Nita Ambani: 40 ಲಕ್ಷದ ಬಾಟಲಿ ನೀರು ಕುಡಿದರಾ ಅಂಬಾನಿ ಪತ್ನಿ ?

Published : Nov 20, 2021, 07:03 AM ISTUpdated : Nov 20, 2021, 08:38 AM IST

ನೀತಾ ಅಂಬಾನಿಯವರು(Nita Ambani) 40 ಲಕ್ಷ ಬೆಲೆಬಾಳುವ ಬಾಟಲಿ ನೀರು ಕುಡಿದರು ಎಂಬ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್(Viral) ಆಗಿದೆ. ಈ ಬಾಟಲಿ ನೀರಿನ ಬೆಲೆ ಬರೋಬ್ಬರಿ 40 ಲಕ್ಷ. ಅಂಬಾನಿ ಪತ್ನಿ ಇಷ್ಟು ದುಬಾರಿ ನೀರು ಕುಡಿಯುತ್ತಾರಾ ?

PREV
17
Nita Ambani: 40 ಲಕ್ಷದ ಬಾಟಲಿ ನೀರು ಕುಡಿದರಾ ಅಂಬಾನಿ ಪತ್ನಿ ?

ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ ನೀತಾ ಅಂಬಾನಿ(Nita Ambani) ಅವರು ಅಕ್ವಾ ಡಿ ಕ್ರಿಸ್ಟಾಲೊ ಟ್ರಿಬುಟೊ ಎ ಮೊಡಿಗ್ಲಿಯಾನಿ ಎಂದು ಕರೆಯಲ್ಪಡುವ ವಿಶ್ವದ ಅತ್ಯಂತ ದುಬಾರಿ ಬಾಟಲ್ ನೀರನ್ನು ಕುಡಿಯುತ್ತಾರಾ ? ಈ ರೀತಿಯೊಂದು ಸುದ್ದಿ ಸದ್ದು ಮಾಡುತ್ತಿದೆ.

27

ಸೋಸೋಷಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್‌ಗಳಲ್ಲಿ ಮಾರ್ಫ್ ಮಾಡಿದ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಫೋಟೋವನ್ನು ಸ್ವತಃ ಅಂಬಾನಿ ಅವರ ಫೋಟೋ ಅಥವಾ ಉತ್ಪನ್ನದ ಫೋಟೋದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

37

ಫೋಟೋ ಮಾರ್ಫ್ ಮಾಡಿರುವುದು ಪತ್ತೆಯಾಗಿದೆ. 2015 ರಲ್ಲಿ ತೆಗೆದ ಮೂಲ ಫೋಟೋ ರಿಲಯನ್ಸ್ ಒಡೆತನದ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಅಂಬಾನಿಯವರು ನಿಂತಿರುವುದನ್ನು ತೋರಿಸುತ್ತದೆ.

47

ಮೂಲ ಫೋಟೋದಲ್ಲಿ, ಅಂಬಾನಿ ಸಾಮಾನ್ಯ ಯೂಸ್ & ಥ್ರೋ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುತ್ತಿರುವುದು ಕಂಡುಬರುತ್ತದೆ. ಕ್ಲೈಮ್‌ನಲ್ಲಿ ಹಂಚಿಕೊಂಡ ಫೋಟೋವನ್ನು ಬದಲಾಯಿಸಲಾಗಿದೆ ಎಂದು ನಾವು ಖಚಿತವಾಗಿದೆ.

57

ನೀತಾ ಅಂಬಾನಿ ಅವರು ಅಕ್ವಾ ಡಿ ಕ್ರಿಸ್ಟಾಲೊ ಟ್ರಿಬುಟೊ ಎ ಮೊಡಿಗ್ಲಿಯಾನಿ ಎಂದು ಕರೆಯಲ್ಪಡುವ ವಿಶ್ವದ ಅತ್ಯಂತ ದುಬಾರಿ ಬಾಟಲ್ ನೀರನ್ನು ಸೇವಿಸುತ್ತಾರೆ ಎಂಬ ಹೇಳಿಕೆಯೊಂದಿಗೆ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ.

67

ಇದನ್ನು 'ಕರ್ಲಿ ಟೇಲ್ಸ್' ಎಂಬ ಇನ್‌ಸ್ಟಾಗ್ರಾಮ್ ಪುಟದಿಂದ ಹಂಚಿಕೊಳ್ಳಲಾಗಿದೆ, ಅಲ್ಲಿ ಪೋಸ್ಟ್ ತೆಗೆದುಹಾಕುವ ಮೊದಲು ಸುಮಾರು 8,900 ಲೈಕ್‌ಗಳನ್ನು ಪಡೆದುಕೊಂಡಿದೆ.

77

ಅನೇಕ ವೆಬ್‌ಸೈಟ್‌ಗಳು ಫೋಟೋವನ್ನು ಸಹ ಶೇರ್ ಮಾಡಿದ್ದವು. ಇದಲ್ಲದೆ ಫೋಟೋವನ್ನು ಕೆಲವು YouTube ವೀಡಿಯೊಗಳಿಗೆ ಥಂಬ್‌ನೇಲ್ ಆಗಿಯೂ ಬಳಸಲಾಗಿದೆ. 
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಚಿತ್ರವನ್ನು ಹಂಚಿಕೊಂಡಿದ್ದಾರೆ.

Read more Photos on
click me!

Recommended Stories