ಸ್ವಿಗ್ಗಿ, ಜೊಮ್ಯಾಟೋನಲ್ಲಿ ಮದ್ಯ ಮಾರಾಟಕ್ಕೆ ಶಿಫಾರಸ್ಸು ಸಲ್ಲಿಕೆ; ಖರೀದಿಗೆ ಒಂದಿಷ್ಟು ಷರತ್ತು!

Published : Aug 10, 2025, 11:59 AM IST

ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು ಬೆವ್ಕೊ ಚಿಂತಿಸುತ್ತಿದೆ. ಬೆವ್ಕೊ ವ್ಯವಸ್ಥಾಪಕ ನಿರ್ದೇಶಕಿ ಹರ್ಷಿತಾ ಅಟ್ಟಲೂರಿ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದ್ದಾರೆ. 23 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮಾರಾಟಕ್ಕೆ ಅವಕಾಶ.

PREV
15
ಆನ್‌ಲೈನ್‌ನಲ್ಲಿ ಮದ್ಯ ಮಾರಾಟ

ಕೇರಳ ರಾಜ್ಯದಲ್ಲಿ ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು BEVCO (Kerala State Beverages Corporation) ನಿರ್ಧರಿಸಿದೆ. ಈ ಸಂಬಂಧ ಬೆವ್ಕೊ ವ್ಯವಸ್ಥಾಪಕ ನಿರ್ದೇಶಕಿ ಹರ್ಷಿತಾ ಅಟ್ಟಲೂರಿ ಸರ್ಕಾರಕ್ಕೆ ವಿವರವಾದ ಶಿಫಾರಸ್ಸು ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ಆದಾಯ ಹೆಚ್ಚಿಸುವ ಉದ್ದೇಶದಿಂದ ಷರತ್ತುಗಳಿಗೆ ಒಳಪಟ್ಟು ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು ಕಂಪನಿ ಯೋಜಿಸುತ್ತಿದೆ ಎಂದು ವರದಿಯಾಗಿದೆ

25
ಬೆವ್ಕೊ ವ್ಯವಸ್ಥಾಪಕ ನಿರ್ದೇಶಕಿ ಹರ್ಷಿತಾ ಅಟ್ಟಲೂರಿ

ಆನ್‌ಲೈನ್ ಮದ್ಯ ಮಾರಾಟಕ್ಕಾಗಿ ಬೆವ್ಕೊ ಈಗಾಗಲೇ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಸಿದ್ಧಪಡಿಸಿದೆ. ಸ್ವಿಗ್ಗಿ ಸೇರಿದಂತೆ ಆನ್‌ಲೈನ್ ವಿತರಣಾ ವೇದಿಕೆಗಳು ಆಸಕ್ತಿ ವ್ಯಕ್ತಪಡಿಸಿವೆ ಎಂದು ಬೆವ್ಕೊ ವ್ಯವಸ್ಥಾಪಕ ನಿರ್ದೇಶಕಿ ಹರ್ಷಿತಾ ಅಟ್ಟಲೂರಿ ಮಾಹಿತಿ ನೀಡಿದ್ದಾರೆ

35
ಮದ್ಯ ಮಾರಾಟ ಮಾಡುವ ಕುರಿತು ಶಿಫಾರಸ್ಸು

ಮೂರು ವರ್ಷಗಳ ಹಿಂದೆ, ಸರ್ಕಾರ ಆನ್‌ಲೈನ್ ಮದ್ಯ ಮಾರಾಟಕ್ಕೆ ಅನುಮತಿ ಕೋರಿತ್ತು. ಆದರೆ ಸರ್ಕಾರ ಅನುಮತಿ ನೀಡಲಿಲ್ಲ. ಇದೀಗ ಮತ್ತೊಮ್ಮೆ ಬೆವ್ಕೊ ವ್ಯವಸ್ಥಾಪಕ ನಿರ್ದೇಶಕಿ ಹರ್ಷಿತಾ ಅಟ್ಟಲೂರಿ ಅವರು ಮೊಬೈಲ್ ಅಪ್ಲಿಕೇಶನ್‌ ಮೂಲಕ ಮದ್ಯ ಮಾರಾಟ ಮಾಡುವ ಕುರಿತು ಶಿಫಾರಸ್ಸು ವರದಿಯನ್ನು ಸಲ್ಲಿಸಿದ್ದಾರೆ.

45
ಮದ್ಯ ಖರೀದಿಗೆ ಒಂದಿಷ್ಟು ಷರತ್ತು!

23 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಆನ್‌ಲೈನ್‌ನಲ್ಲಿ ಮದ್ಯವನ್ನು ಖರೀದಿಸಲು ಸಾಧ್ಯವಾಗುತ್ತದೆ. ಮದ್ಯವನ್ನು ಖರೀದಿಸುವ ಮೊದಲು ವಯಸ್ಸಿನ ಪುರಾವೆಯನ್ನು ಒದಗಿಸಬೇಕು. ಆನ್‌ಲೈನ್‌ನಲ್ಲಿ ಮದ್ಯ ಮಾರಾಟದ ಜೊತೆಗೆ ಕಡಿಮೆ ಪವರ್ ಹೊಂದಿರುವ ಮದ್ಯವನ್ನು ಬಿಡುಗಡೆ ಮಾಡಲು ಬೆವ್ಕೊ ಶಿಫಾರಸು ಮಾಡಿದೆ

55
ವಿದೇಶಿ ನಿರ್ಮಿತ ಬಿಯರ್ ಮಾರಾಟಕ್ಕೆ ಅವಕಾಶ

ಹೊಸ ನಿರ್ಧಾರವು ಆಲ್ಕೋಹಾಲ್ ಮಾರಾಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಪ್ರವಾಸಿಗರನ್ನು ಒಳಗೊಂಡಂತೆ ಕಡಿಮೆ ಪವರ್ ಹೊಂದಿರುವ ಮದ್ಯವನ್ನು ಬಿಡುಗಡೆ ಮಾಡಲು ಪ್ರಸ್ತಾಪಿಸಲಾಗಿದೆ ಎಂದು ಬೆವ್ಕೊ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವಿದೇಶಿ ನಿರ್ಮಿತ ಬಿಯರ್ ಮಾರಾಟಕ್ಕೆ ಅವಕಾಶ ನೀಡಬೇಕೆಂದು ಬೆವ್ಕೊ ಮನವಿಯನ್ನು ಸಹ ಮಾಡಿಕೊಂಡಿದೆ.

Read more Photos on
click me!

Recommended Stories