ತಮಿಳುನಾಡಿನ ದಂತ ಚಿಕಿತ್ಸಾಲಯದಿಂದ ಮಾರಕ ಬ್ಯಾಕ್ಟೀರಿಯಾ: 8 ಸಾವು!

Published : May 30, 2025, 06:45 PM ISTUpdated : May 30, 2025, 06:50 PM IST

ತಿರುಪತ್ತೂರಿನ ಒಂದು ದಂತ ಚಿಕಿತ್ಸಾಲಯದಲ್ಲಿ ಶುದ್ಧೀಕರಣವಿಲ್ಲದ ಸಲೈನ್ ಬಾಟಲಿಗಳ ಬಳಕೆಯಿಂದ ಮಾರಕ ಬ್ಯಾಕ್ಟೀರಿಯಾ ಹರಡಿ ಎಂಟು ಮಂದಿ ಸಾವಿಗೀಡಾಗಿದ್ದಾರೆ. 'ದಿ ಲ್ಯಾನ್ಸೆಟ್' ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

PREV
15

2023 ರಲ್ಲಿ ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ವಾಣಿಯಂಬಾಡಿ ಪಟ್ಟಣದಲ್ಲಿನ ಒಂದು ದಂತ ಚಿಕಿತ್ಸಾಲಯದಿಂದ ಮೆದುಳಿಗೆ ಸೋಂಕು ಉಂಟುಮಾಡುವ ಅಪಾಯಕಾರಿ ಬ್ಯಾಕ್ಟೀರಿಯಾ ಹರಡಿದ್ದು, ಈ ಸೋಂಕಿಗೆ ಎಂಟು ಮಂದಿ ಪ್ರಾಣ ಕಳೆದುಕೊಂಡಿರುವುದಾಗಿ 'ದಿ ಲ್ಯಾನ್ಸೆಟ್' ಎಂಬ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟಗೊಂಡ ಅಧ್ಯಯನದಲ್ಲಿ ಬಹಿರಂಗವಾಗಿದೆ. ಈ ಪ್ರಕರಣವನ್ನು ಯಾವುದೇ ಸರ್ಕಾರಿ ಇಲಾಖೆ ಅಧಿಕೃತವಾಗಿ ವರದಿ ಮಾಡಿಲ್ಲ. ಆದರೆ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು (CMC), ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ತಮಿಳುನಾಡು ಸರ್ಕಾರದ ಸಾರ್ವಜನಿಕ ಆರೋಗ್ಯ ವಿಭಾಗ ಸೇರಿ ಹಲವಾರು ತಜ್ಞ ವೈದ್ಯರ ತಂಡವು ತನಿಖೆ ನಡೆಸಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.

25

ಸೋಂಕು ಹೇಗೆ ಹರಡಿತು?

ಈ ದಂತ ಕ್ಲಿನಿಕ್‌ನಲ್ಲಿ ಶುದ್ಧೀಕರಣವಿಲ್ಲದ ಸಲೈನ್ ಬಾಟಲಿಗಳನ್ನು ಬಳಸಲಾಗುತ್ತಿತ್ತು. “ಪೆರಿಯೋಸ್ಟಿಯಲ್ ಲಿಫ್ಟ್” ಎಂಬ ಉಪಕರಣದಿಂದ ಈ ಬಾಟಲಿಗಳನ್ನು ತೆರೆಯಲಾಗುತ್ತಿದ್ದು, ಉಪಯೋಗಿಸಿದ ಬಳಿಕ ಬಾಟಲಿಗಳನ್ನು ಸರಿಯಾಗಿ ಮುಚ್ಚಲಾಗುತ್ತಿರಲಿಲ್ಲ. ಪರಿಣಾಮ, ಇವು ಬ್ಯಾಕ್ಟೀರಿಯಾ ಹುಟ್ಟಲು ಮೂಲವಾಗಿ ಪರಿಣಮಿಸಿದವು. ಸೋಂಕು ಬಂದವರಲ್ಲಿ 10 ರೋಗಿಗಳು ಈ ಕ್ಲಿನಿಕ್‌ಗೆ ಭೇಟಿ ನೀಡಿದವರಾಗಿದ್ದು, ಅವರಲ್ಲಿ ಎಂಟು ಮಂದಿ ಸಾವಿಗೀಡಾದರು. ಈ ಅಂಕೆ 80% ಮರಣ ಪ್ರಮಾಣವನ್ನೇ ತೋರಿಸುತ್ತದೆ.

35

ಈ ಬ್ಯಾಕ್ಟೀರಿಯಾ ಹೇಗೆ ಪ್ರಭಾವ ಬೀರುತ್ತದೆ?

‘ಬರ್ಖೋಲ್ಡೇರಿಯಾ ಸ್ಯೂಡೋಮಲ್ಲೈ’ ಎಂಬ ಬ್ಯಾಕ್ಟೀರಿಯಾ “ನ್ಯೂರೋಮೆಲಿಯೊಯ್ಡೋಸಿಸ್” ಎಂಬ ತೀವ್ರ ಮೆದುಳಿನ ಸೋಂಕಿಗೆ ಕಾರಣವಾಗುತ್ತದೆ. ಇದು ನೇರವಾಗಿ ನರ ಮಾರ್ಗದ ಮೂಲಕ ಮೆದುಳು ಮತ್ತು ಬೆನ್ನುಹುರಿಯ ಕಡೆಗೆ ಹರಡುತ್ತದೆ. ರೋಗಲಕ್ಷಣಗಳಲ್ಲಿ ಜ್ವರ, ತಲೆನೋವು, ಮಾತಿನಲ್ಲಿ ಗೊಂದಲ, ದೃಷ್ಟಿ ಸಮಸ್ಯೆ ಹಾಗೂ ಕೆಲವೊಮ್ಮೆ ಮುಖದ ಪಾರ್ಶ್ವವಾಯು ಕೂಡ ಕಾಣಿಸುತ್ತವೆ. ಜುಲೈ 2022 ರಿಂದ ಏಪ್ರಿಲ್ 2023 ರವರೆಗೆ 21 ರೋಗಿಗಳನ್ನು ಗುರುತಿಸಲಾಯಿತು. ಅವರಲ್ಲಿ 10 ಜನ ದಂತ ಕ್ಲಿನಿಕ್‌ಗೆ ಹೋಗಿದ್ದರೆ, ಉಳಿದವರು ಅಲ್ಲದವರು. ಕ್ಲಿನಿಕ್‌ಗೆ ಹೋಗಿದವರಲ್ಲಿ ಮರಣ ಪ್ರಮಾಣ ಹೆಚ್ಚು (80%) ಆಗಿದ್ದು, ಅವರು ಚಿಕಿತ್ಸೆ ಪಡೆದು ಕಡಿಮೆ ಸಮಯದಲ್ಲಿ ಸಾವಿಗೀಡಾದರು. ಕ್ಲಿನಿಕ್‌ಗೆ ಹೋಗದವರು ಹೆಚ್ಚು ದಿನ ಬದುಕಿದ್ದರು.

45

ಚಿಕಿತ್ಸೆ ಮತ್ತು ತನಿಖೆಯ ಪ್ರಗತಿ

ಕ್ಲಿನಿಕ್ ಮುಚ್ಚುವ ಮುನ್ನವೇ ಅದನ್ನು ಸ್ವಚ್ಚಗೊಳಿಸಲಾಗಿತ್ತು. ನೀರು ಸರಬರಾಜು ನಿಲ್ಲಿಸಲಾಗಿತ್ತು ಮತ್ತು ಸಾರ್ವಜನಿಕ ಆಕ್ರೋಶದ ಮಧ್ಯೆ ಕ್ಲಿನಿಕ್‌ ಅನ್ನು ಬಂದ್ ಮಾಡಲಾಯಿತು. ಆದರೂ, ಬ್ಯಾಕ್ಟೀರಿಯಾ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಯಿತು. ತೆರೆದ ಬಾಟಲಿಗಳಲ್ಲಿ ಬ್ಯಾಕ್ಟೀರಿಯಾ ಕಂಡುಬಂದರೂ, ಹೊಸ ಬಾಟಲಿಗಳಲ್ಲಿ ಸೋಂಕು ಇರಲಿಲ್ಲ. ಕ್ಲಿನಿಕ್‌ಗೆ ಹೋಗದ ರೋಗಿಗಳಲ್ಲಿ ಮುಖದ ಉರಿಯೂತ, ಲಾಲಾರಸ ಗ್ರಂಥಿಯ ಊತ ಮತ್ತು ಇತರ ತೀವ್ರ ತಲೆ ಕುತ್ತಿಗೆಯ ಸೋಂಕುಗಳು ಕಂಡುಬಂದವು.

55

ಆರೋಗ್ಯ ಇಲಾಖೆಯ ಎಚ್ಚರಿಕೆ

ಈ ಪ್ರಕರಣದ ನಂತರ, ತಮಿಳುನಾಡು ಸಾರ್ವಜನಿಕ ಆರೋಗ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ವೈದ್ಯಕೀಯ ಕೇಂದ್ರಗಳು ಮತ್ತು ಹತ್ತಿರದ ಜಿಲ್ಲೆಗಳೊಂದಿಗೆ ಸಭೆ ನಡೆಸಿತು. ವೈದ್ಯರ ತಂಡವು ಕ್ಲಿನಿಕಲ್ ಮತ್ತು ರೋಗ ಹರಡುವಿಕೆ ಕುರಿತ ವಿವರಗಳನ್ನು ಸಂಗ್ರಹಿಸಿ ಸಂಶೋಧನೆ ನಡೆಸಿತು. ಈ ಘಟನೆ ಆರೋಗ್ಯ ಸೇವಾ ಕೇಂದ್ರಗಳಲ್ಲಿ ಸೋಂಕು ನಿಯಂತ್ರಣ ಕ್ರಮಗಳು ಎಷ್ಟು ಅಗತ್ಯ ಎಂಬುದನ್ನು ನೆನಪಿಸುತ್ತಿದೆ ಎಂದು ರಾಜ್ಯ ಆರೋಗ್ಯ ನಿರ್ದೇಶಕ ಡಾ. ಟಿ.ಎಸ್. ಸೆಲ್ವವಿನಾಯಗಂ ಹೇಳಿದ್ದಾರೆ.

Read more Photos on
click me!

Recommended Stories