ಜನಸಂಖ್ಯೆಯಲ್ಲಿ ಚೀನಾ ಹಿಂದಿಕ್ಕಿದ ಭಾರತ, ಯಾವ ಮೆಟ್ರೋ ಸಿಟಿಯಲ್ಲಿ ಜನನ ಪ್ರಮಾಣ ಹೆಚ್ಚು?

Published : May 31, 2025, 10:25 PM IST

ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ. ಭಾರತದ ಜನಸಂಖ್ಯೆಗೆ ಹೆಚ್ಚಿನ ಕೊಡುಗೆ ನೀಡುತ್ತಿರುವ ಮೆಟ್ರೋ ಸಿಟಿ ಯಾವುದು? ಅತೀ ಕಡಿಮೆ ಜನನ ಪ್ರಮಾಣದ ನಗರ ಯಾವುದು?

PREV
15

ಭಾರತದ ಜನಸಂಖ್ಯೆ ಕುರಿತು ಹಲವು ವರ್ಷಗಳಿಂದ ಭಾರಿ ಚರ್ಚೆಯಾಗುತ್ತಿದೆ. ಇದೀಗ ವಿಶ್ವದಲ್ಲಿ ಅತೀಹೆಚ್ಚು ಜನಸಂಖ್ಯೆ ಹೊಂದಿದೆ ರಾಷ್ಟ್ರ ಭಾರತ. ಚೀನಾದ ಪಟ್ಟವನ್ನು ಭಾರತ ಅಲಂಕರಿಸಿದೆ. ಭಾರತದ ಜನಸಂಖ್ಯೆ ಇದೀಗ 1,419,316,933. ಚೀನಾ ಜನಸಂಖ್ಯೆ 1,407,181,209. ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚುತ್ತಲೇ ಇದೆ. ಚೀನಾವನ್ನು ಹಿಂದಿಕ್ಕಿ ಭಾರತ ನಂಬರ್ 1 ಆಗಲು ಕೆಲ ಮೆಟ್ರೋ ಸಿಟಿ ಪ್ರಮುಖ ಕೊಡುಗೆ ನೀಡುತ್ತಿದೆ. ಭಾರತದ ಮೆಟ್ರೋ ಸಿಟಿಗಳಲ್ಲಿ ಅತೀ ಹೆಚ್ಚು ಜನನ ಪ್ರಮಾಣದ ನಗರ ಯಾವುದು ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ

25

ಭಾರತದ ಜನಸಂಖ್ಯೆ, ಅತೀ ಹಚ್ಚು ಜನನ ಪ್ರಮಾಣದ ಮೆಟ್ರೋ ಸಿಟಿ

ಕೆಲವು ನಗರಗಳಲ್ಲಿ ಸಂತಾನೋತ್ಪತ್ತಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಭಾರತದಲ್ಲಿ ಅತೀ ಹೆಚ್ಚು ಜನನ ಪ್ರಮಾಣವಿರುವ ನಗರವೆಂದರೆ ಅದು ಚೆನ್ನೈ. ಇಲ್ಲಿ TFR(city’s Total Fertility Rate) 1.65ರಷ್ಟಿದ್ದು ಇತರ ನಗರಗಳಿಗೆ ಹೋಲಿಸಿದರೆ ಈ ನಗರದಲ್ಲಿ ಜನನ ಪ್ರಮಾಣ ಅಧಿಕವಿದೆ.

35

ಚೆನ್ನೈ ನಂತರ ಅತಿ ಹೆಚ್ಚು ಜನನ ಪ್ರಮಾಣವಿರುವ ನಗರಗಳೆಂದರೆ ದೆಹಲಿ, ಹೈದರಾಬಾದ್, ಮುಂಬೈ, ಕೋಲ್ಕತ್ತಾ. ಹಲವು ನಗರಗಳಲ್ಲಿ ಜನಸಂಖ್ಯಾ ಅಸಮತೋಲನ ಕೂಡ ವರದಿಯಾಗಿದೆ. ಈ ಕುರಿತು ಹಲವು ಮುಖಂಡರು ಈಗಾಗಲೇ ಕಳವಳ ವ್ಯಕ್ತಪಡಿಸಿದ್ದರು. ಇದೀಗ ಅಧ್ಯಯನ ವರದಿಗಳು ಜನಸಂಖ್ಯಾ ಅಸಮತೋಲನದ ಕುರಿತು ಬೆಳಕು ಚೆಲ್ಲಿದೆ. ಇತ್ತ ನಗರಗಳಲ್ಲಿನ ಜನಸಂಖ್ಯಾ ಪ್ರಮಾಣದಲ್ಲಿ ಕೆಲ ನಗರಗಳಲ್ಲಿ ಗಣನೀಯವಾಗಿ ಕುಸಿತ ಕಂಡಿದೆ. ಅಚ್ಚರಿಯೆಂದರೆ ಗುಜರಾತ್‌, ಅಹಮದಾಬಾದ್‌ ಈ ನಗರಗಳಲ್ಲಿ ಜನನ ಪ್ರಮಾಣ ಕಡಿಮೆಯಾಗುತ್ತಿದೆ.

45

ದಕ್ಷಿಣ ಭಾರತದ ಹಲವು ರಾಜ್ಯಗಳು ಹೆಚ್ಚು ಮಕ್ಕಳನ್ನು ಹಡೆಯುವಂತೆ ಸಲಹೆ ನೀಡುತ್ತಿದೆ, ಇತ್ತೀಚೆಗೆ ತಮಿಳುನಾಡಿನ ಮುಖ್ಯಮಂತ್ರಿ ಮನೆಗೆ ಹದಿನಾರು ಮಕ್ಕಳನ್ನು ಪಡೆಯುವುದರ ಬಗ್ಗೆ ಚಿಂತಿಸಬೇಕಾಗಿದೆ ಎಂಬುವುದಾಗಿ ಹೇಳಿದ್ದರು. ಆಂಧ್ರ ಪ್ರದೇಶ ಕೂಡ ಜನನ ಪ್ರಮಾಣ ಹೆಚ್ಚಿಸಲು ಹಲವು ಯೋಜನೆಗಳನ್ನು ರೂಪಿಸುತ್ತಿದೆ.

55

ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ 2ನೇ ದೇಶ ಭಾರತ, ಮೊದಲ ಸ್ಥಾನದಲ್ಲಿ ಚೀನಾವಿದೆ. ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದರು ಕೆಲವು ಕಡೆ ಜನನ ಪ್ರಮಾಣ ತುಂಬಾನೇ ಕಡಿಮೆಯಾಗುತ್ತಿದೆ.

Read more Photos on
click me!

Recommended Stories