ಪ್ರಧಾನಿ ಮೋದಿಗೆ ಬಹಿರಂಗ ಬೆದರಿಕೆ ಹಾಕಿದ ಸೈಫುಲ್ಲಾ ಸೈಫ್; ಗಜ್ವಾ-ಎ-ಹಿಂದ್‌ಗೆ ಕರೆ, ಯಾರು ಈ ಉಗ್ರ?

Published : Jan 06, 2026, 08:58 PM IST

ಸೈಫುಲ್ಲಾ ಸೈಫ್ ಯಾರು: ಪಾಕಿಸ್ತಾನಿ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾದ ಬಹಾವಲ್‌ಪುರ್ ಮುಖ್ಯಸ್ಥ ಸೈಫುಲ್ಲಾ ಸೈಫ್, ಭಾರತಕ್ಕೆ ಬಹಿರಂಗವಾಗಿ ಬೆದರಿಕೆ ಹಾಕಿ 'ಗಜ್ವಾ-ಎ-ಹಿಂದ್'ಗೆ ಕರೆ ನೀಡಿದ್ದಾನೆ. ಸೈಫ್ ಭಾರತೀಯ ನಾಯಕರನ್ನು ಕಾಫಿರ್ ಎಂದು ಕರೆದು, ಅವರ ವಿರುದ್ಧ ವಿಷ ಕಾರಿ ಹತ್ಯೆ ಬೆದರಿಕೆ ಹಾಕಿದ್ದಾನೆ.

PREV
15

ಭಾರತದ ವಿರುದ್ಧ ಜಿಹಾದ್ ಆರಂಭಿಸುವ ಮಾತು 

ನೂರಾರು ಉಗ್ರರ ಗುಂಪನ್ನುದ್ದೇಶಿಸಿ ಮಾತನಾಡಿರುವ ಲಷ್ಕರ್ ಕಮಾಂಡರ್ ಸೈಫುಲ್ಲಾ ಸೈಫ್, ಭಾರತದ ವಿರುದ್ಧ ಜಿಹಾದ್ ಆರಂಭಿಸಲು ಸಮಯ ಬಂದಿದೆ ಎಂದಿದ್ದಾನೆ. ಭಾರತದ ನಾಯಕರನ್ನು ಕಾಫಿರ್ ಎಂದು ಕರೆದು, ಅವರೆಲ್ಲರೂ ಹತ್ಯೆಗೆ ಅರ್ಹರು ಎಂದಿದ್ದಾನೆ.

25

'ಗಜ್ವಾ-ಎ-ಹಿಂದ್'ಗೆ ಪಾಕಿಸ್ತಾನಿ ಸೇನೆ ಸಿದ್ಧ

ಭಾರತದ ವಿರುದ್ಧ ವಿಷ ಕಾರಿದ ಸೈಫುಲ್ಲಾ, ಪ್ರಾದೇಶಿಕ ಸಮೀಕರಣಗಳು ವೇಗವಾಗಿ ಬದಲಾಗುತ್ತಿವೆ ಮತ್ತು ಇಂದು ಬಾಂಗ್ಲಾದೇಶ ನಮ್ಮೊಂದಿಗೆ ನಿಂತಿದೆ. ಭಾರತದ ವಿರುದ್ಧ 'ಗಜ್ವಾ-ಎ-ಹಿಂದ್'ಗೆ ನಮ್ಮ ಪಾಕಿಸ್ತಾನಿ ಸೇನೆಯೂ ಸಿದ್ಧವಾಗಿದೆ ಎಂದಿದ್ದಾನೆ.

35

ಸೈಫುಲ್ಲಾ ಪ್ರಧಾನಿ ಮೋದಿಗೂ ಬೆದರಿಕೆ

ಗುಂಪಿನಲ್ಲಿದ್ದ ಉಗ್ರರನ್ನು ಪ್ರಚೋದಿಸಿದ ಲಷ್ಕರ್ ಕಮಾಂಡರ್ ಸೈಫುಲ್ಲಾ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಬೆದರಿಕೆ ಹಾಕಿದ್ದಾನೆ. ಲಷ್ಕರ್ ಉಗ್ರನ ವಿಡಿಯೋ ಹೊರಬಂದ ನಂತರ ಭಾರತೀಯ ಭದ್ರತಾ ಏಜೆನ್ಸಿಗಳು ಎಚ್ಚೆತ್ತುಕೊಂಡಿವೆ.

45

ಪಾಕಿಸ್ತಾನದ ಬಣ್ಣ ಬಯಲು

ಪಾಕಿಸ್ತಾನದ ನೆಲದಿಂದ ಭಾರತದ ವಿರುದ್ಧ ಉಗ್ರರ ಇಂತಹ ಹೇಳಿಕೆಗಳು, ಉಗ್ರ ಸಂಘಟನೆಗಳನ್ನು ನಿಯಂತ್ರಿಸುವ ಅದರ ದೊಡ್ಡ ಮಾತುಗಳ ಬಣ್ಣವನ್ನು ಮತ್ತೊಮ್ಮೆ ಬಯಲು ಮಾಡಿವೆ.

55

ಯಾರು ಈ ಸೈಫುಲ್ಲಾ ಸೈಫ್?

ಸೈಫುಲ್ಲಾ ಸೈಫ್, ಜೈಶ್-ಎ-ಮೊಹಮ್ಮದ್ ಉಗ್ರ ಹಫೀಜ್ ಸಯೀದ್‌ನ ಆಪ್ತ. ಹಫೀಜ್, ಪಾಕಿಸ್ತಾನದ ಬಹಾವಲ್‌ಪುರ್‌ನಲ್ಲಿ ಲಷ್ಕರ್-ಎ-ತೊಯ್ಬಾದ ಜವಾಬ್ದಾರಿಯನ್ನು ಇವನಿಗೆ ನೀಡಿದ್ದಾನೆ. ಈ ಹಿಂದೆ ಸೈಫ್, ಬಾಂಗ್ಲಾದೇಶದ ಮೂಲಕ ಭಾರತದ ಮೇಲೆ ದಾಳಿಗೆ ಹಫೀಜ್ ಸಯೀದ್ ಸಿದ್ಧತೆ ನಡೆಸಿದ್ದಾನೆ ಎಂದು ಹೇಳಿದ್ದ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories