ಜೋಜಿಲಾ ಸುರಂಗ ಕಾಮಗಾರಿ ಅಂತಿಮ ಘಟ್ಟಕ್ಕೆ; ಭಾರತದ ಮೂಲಸೌಕರ್ಯ ಇತಿಹಾಸದಲ್ಲಿ ಹೊಸ ಅಧ್ಯಾಯ

Published : Jun 08, 2026, 06:21 AM IST

ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಡುವೆ ವರ್ಷಪೂರ್ತಿ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಜೋಜಿಲಾ ರಸ್ತೆ ಸುರಂಗ ಯೋಜನೆ ಅಂತಿಮ ಹಂತದಲ್ಲಿದೆ. ಸಮುದ್ರ ಮಟ್ಟದಿಂದ 11,578 ಅಡಿ ಎತ್ತರದಲ್ಲಿ ನಿರ್ಮಿಸಲಾದ ಈ ಸುರಂಗವು, ವಿಶ್ವದ ಅತಿ ಉದ್ದದ ಏಕ-ಟ್ಯೂಬ್ ದ್ವಿಮುಖ ರಸ್ತೆ ಸುರಂಗವಾಗಿದೆ.

PREV
16
13.153 ಕಿ.ಮೀ. ಉದ್ದದ ಸುರಂಗ

ಶ್ರೀನಗರ/ಲೇಹ್: ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಡುವಿನ ಸಂಪರ್ಕಕ್ಕೆ ಹೊಸ ದಿಕ್ಕು ನೀಡಲಿರುವ ಮತ್ತು ದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರವಹಿಸಲಿರುವ ಜೋಜಿಲಾ ರಸ್ತೆ ಸುರಂಗ ಯೋಜನೆ ಕಾಮಗಾರಿ ಅಂತಿಮ ಘಟ್ಟ ತಲುಪಿದ್ದು, ಶೀಘ್ರ ವಾಹನ ಸಂಚಾರಕ್ಕೆ ಲೋಕಾರ್ಪಣೆಗೊಳ್ಳಲಿದೆ.

26
ವಿಶ್ವದ ಅತಿ ಎತ್ತರದಲ್ಲಿರುವ ಅತಿ ಉದ್ದದ ಏಕ-ಟ್ಯೂಬ್ ದ್ವಿಮುಖ ರಸ್ತೆ ಸುರಂಗ

13.153 ಕಿ.ಮೀ. ಉದ್ದದ ಜೋಜಿಲಾ ಸುರಂಗವನ್ನು ಭೇದಿಸುವ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಇದು ಭಾರತದ ಮೂಲಸೌಕರ್ಯ ಇತಿಹಾಸದಲ್ಲಿ ಐತಿಹಾಸಿಕ ಕ್ಷಣವೆಂದು ಪರಿಗಣಿಸಲಾಗಿದೆ. ಸಮುದ್ರ ಮಟ್ಟದಿಂದ ಸುಮಾರು 11,578 ಅಡಿ ಎತ್ತರದಲ್ಲಿರುವ ಈ ಸುರಂಗವು ವಿಶ್ವದ ಅತಿ ಎತ್ತರದಲ್ಲಿರುವ ಅತಿ ಉದ್ದದ ಏಕ-ಟ್ಯೂಬ್ ದ್ವಿಮುಖ ರಸ್ತೆ ಸುರಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

36
ಶಾಶ್ವತ ಪರಿಹಾರ

ಶ್ರೀನಗರದ ಸಮೀಪದ ಸೋನ್‌ಮಾರ್ಗ್‌ನ ಬಾಲ್ತಾಲ್ ಮತ್ತು ದ್ರಾಸ್-ಕಾರ್ಗಿಲ್ ಪ್ರದೇಶದ ಮೀನಾಮಾರ್ಗ್ ನಡುವಿನ ಈ ಯೋಜನೆ, ಹಲವು ತಿಂಗಳುಗಳ ಕಾಲ ಹಿಮಪಾತದ ಅಪಾಯದಿಂದ ಕಡಿತಗೊಳ್ಳುವ ಸಂಪರ್ಕ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಿದೆ.

46
ನ್ಯೂ ಆಸ್ಟ್ರಿಯನ್ ಟನೆಲಿಂಗ್‌ ಮೆಥಡ್ ತಂತ್ರಜ್ಞಾನದ ಬಳಕೆ

ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಎನ್‌ಎಚ್‌ಐಡಿಸಿಎಲ್) ಪರವಾಗಿ ಮೆಗಾ ಎಂಜಿನಿಯರಿಂಗ್ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಹಿಮಾಲಯದ ಸಂಕೀರ್ಣ ಭೂವೈಜ್ಞಾನಿಕ ಪರಿಸ್ಥಿತಿಗೆ ಅನುಗುಣವಾಗಿ ‘ನ್ಯೂ ಆಸ್ಟ್ರಿಯನ್ ಟನೆಲಿಂಗ್‌ ಮೆಥಡ್’ ತಂತ್ರಜ್ಞಾನ ಬಳಸಿ ಈ ಸುರಂಗ ನಿರ್ಮಿಸಲಾಗಿದೆ.

56
365 ದಿನಗಳ ಸಂಪರ್ಕಕ್ಕೆ ರಹದಾರಿ

ಈ ಸುರಂಗ ಮಾರ್ಗ ಪೂರ್ಣಗೊಂಡ ಬಳಿಕ ಶ್ರೀನಗರ ಮತ್ತು ಲಡಾಖ್ ನಡುವಿನ ಸಂಪರ್ಕ ವರ್ಷ ಪೂರ್ತಿ ಲಭ್ಯವಾಗಲಿದೆ. ದ್ರಾಸ್, ಕಾರ್ಗಿಲ್, ಲೇಹ್ ಸೇರಿ ಗಡಿಯ ಸೂಕ್ಷ್ಮ ಪ್ರದೇಶಗಳಿಗೆ ಜನರ ಹಾಗೂ ಸರಕುಗಳ ಸಂಚಾರ ಸುಗಮವಾಗಲಿದ್ದು, ಪ್ರವಾಸೋದ್ಯಮ, ವ್ಯಾಪಾರ ಹಾಗೂ ತುರ್ತು ಸೇವೆಗಳಿಗೆ ಉತ್ತೇಜನ ಸಿಗಲಿದೆ. ರಾಷ್ಟ್ರದ ಭದ್ರತೆ ಮತ್ತು ಸೇನಾ ಲಾಜಿಸ್ಟಿಕ್ಸ್ ದೃಷ್ಟಿಯಿಂದಲೂ ಈ ಸುರಂಗ ಅತ್ಯಂತ ಮಹತ್ವದ್ದಾಗಿದೆ.

66
ಯೋಜನೆಯ ಪ್ರಮುಖ ಅಂಕಿ-ಅಂಶಗಳು

ಒಟ್ಟು ಯೋಜನಾ ಉದ್ದ: 30.894 ಕಿ.ಮೀ.

ಮುಖ್ಯ ಜೋಜಿಲಾ ಸುರಂಗ: 13.153 ಕಿ.ಮೀ.

ನಿಲ್‌ಗ್ರಾರ್ ಜೋಡಿ ಸುರಂಗಗಳು: 457 ಮೀ. ಹಾಗೂ 1.95 ಕಿ.ಮೀ.

ಭಾರತದಲ್ಲೇ ಅತಿ ಉದ್ದದ ಲಂಬ ಶಾಫ್ಟ್: 474.30 ಮೀ.

ಹಿಮ ರಕ್ಷಣಾ ಗ್ಯಾಲರಿ: 450 ಮೀ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories