ್‌ ಹಾಗೂ ನಕಾಬ್‌ನಂತಹ ಸಿನಿಮಾಗಳಲ್ಲಿ ನಟಿಸಿದ್ದರು.
undefined
ನಟಿಯರಾಗಿ, ರಾಜಕೀಯಕ್ಕೆ ಕಾಲಿಟ್ಟಿದ್ದ ನುಸ್ರತ್ ಜಹಾಂ ಹಾಗೂ ಮಿಮಿ ಚಕ್ರವರ್ತಿ ಸಂಸತ್ತಿನಲ್ಲಿ ಬಂಗಾಳಿ ಭಾಷೆಯಲ್ಲಿ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಪ್ರತಿಜ್ಞಾ ವಿಧಿ ಬಳಿಕ ಜಯ್ ಹಿಂದ್, ವಂದೇ ಮಾತರಂ ಹಾಗೂ ಜಯ್ ಬೆಂಗಾಲ್ ಎಂದೂ ಹೇಳಿದ್ದರು.
undefined
click me!