Expensive Plant: ಚಿನ್ನಕ್ಕಿಂತಲೂ ದುಬಾರಿ ಈ ಗಿಡ, ಎಲ್ಲಿ ಸಿಗುತ್ತೆ? ಎಷ್ಟಿದೆ ಬೆಲೆ?

Published : Aug 12, 2026, 02:58 PM IST

ಹಿಮಾಲಯದಲ್ಲಿ ಸಿಗುವ ಒಂದು ಅಪರೂಪದ ಮತ್ತು ಅತ್ಯಂತ ಬೆಲೆಬಾಳುವ ಔಷಧೀಯ ಸಸ್ಯ. ಮಲೇರಿಯಾ, ಕಣ್ಣಿನ ಸಮಸ್ಯೆಗಳಂತಹ ಹಲವು ರೋಗಗಳಿಗೆ ರಾಮಬಾಣವಾಗಿರುವ ಈ ಗಿಡವು, ಅತಿಯಾದ ಬಳಕೆ ಮತ್ತು ಅಕ್ರಮ ಸಾಗಾಟದಿಂದಾಗಿ ಇಂದು ಅಳಿವಿನಂಚಿನಲ್ಲಿದೆ.

PREV
15
ಬೆಲೆಬಾಳುವ ಗಿಡ ಮೂಲಿಕೆ

ಜಗತ್ತಿನಲ್ಲೇ ಅತ್ಯಂತ ಬೆಲೆಬಾಳೋ ಲೋಹ ಅಂದ್ರೆ ಚಿನ್ನ ಅಂತ ನಮಗೆಲ್ಲಾ ಗೊತ್ತು. ಆದ್ರೆ, ನಮ್ಮ ದೇಶದಲ್ಲಿ ಚಿನ್ನಕ್ಕಿಂತ ಸಾವಿರ ಪಟ್ಟು ಹೆಚ್ಚು ಬೆಲೆಬಾಳೋ ಒಂದು ಗಿಡ ಇದೆ ಅನ್ನೋದು ನಿಮಗೆ ಗೊತ್ತಾ? ಈ ಗಿಡದ ಎಲೆಗಳಿಗೆ ಸಾವಿರಾರು ರೂಪಾಯಿ ಬೆಲೆಯಿದೆ. ಚೀನಾ ಕೂಡ ಈ ಸಸ್ಯವನ್ನು ಅಕ್ರಮವಾಗಿ ಕದ್ದು, ಮಾರಾಟ ಮಾಡುತ್ತಿದೆ. ಆ ಗಿಡದ ಹೆಸರೇ 'ಮಿಶ್ಮಿ ತೀತಾ'. ಅಷ್ಟಕ್ಕೂ ಈ ಗಿಡ ಎಲ್ಲಿ ಸಿಗುತ್ತೆ? ಇದರ ವಿಶೇಷತೆ ಏನು? ಇದಕ್ಕೆ ಯಾಕಿಷ್ಟು ಬೆಲೆ? ಆ ವಿವರ ಇಲ್ಲಿದೆ ನೋಡಿ.

25
ಬೆಲೆಬಾಳುವ ಔಷಧೀಯ ಸಸ್ಯ

ಮಿಶ್ಮಿ ತೀತಾ ಒಂದು ಅಪರೂಪದ ಮತ್ತು ಅತ್ಯಂತ ಬೆಲೆಬಾಳುವ ಔಷಧೀಯ ಸಸ್ಯ. ಇದರ ವೈಜ್ಞಾನಿಕ ಹೆಸರು 'ಕಾಪ್ಟಿಸ್ ತೀತಾ'. ಇದು ನಮಗೆ ಹಿಮಾಲಯದಲ್ಲಿ ಮಾತ್ರ ಸಿಗುತ್ತದೆ. ಇದರ ಬೇರುಗಳು ತುಂಬಾ ಕಹಿಯಾಗಿರುತ್ತವೆ. ಈಶಾನ್ಯ ಭಾರತದ ಭಾಷೆಗಳಲ್ಲಿ 'ತೀತಾ' ಅಂದ್ರೆ ಕಹಿ ಅಂತ ಅರ್ಥ. ಅದಕ್ಕೇ ಇದಕ್ಕೆ ಈ ಹೆಸರು ಬಂದಿದೆ.

35
ಯಾವ ರೋಗಗಳಿಗೆ ರಾಮಬಾಣ?

ಸಾಂಪ್ರದಾಯಿಕ ಆಯುರ್ವೇದ, ಚೀನೀ ವೈದ್ಯ ಪದ್ಧತಿ ಮತ್ತು ಈಶಾನ್ಯ ಭಾರತದ ಬುಡಕಟ್ಟು ವೈದ್ಯಕೀಯದಲ್ಲಿ ಇದನ್ನು ಹಲವು ಚಿಕಿತ್ಸೆಗಳಿಗೆ ಬಳಸುತ್ತಾರೆ. ಈ ಸಸ್ಯದ ಎಲೆಗಳಲ್ಲಿ 'ಬರ್ಬೆರಿನ್' ಎಂಬ ಪ್ರಮುಖ ರಾಸಾಯನಿಕವಿದೆ. ಇದರಿಂದಾಗಿ ಮಲೇರಿಯಾ, ಕಣ್ಣಿನ ಸಮಸ್ಯೆಗಳು, ಹೊಟ್ಟೆಯ ತೊಂದರೆಗಳು, ಜ್ವರ ಮತ್ತು ಬ್ಯಾಕ್ಟೀರಿಯಾ ಸೋಂಕುಗಳನ್ನು ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ.

45
ಎಲ್ಲಿ ಸಿಗುತ್ತೆ?

ಇದು ಅರುಣಾಚಲ ಪ್ರದೇಶದ 'ಮಿಶ್ಮಿ ಬೆಟ್ಟ'ಗಳಲ್ಲಿ (Mishmi Hills) ಹೆಚ್ಚಾಗಿ ಬೆಳೆಯುತ್ತದೆ. ಜೊತೆಗೆ ಚೀನಾದ ಟಿಬೆಟ್ ಗಡಿ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮ್ಯಾನ್ಮಾರ್ ಗಡಿ ಅರಣ್ಯಗಳಲ್ಲಿಯೂ ಅಪರೂಪವಾಗಿ ಕಾಣಸಿಗುತ್ತದೆ. ಸಮುದ್ರ ಮಟ್ಟದಿಂದ ಸುಮಾರು 2,000 ರಿಂದ 3,000 ಮೀಟರ್ ಎತ್ತರದ, ತೇವಾಂಶ ಮತ್ತು ತಂಪಾಗಿರುವ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮಾತ್ರ ಇದು ಬೆಳೆಯುತ್ತದೆ. ಅತಿಯಾದ ಬಳಕೆ ಮತ್ತು ಅಕ್ರಮ ಸಾಗಾಟದಿಂದಾಗಿ, ಈ ಸಸ್ಯ ಈಗ ಅಳಿವಿನಂಚಿನಲ್ಲಿರುವ ಪ್ರಭೇದಗಳ ಪಟ್ಟಿಗೆ ಸೇರಿದೆ.

55
ಬೆಲೆ ಎಷ್ಟು?

ಭಾರತೀಯ ಮಾರುಕಟ್ಟೆಯಲ್ಲಿ ಮಿಶ್ಮಿ ತೀತಾ ಬೆಲೆಯು ಅದರ ಗುಣಮಟ್ಟ ಮತ್ತು ಲಭ್ಯತೆಯನ್ನು ಅವಲಂಬಿಸಿ ಪ್ರತಿ ಕಿಲೋಗ್ರಾಂಗೆ ಸುಮಾರು ₹3,000 ರಿಂದ ₹9,000 ವರೆಗೆ ಇರುತ್ತದೆ. ಉತ್ತಮ ಗುಣಮಟ್ಟದ ಒಣಗಿದ ಬೇರುಗಳ (Dry Roots) ಸಗಟು ಮಾರುಕಟ್ಟೆ ಬೆಲೆ ಸಾಮಾನ್ಯವಾಗಿ ಪ್ರತಿ ಕೆಜಿಗೆ ₹4,000 ರಿಂದ ₹5,000 ಇರುತ್ತದೆ.

ಅತ್ಯಂತ ಅಪರೂಪದ ಮತ್ತು ಸಂಸ್ಕರಿಸಿದ ಆರ್ಗಾನಿಕ್ ಮೆಡಿಸಿನ್ ಗ್ರೇಡ್ ಬೇರುಗಳ ಬೆಲೆ ಪ್ರತಿ ಕೆಜಿಗೆ ₹8,000 - ₹9,000 ಅಥವಾ ಅದಕ್ಕಿಂತ ಹೆಚ್ಚಿರಬಹುದು. ಚಿಲ್ಲರೆಯಾಗಿ ಪುಡಿ (Powder) ರೂಪದಲ್ಲಿ ಖರೀದಿಸಿದರೆ 100 ಗ್ರಾಂಗೆ ₹300 ರಿಂದ ₹500 ವರೆಗೆ ಇರುತ್ತದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories