ಕೊರೋನಾ ಮಾರಿಗೆ ಅತಿಹೆಚ್ಚು ಬಲಿಯಾಗುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಇಟಲಿಯಲ್ಲಿ ಸಿಲುಕಿದ್ದ ಹಲವು ಭಾರತೀಯರ ಪೈಕಿ ಭಾನುವಾರ ಮತ್ತೆ 263 ಭಾರತೀಯರನ್ನು ಏರ್‌ಲಿಫ್ಟ್ ಮೂಲಕ ರಕ್ಷಣೆ ಮಾಡಲಾಗಿದೆ.
. ಹೀಗೆ, ಈ ಭಾರತೀಯರ ರಕ್ಷಣೆಗೆ ಹೋಗಿದ್ದವರು ಏರಿಂಡಿಯಾ ಪೈಲಟ್ ಕ್ಯಾಪ್ಟನ್ ಸ್ವಾತಿ ರಾವಲ್ ಎಂಬುವರು.
ಶನಿವಾರ ರಾತ್ರಿ ಸ್ವಾತಿ ರಾವಲ್ ಅವರು ಏರಿಂಡಿಯಾದ 777 ವಿಮಾನವನ್ನು ಶನಿವಾರ ರಾತ್ರಿ ಇಟಲಿ ರಾಜಧಾನಿ ರೋಮ್‌ಗೆ ಚಾಲನೆ ಮಾಡಿಕೊಂಡು ಹೋಗಿದ್ದರು.
ವಿಶೇಷವೆಂದರೆ, ತಮ್ಮ ಐದು ವರ್ಷದ ಪುಟ್ಟಮಗುವನ್ನು ಬಿಟ್ಟು ಮರಣ ಮೃದಂಗ ಬಾರಿಸುತ್ತಿರುವ ಇಟಲಿಗೆ ಹೋದ ಸ್ವಾತಿ ರಾವಲ್ ಬಗ್ಗೆ ಮೆಚ್ಚುಗೆಗಳ ಮಹಾಪೂರವೇ ಹರಿದಿದೆ.
ಇದು ನಿಜಕ್ಕೂ ಸಾಹಸದ ಕೆಲಸ ಎಂಬ ಪ್ರಶಂಸೆ ವ್ಯಕ್ತವಾಗಿದೆ.
ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದ, ಭಾರತೀಯರ ರಕ್ಷಣೆಗೆ ಮುಂದಾದ ಈ ಗಟ್ಟಿಗಿತ್ತಿಗೆ ಎಲ್ಲರೂ ಭೇಷ್ ಎಂದಿದ್ದಾರೆ.
ಅನೇಕ ರಾಜಕೀಯ ಗಣ್ಯರೂ ಫೋಟೋ ಶೇರ್ ಮಾಡಿ, ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಖುದ್ದು ಪ್ರಧಾನಿ ಮೋದಿ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಧೈರ್ಯ ಹಾಗೂ ಮಾನವೀಯತೆ ತೋರಿದ ಏರ್ ಇಂಡಿಯಾದ ಈ ತಂಡದ ಬಗ್ಗೆ ಭಾರೀ ಹೆಮ್ಮೆಯಾಗುತ್ತಿದೆ. ಇವರ ಹೋಲಿಕೆ ಇಲ್ಲದ ಈ ಪರಿಶ್ರಮ ದೇಶದ ಮೂಲೆಮೂಲೆಯಲ್ಲೂ ಗುನುಗುಡುತ್ತಿದೆ ಎಂದಿದ್ದಾರೆ.