ಹೃದಯಾಘಾತ: ಶಾರ್ಜಾದಲ್ಲಿ 24ರ ಹರೆಯದ ಮಲೆಯಾಳಂ ನಟಿ ಲಕ್ಷ್ಮಿಕಾ ಸಂಜೀವನ್ ನಿಧನ

First Published | Dec 8, 2023, 3:15 PM IST

ಮಲೆಯಾಳಂ ಸಿನಿಮಾ ರಂಗದ ಯುವ ನಟಿ ಕೇವಲ 24ರ ಹರೆಯದ ಲಕ್ಷ್ಮಿಕಾ ಸಂಜೀವನ್ ಅವರು ದಿಢೀರ್ ಹೃದಯಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. 
 

ಮಲೆಯಾಳಂ ಸಿನಿಮಾ ರಂಗದ ಯುವ ನಟಿ ಕೇವಲ 24ರ ಹರೆಯದ ಲಕ್ಷ್ಮಿಕಾ ಸಂಜೀವನ್ ಅವರು ದಿಢೀರ್ ಹೃದಯಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. 

ಅವರು ಹಲವು ಸಿರೀಯಲ್‌ಗಳು ಹಾಗೂ ಸಿನಿಮಾಗಳಲ್ಲಿ ನಟಿಸುವ ಮೂಲಕ ಕೇರಳದಲ್ಲಿ ಮನೆ ಮಾತಾಗಿದ್ದರು.  ಶಾರ್ಜಾದಲ್ಲಿ ಅವರು ಹಠಾತ್ ಹೃದಯಾಘಾತಕ್ಕೀಡಾಗಿ ನಿಧನರಾಗಿದ್ದಾರೆ 

Tap to resize

ಮಲೆಯಾಳಂನ ಹಲವು ಸಿರೀಯಲ್‌ಗಳಲ್ಲಿ ನಟಿಸಿದ್ದ ಲಕ್ಷ್ಮಿಕಾ ಸಂಜೀವನ್ ಅವರು ಕಾಕ ಸಿರೀಯಲ್‌ನ ಪಂಚಮಿ ಪಾತ್ರದಿಂದ ಸಾಕಷ್ಟು ಜನಪ್ರಿಯರಾಗಿದ್ದರು. 

ಸೀರಿಯಲ್ ಮಾತ್ರವಲ್ಲದೇ ಸಿನಿಮಾಗಳಲ್ಲಿ ನಟಿಸಿದ್ದ ಲಕ್ಷಿಕಾ ಅವರು ಒರು ಯಮಂಡನ್ ಪ್ರೇಮಕಥಾ, ಪಂಚವರ್ಣತತ, ಸೌದಿ ವೆಲ್ಲಕ್ಕ, ಪುಳಯಮ್ಮ, ಉಯಿರೆ, ಒರು ಕುಟ್ಟಂಡನ್ ಬ್ಲಾಗ್ ಹಾಗೂ ನಿತ್ಯಹರಿತ ನಾಯಗನ್ ಮುಂತಾದ ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿದ್ದರು. 

ಕೊಚ್ಚಿ ಜಿಲ್ಲೆಯ ವಜವೆಲ್ಲಿಲ್ ನಿವಾಸಿ ಸಂಜೀವನ್ ಹಾಗೂ ಮಿಲಿತಾ ದಂಪತಿಯ ಪುತ್ರಿಯಾದ ಲಕ್ಷ್ಮಿಕಾ ಅವರು ಅರಬ್‌ ರಾಷ್ಟ್ರ ಶಾರ್ಜಾದಲ್ಲಿ ಬ್ಯಾಂಕಿಂಗ್ ಸೆಕ್ಟರ್‌ನಲ್ಲಿ ಉದ್ಯೋಗ ಮಾಡುತ್ತಿದ್ದರು. 

ಯುವನಟಿಯ ಈ ಹಠಾತ್ ನಿಧನ ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.  ಅನೇಕ ಅಭಿಮಾನಿಗಳು ಯುವ ನಟಿ ಲಕ್ಷ್ಮಿಕಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. 

Latest Videos

click me!