ನೇಹಾ ಬೋರಾ ಟೀ-ಶರ್ಟ್‌ ಮೇಲಿರುವ One Piece ಎಂದರೆ ಏನು? ಜಪಾನಿನ ಕಾರ್ಟೂನ್ ಹೇಗೆ Gen-Z ಪ್ರತಿಭಟನೆಗೆ ಅಸ್ತ್ರವಾಯಿತು?

Published : Oct 14, 2026, 05:06 PM IST

Neha bora one piece t shirt: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ರಾಜೀನಾಮೆ ಹಾಗೂ SIR ಅಕ್ರಮಗಳ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರೋರಲ್ಲಿ ನೇಹಾ ಬೋರಾ (Neha Bora) ಕೂಡ ಒಬ್ಬರು. ಇದೀಗ ಅವರು ಧರಿಸಿದ್ದ ಟಿ-ಶರ್ಟ್ ಭಾರೀ ವೈರಲ್ ಆಗಿದೆ. ಯಾಕೆ?

PREV
14
ಟಿ-ಶರ್ಟ್ ಮೇಲೆ ಒನ್ ಪೀಸ್

ನೇಹಾ ಬೋರಾ.. ಅಖಿಲ ಭಾರತ ವಿದ್ಯಾರ್ಥಿ ಸಂಘ (AISA)ದ ಅಧ್ಯಕ್ಷೆ ನೇಹಾ ಬೋರಾ. ಪ್ರಸ್ತುತ SIR ಅಕ್ರಮಗಳ ವಿರುದ್ಧದ ಹೋರಾಟದಲ್ಲಿ ಇವರು ಹೆಸರು ಕೇಳಿ ಬರುತ್ತಿದೆ. ಹೋರಾಟದ ವೇಳೆ ಅವರು ಧರಿಸಿರುವ ಟಿ-ಶರ್ಟ್ ಭಾರೀ ವೈರಲ್ ಆಗ್ತಿದೆ. ಇನ್ನು, ಅವರು ಧರಿಸಿದ್ದ ಟಿ-ಶರ್ಟ್ ಮೇಲೆ ಒನ್ ಪೀಸ್ (One Piece ) ಪೈರೇಟ್ಸ್ ಲೋಗೋ ಹೊಂದಿದೆ. ಏನಿದು?

24
One Piece ಎಂದರೆ ಏನು?

ಅವರು ಧರಿಸಿದ್ದ ಕೆಂಪು ಟಿ-ಶರ್ಟ್ ಮೇಲೆ ಈ ಲೋಗೋ ಹೊಂದಿದೆ. ಇದು ಜಪಾನಿನ ಒಂದು ಕಾರ್ಟೂನ್. ಇದು ಅಲ್ಲಿನ ಕಡಲುಗಳ್ಳರ ಲಾಂಛನ. ಇದು ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾರೀ ಅಟ್ರಾಕ್ಟ್ ಮಾಡುತ್ತಿದೆ. ಈ One Piece ಇತ್ತೀಚೆಗೆ ಏಷ್ಯಾದ ಹಲವು ದೇಶಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೂ ಪ್ರಮುಖ ಸ್ಫೂರ್ತಿ ಪಡೆದಿದೆ.

ಜಪಾನಿನ ಮಂಗಾ ಸಿರೀಸ್‌ನ ಒನ್ ಪೀಸ್ ಅನ್ನು ಜಪಾನ್ ಐಚಿರೋ ಓಡಾ ರಚಿಸಿದ್ದಾರೆ. ಇದರ ಮೊದಲ ಸಂಚಿಕೆ 1997ರಲ್ಲಿ ಬಿಡುಗಡೆ ಆಯಿತು. ಕತೆಯಲ್ಲಿ ಒನ್ ಪೀಸ್ ಎಂಬ ಪೌರಾಣಿ ಮತ್ತು ನಿಗೂಢ ನಿಧಿಯನ್ನು ಹುಡುಕುತ್ತ ಪ್ರಯಾಣಿಸುವ ಕತೆಯನ್ನು ಹೊಂದಿದೆ.

34
ವೈರಲ್‌ಗೆ ಕಾರಣ ಏನು?

ಟಿ-ಶರ್ಟ್‌ನಲ್ಲಿ ಒನ್ ಪೀಸ್ ಎಂಬ ಪದ. ಮತ್ತು ಸ್ಟ್ರಾ ಹ್ಯಾಟ್ ಪೈರೆಟ್ಸ್ ಕಡಲುಗಳ್ಳರ ಧ್ವಜವಾದ ಜಾಲಿ ರೋಜರ್ ಹೋಲುವ ಒಣ ಹುಲ್ಲಿನಿಂದ ಧರಿಸಿದ್ದ ತಲೆಬುರುಡೆ ಇದೆ. ಈ ಕಡಲುಗಳ್ಳರ ಧ್ವಜ ಇರೋದಕ್ಕೆ ಇದು ಭಾರತದಲ್ಲೂ ಪ್ರಮುಖ ಚರ್ಚೆಗೆ ಕಾರಣವಾಯಿತು. ಈ ಹಿಂದೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆಯೂ ಇಂಥ ಟಿ-ಶರ್ಟ್‌ಗಳು ಕಾಣಿಸಿಕೊಂಡಿದ್ದವು.

44
ಹೇಗೆ ಪ್ರತಿಭಟನೆಯ ಅಸ್ತ್ರವಾಯಿತು?

ಒನ್ ಪೀಸ್ ಜಗತ್ತಿನೆಲ್ಲೆಡೆ ಅಭಿಮಾನಿಗಳನ್ನು ಹೊಂದಿದೆ. ಸೆಪ್ಟೆಂಬರ್ 2025 ಹೊತ್ತಿಗೆ ವಿಶ್ವದಾದ್ಯಂತ ಒಟ್ಟು 500 ಮಿಲಿಯನ್‌ಗಿಂತಲೂ ಹೆಚ್ಚು ಪ್ರತಿಯನ್ನು ಮುದ್ರಿಸಲಾಯಿತು. ಅನಿಮೆ ವೆರಿಯೆಂಟ್ಸ್, ಅನಿಮೇಟೆಡ್ ಚಲನಚಿತ್ರಗಳು ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಲೈವ್-ಆಕ್ಷನ್ ಸರಣಿಯ ಮೂಲಕವೂ ಈ ಕಥೆಯು ಪ್ರೇಕ್ಷಕರನ್ನು ತಲುಪಿದೆ. ಇದಕ್ಕಾಗಿಯೇ ಸ್ಟ್ರಾ ಹ್ಯಾಟ್ ಪೈರೇಟ್ಸ್ ಧ್ವಜವು ಪ್ರತಿಭಟನೆಗಳಿಗೆ ಸುಲಭವಾದ ಸಂಕೇತವಾಗಿದೆ. ಇವತ್ತಿನ Gen-Z ಜನಾಂಗ ಯಾವುದೇ ವಿಚಾರವನ್ನೂ ಚರ್ಚಿಸುವ ಮೊದಲು ಆನ್‌ಲೈನ್ ಶಬ್ದಕೋಶ ಬಳಸುತ್ತದೆ. ಅಧಿಕಾರ ಮತ್ತು ಅಧಿಕಾರದ ಮೇಲಿನ ಹತಾಶೆ ಮತ್ತು ಕೋಪವನ್ನು ವ್ಯಕ್ತಪಡಿಸಲು ಮೀಮ್ಸ್ ಮತ್ತು ಕಿರು ವೀಡಿಯೊಗಳಲ್ಲಿ ಪಾತ್ರಗಳು, ದೃಶ್ಯಗಳು ಮತ್ತು ಸಂಭಾಷಣೆಗಳನ್ನು ಮುಕ್ತವಾಗಿ ಬಳಸಿಕೊಳ್ಳುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories