ಇವರ ಸಲಹೆ ಪಡೆಯದೇ ಯಾವುದೇ ನಿರ್ಧಾರ ಮಾಡಲ್ವಂತೆ ಅಂಬಾನಿ ಕುಟುಂಬ

First Published | Nov 18, 2024, 4:10 PM IST

ಆಡಂಬರದ ಬದುಕಿಗೆ ಹೆಸರಾದ ಅಂಬಾನಿ ಕುಟುಂಬದಲ್ಲಿ ಯಾವುದೇ ಕಾರ್ಯಕ್ರಮ ಇರಲಿ ಅದರಲ್ಲಿ ಒಬ್ಬ ವ್ಯಕ್ತಿ ಬಹಳ ಮುಖ್ಯ ಪಾತ್ರ ವಹಿಸುತ್ತಾರೆ. ಅವರನ್ನು ಕೇಳದೆ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲವಂತೆ. ಹಾಗಿದ್ರೆ ಅವರು ಯಾರು?

ಭಾರತದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಅಂಬಾನಿ ಕುಟುಂಬ ತಮ್ಮ ಆಡಂಬರದ ಜೀವನಶೈಲಿ ಮತ್ತು ದುಬಾರಿ ವಸ್ತುಗಳಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಆಳವಾದ ಆಧ್ಯಾತ್ಮಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಹೊಂದಿರುವ ಈ ಕುಟುಂಬವೂ ತಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ರಮ ಆರಂಭಿಸುವ ಮುನ್ನ, ತಮ್ಮ ನಂಬಿಕಸ್ಥ ಕುಟುಂಬ ಪುರೋಹಿತ ಪಂಡಿತ್ ಚಂದ್ರಶೇಖರ್ ಶರ್ಮಾ ಅವರನ್ನು ಸಂಪರ್ಕಿಸಿ ಸಲಹೆ ಪಡೆಯುತ್ತಾರೆ. ಅವರ ಸಲಹೆ ಪಡೆದ ನಂತರವೇ ಅಂಬಾನಿ ಮನೆಯಲ್ಲಿ ಯಾವುದೇ ಮುಖ್ಯ ಕಾರ್ಯಕ್ರಮ ನಡೆಯುತ್ತದೆ.

ಪಂಡಿತ್ ಚಂದ್ರಶೇಖರ್ ಶರ್ಮಾ ಅವರು ಅಂಬಾನಿ ಕುಟುಂಬದ ಎಲ್ಲಾ ಪ್ರಮುಖ ಕಾರ್ಯಕ್ರಮಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಶುಭ ಸಮಯದ ಸಲಹೆ ನೀಡುವುದರಿಂದ ಹಿಡಿದು ವಿಶೇಷ ಸಮಾರಂಭಗಳಲ್ಲಿ ಮಾರ್ಗದರ್ಶನ ನೀಡುತ್ತಾರೆ. ಅವರ ಪರಿಣತಿ ಸಾಂಪ್ರದಾಯಿಕ ಜ್ಯೋತಿಷ್ಯಕ್ಕಿಂತ ಹೆಚ್ಚಿನದು. ಅವರು ಅಂಬಾನಿ ಕುಟುಂಬಕ್ಕೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಾರೆ, ವಿಶೇಷವಾಗಿ ಐಪಿಎಲ್ ಉದ್ಘಾಟನಾ ಸಮಾರಂಭಗಳು, ಆಂಟಿಲಿಯಾದಲ್ಲಿ ಗಣೇಶ ಚತುರ್ಥಿ ಆಚರಣೆಗಳು ಮತ್ತು ಕುಟುಂಬ ವಿವಾಹಗಳಂತಹ ಪ್ರಮುಖ ಕಾರ್ಯಕ್ರಮಗಳಿಗೆ ಅವರ ಸಲಹೆ ಪಡೆಯದೇ ಅಂಬಾನಿ ಕುಟುಂಬ ಮುಂದುವರೆಯುವುದಿಲ್ಲವಂತೆ.

Tap to resize

ಪಂಡಿತ್ ಚಂದ್ರಶೇಖರ್ ಶರ್ಮಾ ಅವರ ಸೇವೆಗಳು ಸಾಂಪ್ರದಾಯಿಕ ಜ್ಯೋತಿಷ್ಯಕ್ಕಿಂತ ಅಳವಾಗಿದ್ದು,  ಅವರನ್ನು 'ಆಧ್ಯಾತ್ಮಿಕ ಮಾರ್ಗದರ್ಶಕ' ಎಂದು ವಿವರಿಸಲಾಗಿದೆ. ಜ್ಯೋತಿಷ್ಯ ಸಲಹೆಯಿಂದ ಹಿಡಿದು ಜೀವನಶೈಲಿ ತರಬೇತಿಯವರೆಗೆ ಅವರು ವಿವಿಧ ಸೇವೆಗಳನ್ನು ನೀಡುತ್ತಾರೆ. ಅವರ ಗ್ರಾಹಕರಲ್ಲಿ ಹಲವಾರು ಬಾಲಿವುಡ್ ತಾರೆಯರು ಮತ್ತು ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳು ಸೇರಿದ್ದಾರೆ. ಪ್ರಿಯಾಂಕಾ ಚೋಪ್ರಾ ಜೋನಾಸ್ ಮತ್ತು ಇತರ ಪ್ರಸಿದ್ಧ ವ್ಯಕ್ತಿಗಳು ಕೂಡ ಚಂದ್ರಶೇಖರ್ ವರ್ಮಾ ಅವರ ಗ್ರಾಹಕರಾಗಿದ್ದಾರೆ.

ಅವರು ಒಂದೊಂದು ಕಾರ್ಯಕ್ಕೆ ಒಂದೊಂದು ರೀತಿಯಲ್ಲಿ ಶುಲ್ಕ ವಿಧಿಸುತ್ತಾರೆ. 

ಜಾತಕ ಪರಿಶೀಲನೆ: ₹1,000
ಶುಭ ಮುಹೂರ್ತ: ₹1,000
ಅಂಗಡಿ/ಕಾರ್ಖಾನೆ ಉದ್ಘಾಟನೆ: ₹5,000 (ಪೂಜಾ ಸಾಮಗ್ರಿಗಳನ್ನು ಹೊರತುಪಡಿಸಿ)
ಭೂಮಿ ಪೂಜೆ: ₹5,000 (ಪೂಜಾ ಸಾಮಗ್ರಿಗಳನ್ನು ಹೊರತುಪಡಿಸಿ)
ಮದುವೆ: ₹25,000 (ಪೂಜಾ ಸಾಮಗ್ರಿಗಳನ್ನು ಒಳಗೊಂಡಂತೆ)
ಸತ್ಯನಾರಾಯಣ ಪೂಜೆ: ₹5,000 (ಪೂಜಾ ಸಾಮಗ್ರಿಗಳನ್ನು ಹೊರತುಪಡಿಸಿ)

ವಿಸ್ತಾರವಾದ ಸಮಾರಂಭಗಳಿಗೆ, ವಿಶೇಷವಾಗಿ ನಿರ್ದಿಷ್ಟ ವಿಧಿಗಳು ಮತ್ತು ಸಾಮಗ್ರಿಗಳು ಅಗತ್ಯವಿರುವ ಸಂದರ್ಭಗಳಲ್ಲಿ, ವೆಚ್ಚ ಗಣನೀಯವಾಗಿ ಹೆಚ್ಚಾಗುತ್ತದೆ.

ಈ ವಿಧಿಗಳ ಮೂಲಕ, ಪಂಡಿತ್ ವರ್ಮಾ ತಮ್ಮ ಗ್ರಾಹಕರಿಗೆ ಶಾಂತಿಯುತ, ಆರೋಗ್ಯಕರ ಮತ್ತು ಸಮೃದ್ಧ ಜೀವನವನ್ನು ನೀಡುತ್ತಾರೆ ಎಂದು ಹೇಳುತ್ತಾರೆ. ಅನೇಕ ಶ್ರೀಮಂತ ಕುಟುಂಬಗಳು ಮತ್ತು ಪ್ರಮುಖ ವ್ಯಕ್ತಿಗಳು ಅವರ ಸಲಹೆಯನ್ನು ನಂಬಿರುವುದು ಅವರ ಸ್ಥಾನಮಾನ ಮತ್ತು ಅವರ ಆಧ್ಯಾತ್ಮಿಕ ಪರಿಣತಿಯ ಮೇಲಿನ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.

Latest Videos

click me!