Swachh Amrit Mahotsav; ಮೈಸೂರಿಗೆ ಸ್ವಚ್ಛ ನಗರ ಗೌರವ, ಪುರಸ್ಕಾರದ ಹಿಂದಿನ ಶಕ್ತಿಗಳು

First Published | Nov 20, 2021, 9:20 PM IST

ನವದೆಹಲಿ(ನ 20) ಮೈಸೂರಿಗೆ (MYsuru) ಮತ್ತೊಮ್ಮೆ ಸ್ವಚ್ಛನಗರಿಯ ಗರಿ ದೊರೆತಿದೆ.  ಕೇಂದ್ರ ಸರ್ಕಾರ ಕೊಡುವ ಸ್ವಚ್ಛನಗರ ಪುರಸ್ಕಾರಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಪಾತ್ರವಾಗಿದ್ದು ದೆಹಲಿಯ (Newdelhi) ಕಾರ್ಯಕ್ರಮದಲ್ಲಿ ಗೌರವ ದೊರೆಯಿತು.

ದೇಶದಲ್ಲೇ ಮೈಸೂರು ಐದನೇ ಸ್ವಚ್ಛ ನಗರ ಹಿರಿಮೆಗೆ ಪಾತ್ರವಾಯಿತು ಇಂದೋರ್‌ ಗೆ ಮೊದಲ ಸ್ಥಾನ ದೊರೆಯಿತು.  ಕರ್ನಾಟಕದ 4 ನಗರ ಪಾಲಿಗೆಗಳಿಗೆ ಸ್ವಚ್ಛ ನಗರ ಪುರಸ್ಕಾರ ಸಹ ದೊರೆತಿದೆ.

ಸ್ವಚ್ಛ ನಗರಗಳ ಪಟ್ಟಿ

ಮೈಸೂರು (Mysuru), ತುಮಕೂರು (Tumkur), ಹುಬ್ಬಳಿ (Hubballi), ಬೆಂಗಳೂರು ಪಾಲಿಕೆಗಳಿಗೆ ಪುರಸ್ಕಾರ ದೊರೆತಿದೆ. ಪ್ರಶಸ್ತಿ ಸ್ವೀಕರಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಮಾತನಾಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.

Latest Videos


ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಮಿಷನ್-ಅರ್ಬನ್ 2.0 ಅಡಿಯಲ್ಲಿ ಕಸ ಮುಕ್ತ ಭಾರತದ ದೃಷ್ಟಿಗೆ ಅನುಗುಣವಾಗಿ, ಕಸ ಮುಕ್ತ ನಗರಗಳಿಗಾಗಿ ಸ್ಟಾರ್ ರೇಟಿಂಗ್ ಪ್ರೋಟೋಕಾಲ್ ಅಡಿಯಲ್ಲಿ ಪ್ರಮಾಣೀಕರಿಸಿದ ನಗರಗಳನ್ನು ಸಹ ಸಮಾರಂಭದಲ್ಲಿ ನೀಡಲಾಯಿತು.

Swachh Amrit Mahotsav

ಮೈಸೂರಿಗೆ (MYsuru) ಮತ್ತೊಮ್ಮೆ ಸ್ವಚ್ಛನಗರಿಯ ಗರಿ ದೊರೆತಿದೆ.  ಕೇಂದ್ರ ಸರ್ಕಾರ ಕೊಡುವ ಸ್ವಚ್ಛನಗರ ಪುರಸ್ಕಾರಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಪಾತ್ರವಾಗಿದ್ದು ದೆಹಲಿಯ (Newdelhi) ಕಾರ್ಯಕ್ರಮದಲ್ಲಿ ಗೌರವ ದೊರೆಯಿತು. ಅಕ್ಟೋಬರ್ 1, 2021 ರಂದು ಪ್ರಧಾನ ಮಂತ್ರಿಯವರು ಸ್ವಚ್ಛ ಭಾರತ್ ಮಿಷನ್-ಅರ್ಬನ್ (SBM-U) 2.0 ಅನ್ನು ಪ್ರಾರಂಭಿಸಿದ ನಂತರ ಇದು ಒಂದು ಮೈಲಿಗಲ್ಲು. ಸ್ವಚ್ಛ ಸರ್ವೇಕ್ಷಣ್‌ನ ಈ ಆರನೇ ಆವೃತ್ತಿಯು ವಿಶ್ವದ ಅತಿದೊಡ್ಡ ನಗರ ನೈರ್ಮಲ್ಯ ಸಮೀಕ್ಷೆಯಾಗಿ ಹೊರಹೊಮ್ಮಿದೆ. ಈ ಸಮೀಕ್ಷೆಯಿಂದಾಗಿ ಹಲವು ರಾಜ್ಯಗಳಲ್ಲಿ ಜಾಗೃತಿ ಮೂಡಿದೆ.

click me!