ಹೊಸ ತಳಿ ಪತ್ತೆ: ಕೊರೋನಾ ಅಬ್ಬರ ಇಳಿಯುತ್ತಿದ್ದಂತೆಯೇ ದೇಶಕ್ಕೆ ಮತ್ತೊಂದು ಶಾಕ್, ಹೀಗಿದೆ ಲಕ್ಷಣ!

Published : Jun 08, 2021, 01:59 PM IST

ಪುಣೆ ನ್ಯಾಷನಲ್ ಇನ್ಸ್ಟಿಟ್ಯೂಟ್‌ ಆಫ್‌ ವೈರಾಲಜಿಗೆ ಕೊರೋನಾ ವೈರಸ್‌ನ ಹೊಸ ತಳಿ  B.1.1.28.2 ಪತ್ತೆಯಾಗಿದೆ. ಈ ತಳಿ ಬ್ರಿಟನ್ ಹಾಗೂ ಬ್ರೆಜಿಲ್ ಪ್ರವಾಸ ಕೈಗೊಂಡು ಭಾರತಕ್ಕೆ ಬಂದವರಲ್ಲಿ ಪತ್ತೆಯಾಘಿದೆ ಎಂಬುವುದು ಮತ್ತೊಂದು ಆಘಾತಕಾರಿ ವಿಚಾರ. ಟೈಮ್ಸ್‌ ಆಫ್‌ ಇಂಡಿಯಾ ವರದಿಯನ್ವಯ ಈ ತಳಿಯ ಅಧ್ಯಯನ ನಡೆಸಿದ ಬಳಿಕ ಇದರ ಲಕ್ಷಣಗಳು ಅಪಾಯಕಾರಿಯಾಗಿವೆ ಎಂಬುವುದು ಬಯಲಾಗಿದೆ.

PREV
14
ಹೊಸ ತಳಿ ಪತ್ತೆ: ಕೊರೋನಾ ಅಬ್ಬರ ಇಳಿಯುತ್ತಿದ್ದಂತೆಯೇ ದೇಶಕ್ಕೆ ಮತ್ತೊಂದು ಶಾಕ್, ಹೀಗಿದೆ ಲಕ್ಷಣ!

ಎಲ್ಲಿ ಈ ಬಗ್ಗೆ ಪ್ರಕಟವಾಗಿದೆ?: ಈ ತಳಿ ಮೇಲೆ ಸದ್ಯಕ್ಕೆ ನಿಡಲಾಗುತ್ತಿರುವ ಲಸಿಕೆ ಪ್ರಭಾವ ಬೀರುತ್ತದಾ? ಇಲ್ಲವಾ ಎಂದು ತಿಳಿಯಲು ಸ್ಕ್ರೀನಿಂಗ್ ಅಗತ್ಯವಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್‌ ಆಫ್‌ ವೈರಾಲಜಿಯ ಈ ಅಧ್ಯಯನ bioRxiv ನಲ್ಲಿ ಆನ್‌ಲೈನ್‌ ಆವೃತ್ತಿಯಲ್ಲಿ ಬಿತ್ತರಿಸಲಾಗಿದೆ.

24

ಲಸಿಕೆ ಪ್ರಭಾವ ಬೀರುತ್ತಾ?: ಲಸಿಕೆ ಈ ತಳಿ ವಿರುದ್ಧ ಹೋರಾಡುವಷ್ಟು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಲಸಿಕೆಯ ಎರಡೂ ಡೋಸ್‌ನಿಂದ ಹುಟ್ಟಿಕೊಳ್ಳುವ ಪ್ರತಿಕಾಯ ಶಕ್ತಿ ಈ ತಳಿಯನ್ನು ಮಣಿಸಲು ಸಮರ್ಥವಾಗಿದೆ. ಈ ಅಧ್ಯಯನದಲ್ಲಿ ಸಾರ್ಸ್‌-ಕೋವ್‌-2  ವೇರಿಯೆಂಟ್‌ ಜಿನೋಮ್ ಸೀಕ್ವೆನ್ಸಿಂಗ್ ಮೇಲೆ ಹೆಚ್ಚು ಒತ್ತು ನೀಡಲಾಗಿದೆ.

34

ಕೊರೋನಾ ಹೊಸ ತಳಿಯ ಲಕ್ಷಣಗಳೇನು? B.1.1.28.2 ತಳಿಯ ಸೋಂಕು ತಗುಲಿದರೆ ವ್ಯಕ್ತಿಯ ತೂಕ ಕಡಿಮೆಯಾಗಲಾರಂಭಿಸುತ್ತದೆ. ಇದು ಅತ್ಯಂತ ವೇಗವಾಗಿ ಹಬ್ಬುವುದರಿಂದ ಶ್ವಾಸಕೋಶ ಡ್ಯಾಮೇಜ್ ಆಗುತ್ತದೆ. ಶ್ವಾಸಕೋಶದಲ್ಲಿ ಗಾಯಗಳನ್ನುಂಟು ಮಾಡುವ ಸಾಮರ್ಥ್ಯವೂ ಈ ವೈರಸ್‌ಗಿದೆ.

44

ಜಿನೋಮ್ ಸೀಕ್ವೆಂಸ್ನಿಂಗ್ ಲ್ಯಾಬ್‌ ಸೋಂಕಿನ ಪ್ರಕರಣಗಳು ಏಕಾಏಕಿ ಯಾಕೆ ಏರಿಕೆಯಾದವು ಎಂಬುವುದನ್ನು ಪತ್ತೆ ಹಚ್ಚುವ ಬಗ್ಗೆ ಅಧ್ಯಯಹನ ನಡೆಸುತ್ತಿದೆ. ಈವರೆಗೂ ಹತ್ತು ನ್ಯಾಷನಲ್ ಲ್ಯಾಬ್‌ಗಳು ಸುಮಾರು ಮೂವತ್ತು ಸಾವಿರ ಸ್ಯಾಂಪಲ್‌ಗಳ ಸೀಕ್ವೆನ್ಸ್ ನಡೆಸಿದೆ. ಜಿನೋಮ್‌ ಸೀಕ್ವೆಂನ್ಸಿಂಗ್‌ಗಾಗಿ ಕೇಂದ್ರ ಸರ್ಕಾರವೂ ಸಂಪನ್ಮೂಲಗಳನ್ನು ಹೆಚ್ಚಿಸಲು ಮಾಡುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಇತ್ತೀಚೆಗೆ ಇನ್ನೂ 18 ಲ್ಯಾಬ್‌ಗಳನ್ನು ಒಕ್ಕೂಟಕ್ಕೆ ಸೇರಿಸಲಾಗಿದೆ.

click me!

Recommended Stories