ಅಡ್ವಾಣಿ ದಾಖಲೆ ಹಿಂದಿಕ್ಕಿ ಅತಿ ದೀರ್ಘಾವಧಿ ಗೃಹ ಸಚಿವರಾಗಿ ಅಮಿತ್ ಶಾ ದಾಖಲೆ

Published : Aug 06, 2025, 08:32 AM IST

ಅಮಿತ್ ಶಾ ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಗೃಹ ಸಚಿವರಾಗಿ ಹೊಸ ದಾಖಲೆ ಸ್ಥಾಪಿಸಿದ್ದಾರೆ. ಲಾಲ್ ಕೃಷ್ಣ ಅಡ್ವಾಣಿ ಅವರ ದಾಖಲೆಯನ್ನು ಮುರಿದ ಶಾ, 2,258 ದಿನಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಈ ಸಾಧನೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

PREV
14

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಗೃಹ ಸಚಿವರಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ಮೂಲಕ ಲಾಲ್ ಕೃಷ್ಣ ಅಡ್ವಾಣಿ ಅವರ ದಾಖಲೆ ಮುರಿದಿದ್ದಾರೆ.

24

ಅಮಿತ್ ಶಾ ಕೇಂದ್ರ ಗೃಹ ಸಚಿವರಾಗಿ 2019ರ ಮೇ 30ರಿಂದ 2025ರ ಆ.4ರವರೆಗೆ ಒಟ್ಟು 2,258 ದಿನಗಳನ್ನು (6 ವರ್ಷ 65 ದಿನ) ಪೂರೈಸಿದ್ದಾರೆ. ಇದಕ್ಕೂ ಮುನ್ನ ಅಡ್ವಾಣಿಯವರು 1998ರ ಮಾ.19ರಿಂದ 2004ರ ಮೇ.22ರವರೆಗೆ ಸೇವೆ ಸಲ್ಲಿಸಿ ಒಟ್ಟು 2,256 ದಿನಗಳ (6 ವರ್ಷ 64 ದಿನ) ದಾಖಲೆ ಬರೆದಿದ್ದರು.

34

ಮಂಗಳವಾರ ನಡೆದ ಎನ್‌ಡಿಎ ಸಂಸದೀಯ ಸಭೆಯಲ್ಲಿ ಪ್ರಧಾನಿ ಮೋದಿಯವರು ಶಾ ಅವರ ಸಾಧನೆಯನ್ನು ಪ್ರಶಂಸಿಸಿದ್ದಾರೆ. ಇತ್ತೀಚೆಗೆ ಮೋದಿಯವರು ಅತಿ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿಗಳ ಪೈಕಿ ಇಂದಿರಾ ಗಾಂಧಿಯವರನ್ನು ಹಿಂದಿಕ್ಕಿ ದಾಖಲೆ ಬರೆದಿದ್ದರು.

44

ಶಾ ಅವಧಿಯ ಮಹತ್ವದ ನಿರ್ಧಾರಗಳು

ಜಮ್ಮು ಮತ್ತು ಕಾಶ್ಮೀರ 370ನೇ ವಿಧಿ ರದ್ದು, ಸಿಎಎ ಮತ್ತು ಎನ್‌ಆರ್‌ಸಿ ಜಾರಿ, ಕಾಶ್ಮೀರದ ಪ್ರತ್ಯೇಕತಾವಾದಿ ಹರಿಯತ್ ಸಂಘಟನೆಯ ನಿಷೇಧ, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ರಕ್ಷಣಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ ಎಂಬ 3 ಹೊಸ ಕಾನೂನುಗಳ ಪರಿಚಯ, ನಕ್ಸಲ್ ನಿಗ್ರಹದ ಕ್ರಮಗಳು, ಕೋವಿಡ್-19 ಯಶಸ್ವಿ ನಿರ್ವಹಣೆ, ಮಾದಕದ್ರವ್ಯಗಳ ವಿರುದ್ಧ ಅಭಿಯಾನ (11,961 ಕೋಟಿ ರು. ಮೌಲ್ಯದ ಡ್ರಗ್ಸ್ ವಶ), ಈಶಾನ್ಯದಲ್ಲಿ ದಂಗೆಕೋರ ಸಂಘಟನೆಗಳೊಂದಿಗೆ 12 ಶಾಂತಿ ಒಪ್ಪಂದ ಇತ್ಯಾದಿ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories