ಕೇರಳದಲ್ಲಿ ನೈಋತ್ಯ ಮಾನ್ಸೂನ್ ಈ ಬಾರಿ ಅವಧಿಗೂ ಮೊದಲೆ ಬಂದಿದ್ದರಿಂದ ತಮಿಳುನಾಡಿನ ದಕ್ಷಿಣ ಭಾಗಗಳ ಪಶ್ಚಿಮ ಘಟ್ಟಗಳಲ್ಲಿ ವ್ಯಾಪಕ ಮಳೆಯಾಯಿತು. ಜೊತೆಗೆ ನೀರು ಅಣೆಕಟ್ಟು ತುಂಬಿ ಅಪಾಯದ ಮಟ್ಟ ಮೀರಿ ಹರಿದಿದೆ. ಅಣೆಕಟ್ಟಿನ ಸುರಕ್ಷತೆ ಬಗ್ಗೆ ಕೇರಳ ಸರ್ಕಾರ ಕಳವಳ ಕೂಡ ವ್ಯಕ್ತಪಡಿಸಿದೆ. ಈ ಅಣೆಕಟ್ಟಿನಲ್ಲಿ ಒಟ್ಟು ಸಂಗ್ರಹಣಾ ಮಟ್ಟ 142 ಅಡಿಗಳು. ತಮಿಳುನಾಡು ಕೇರಳದ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ಕೃಷಿಗಾಗಿ, ಮುಖ್ಯವಾಗಿ ನೀರಾವರಿ ಮತ್ತು ಕುಡಿಯುವ ನೀರಿನ ಅಗತ್ಯಗಳಿಗಾಗಿ ನೀರನ್ನು ಪಡೆಯುತ್ತದೆ. ಅಣೆಕಟ್ಟಿನ ನೀರನ್ನು ಸುರಂಗಗಳ ಮೂಲಕ ತಮಿಳುನಾಡಿನ ವೈಗೈ ಜಲಾನಯನ ಪ್ರದೇಶಕ್ಕೆ ಬಿಡಲಾಗುತ್ತದೆ. ಇದು ಥೇಣಿ, ಮಧುರೈ, ದಿಂಡಿಗಲ್, ಶಿವಗಂಗೈ ಮತ್ತು ರಾಮನಾಥಪುರಂನಂತಹ ಜಿಲ್ಲೆಗಳಿಗೆ ನೀರಿನ ಅವಶ್ಯಕತೆಯನ್ನು ಒದಗಿಸಲಾಗುತ್ತದೆ.