ಸರ್ಕಾರವು ಉಜ್ವಲ ಯೋಜನೆಯಡಿ ನೀಡಲಾಗುತ್ತಿದ್ದ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್‌ಗಳ ವಾರ್ಷಿಕ ಮಿತಿಯನ್ನು 9 ರಿಂದ 4 ಕ್ಕೆ ಇಳಿಸಿದೆ. ಫಲಾನುಭವಿಗಳು ಸರಾಸರಿ 4 ಸಿಲಿಂಡರ್‌ಗಳನ್ನು ಬಳಸುತ್ತಿರುವುದೇ ಈ ನಿರ್ಧಾರಕ್ಕೆ ಕಾರಣ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಗೃಹಬಳಕೆ, ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ಸತತ ಏರಿಕೆ ಬೆನ್ನಲ್ಲೇ, ಇದೀಗ ಉಜ್ವಲ ಯೋಜನೆಯ ಅಡಿ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದ್ದ 14.2 ಕೆ.ಜಿ. ಸಿಲಿಂಡರ್ ಬಳಕೆ ಮಿತಿಯನ್ನು 9ರಿಂದ 4ಕ್ಕೆ ಇಳಿಸಲಾಗಿದೆ.
23
ಸರ್ಕಾರದಿಂದ ಮಾಹಿತಿ
ಉಜ್ವಲ ಯೋಜನೆ ಫಲಾನುಭವಿಗಳು ವಾರ್ಷಿಕ ಸರಾಸರಿ 4 ಸಿಲಿಂಡರ್ ಬಳಸುತ್ತಿರುವ ಹಿನ್ನೆಲೆಯಲ್ಲಿ ಅಷ್ಟೇ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ. ಒಂದು ಸಿಲಿಂಡರ್ ಪೂರೈಸಲು ಸರ್ಕಾರಕ್ಕೆ 1,600 ರು. ವೆಚ್ಚವಾಗುತ್ತಿದ್ದು, ಸಬ್ಸಿಡಿ ದರದಲ್ಲಿ ಅದನ್ನು ಪಡೆಯುಯುವವರಿಗೆ 1 ಸಾವಿರ ರು. ಲಾಭವಾಗುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
2016ರಲ್ಲಿ ಯೋಜನೆ ಶುರುವಾದಾಗ ವರ್ಷಕ್ಕೆ 12 ಸಿಲಿಂಡರ್‌ಗಳನ್ನು ನೀಡಲಾಗುತ್ತಿತ್ತು. ಅದನ್ನು ಕಳೆದ ವರ್ಷ 9ಕ್ಕೆ ಇಳಿಸಲಾಗಿತ್ತು. ಇದೀಗ ಅರ್ಧಕ್ಕಿಂತ ಕಡಿಮೆ, 4ಕ್ಕೆ ಮಾಡಲಾಗಿದೆ. ಮೊದಲು ಇದ್ದ 200 ರು. ಸಬ್ಸಿಡಿಯನ್ನು 3 ವರ್ಷಗಳ ಹಿಂದೆ 300 ರು.ಗೆ ಏರಿಕೆ ಮಾಡಲಾಗಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ 944.50 ರು.ಗೆ ಬೆಲೆಯ ಸಿಲಿಂಡರ್ ಸಬ್ಸಿಡಿ ಅಡಿಯಲ್ಲಿ 644.50 ರು.ಗೆ ಸಿಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ