ಆರ್ಥಿಕ ಹೊರೆ ತಗ್ಗಿಸಲು ಮತ್ತು ಸಮಾನತೆ ತರಲು ಚಿನ್ನಾಭರಣ ಧರಿಸುವುದಕ್ಕೆ ಮಿತಿ ಹೇರಲಾಗಿದೆ. ಈ ಹೊಸ ನಿಯಮ ಉಲ್ಲಂಘಿಸಿದವರಿಗೆ 50,000 ರೂ. ದಂಡ ವಿಧಿಸಲಾಗುತ್ತದೆ. ಗ್ರಾಮದಲ್ಲಿ ಈ ನಿಯಮವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ಡೆಹ್ರಾಡೂನ್: ಉತ್ತರಾಖಂಡದ ಕಂಧಾರ್ ಎಂಬ ಗ್ರಾಮದಲ್ಲಿ, ಆಭರಣಪ್ರಿಯ ಸ್ತ್ರೀಯರು ಶುಭಸಮಾರಂಭಗಳಲ್ಲಿ ಧರಿಸುವಚಿನ್ನಾಭರಣಗಳಿಗೆ ಮಿತಿ ಹೇರಲಾಗಿದೆ. ಈ ಮಿತಿ ಹೇರಿಕೆ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿವೆ. ಉದ್ದೇಶ ಸರಿಯಾಗಿದ್ರೂ, ಇದು ಇನ್ನೊಬ್ಬರ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಕಿತ್ತುಕೊಳ್ಳುವ ನಿರ್ಧಾರ ಎಂಬ ವಾದವೂ ಕೇಳಿ ಬಂದಿದೆ.
24
ಯಾಕೆ ಈ ನಿಯಮ?
ಆಭರಣ ಖರೀದಿಗೆಂದು ಅಧಿಕ ವೆಚ್ಚ ಮಾಡಿ ಜನ ಸಾಲಗಾರರಾಗುವುದನ್ನು ತಪ್ಪಿಸಲು ಹಾಗೂ ಸಮಾಜದಲ್ಲಿ ಸಮಾನತೆ ತರಲು ಈ ಹೊಸ ನಿಯಮವನ್ನು ರೂಪಿಸಲಾಗಿದ್ದು, ಇದನ್ನು ಉಲ್ಲಂಘಿಸುವವರಿಗೆ ಭಾರೀ ಮೊತ್ತದ ದಂಡವನ್ನೂ ನಿಗದಿಪಡಿಸಲಾಗಿದೆ.
34
ಸರ್ವಾನುಮತದಿಂದ ಅಂಗೀಕಾರ
ಬಡ ಪರಿವಾರಗಳ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಸಮುದಾಯ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾದ ನಿಯಮದ ಅನುಸಾರ, ಮದುವೆ ಹಾಗೂ ಇತರೆ ಶುಭಕಾರ್ಯಗಳಿಗೆ ಹಾಜರಾಗುವ ವಿವಾಹಿತ ಹೆಂಗಳೆಯರು ಕೇವಲ 3 ಬಗೆಯ ಆಭರಣ ತೊಡಬಹುದಾಗಿದೆ. ಅವುಗಳು ಮೂಗುತಿ, ಕಿವಿಯೋಲೆ, ಮಾಂಗಲ್ಯ ಸರ. ಉಳಿದೆಲ್ಲಾ ಆಡಂಬರದ ಆಭರಣ ನಿರ್ಬಂಧಿಸಲಾಗಿದೆ. ಒಂದೊಮ್ಮೆ ಈ ನಿಯಮವನ್ನು ಉಲ್ಲಂಘಿಸಿದರೆ, ಅಂಥವರ ಮೇಲೆ 50,000 ರು. ದಂಡ ವಿಧಿಸಲಾಗುವುದು.
ಮದುವೆಯಂತಹ ಸಮಾರಂಭಗಳು ಪವಿತ್ರ ಆಚರಣೆಗಳೇ ಹೊರತು ತೋರಿಕೆಗಾಗಿ ಮಾಡುವ ಆಡಂಬರವಲ್ಲ ಎಂಬುದು ಗ್ರಾಮಸ್ಥರ ನಿಲುವು. ಅನ್ಯರನ್ನು ನೋಡಿಕೊಂಡು, ಅವರನ್ನು ಮೀರಿಸುವಂತೆ ಮಿಂಚುವ ಸ್ತ್ರೀಸಹಜ ಹಂಬಲದಿಂದ ಪರಿವಾರಕ್ಕೆ ಆರ್ಥಿಕ ಹೊರೆಯಾಗುತ್ತದೆ. ಜತೆಗೆ ಇದರಿಂದ ಸಮಾಜದಲ್ಲಿ ಜನರ ನಡುವಿನ ಅಂತರವೂ ಹೆಚ್ಚುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಈ ನಿಯಮ ರೂಪಿಸಲಾಗಿದೆ. ಈ ಮೂಲಕ ಕಂಧಾರ್ ಗ್ರಾಮಸ್ಥರು ಹೊಸ ರೀತಿಯ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ