Medical Shop in Indian Railway Station: ನೀವು ರೈಲ್ವೆ ಪ್ರಯಾಣಿಕರಾಗಿದ್ರೆ ಪ್ಲಾಟ್‌ಫಾರಂಗಳಲ್ಲಿ ಮೆಡಿಕಲ್ ಶಾಪ್‌ಗಳಿಲ್ಲದಿರೋದು ನಿಮ್ಮ ಗಮನಕ್ಕೂ ಬಂದಿರುತ್ತದೆ. ರೈಲ್ವೆ ನಿಯಮಗಳಲ್ಲಿನ ಬದಲಾವಣೆಯಿಂದ ಔಷಧಿ ಮಳಿಗೆಗಳು ಕಾಣಿಸಲ್ಲ.
ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂಗಳಲ್ಲಿ Medical Shop ನೋಡಿದ್ದೀರಾ?
ಭಾರತೀಯ ರೈಲಿನಲ್ಲಿ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂಗಳಲ್ಲಿ ಪ್ರಯಾಣಿಕರಿಗಾಗಿ ವಿವಿಧ ಆಹಾರ ಮಳಿಗೆ, ಹಣ್ಣಿನ ಅಂಗಡಿ, ಪುಸ್ತಕದಂಗಡಿ ಸೇರಿದಂತೆ ಅನೇಕ ಶಾಪ್ ನೋಡಿರುತ್ತವೆ. ಆದ್ರೆ ಮೆಡಿಕಲ್ ಶಾಪ್ ಇಲ್ಲದಿರೋದು ನಿಮ್ಮ ಗಮನಕ್ಕೆ ಬಂದಿದೆಯಾ? ಪ್ಲಾಟ್‌ಫಾರಂಗಳಲ್ಲಿ ಯಾಕೆ ಮೆಡಿಕಲ್ ಶಾಪ್ ಇಲ್ಲವೆಂದು ಯೋಚಿಸಿದ್ದೀರಾ?
25
ಮೆಡಿಕಲ್ ಶಾಪ್
ರೈಲ್ವೆ ನಿಲ್ದಾಣಗಳಲ್ಲಿ ಮೆಡಿಕಲ್ ಶಾಪ್ ಇರಲಿಲ್ಲ ಅಂತ ಅಲ್ಲ. ರೈಲ್ವೆ ಅಧಿಕಾರಿಗಳ ಪ್ರಕಾರ, 2001ರಲ್ಲಿ ರೈಲ್ವೆ ಮಂಡಳಿ ಒಂದು ನೀತಿಯನ್ನು ರೂಪಿಸಿತ್ತು. ಈ ನಿಯಮದ ಪ್ರಕಾರ, ವೈದ್ಯರ ಸೌಲಭ್ಯವುಳ್ಳ ನಿಲ್ದಾಣದಲ್ಲಿ ಮೆಡಿಕಲ್ ಶಾಪ್‌ಗಾಗಿ 108 ಚದರ ಗಡಿ ಜಾಗ ಮೀಸಲಿಡಲು ನಿರ್ಧರಿಸಲಾಗಿತ್ತು. ಪುಸ್ತಕ ಮಳಿಗೆಯಲ್ಲಿ ಸಣ್ಣದಾದ ಜಾಗದಲ್ಲಿ ಮೆಡಿಕಲ್ ಶಾಪ್ ಮಾಡಿಕೊಳ್ಳಲು ಯಾವುದೇ ನಿರ್ಬಂಧಗಳಿರಲಿಲ್ಲ. ಇದಕ್ಕೂ ಮೊದಲು ಪ್ಲಾಟ್‌ಫಾರಂನಲ್ಲಿಯೇ ಔಷಧದಂಗಡಿ ತೆಗೆಯುವ ಅನುಮತಿ ನೀಡಲಾಗಿತ್ತು.
35
ರೈಲ್ವೆ ನಿಯಮಗಳಲ್ಲಿ ಬದಲಾವಣೆ
ಸಮಯ ಬದಲಾದಂತೆ ರೈಲ್ವೆ ನಿಯಮಗಳಲ್ಲಿಯೂ ಬದಲಾವಣೆ ಕಂಡು ಬಂದವು. ಪ್ಲಾಟ್‌ಫಾರಂನಲ್ಲಿ ಹೊಸ ಅಥವಾ ಪ್ರತ್ಯೇಕವಾದ ಮೆಡಿಕಲ್ ಶಾಪ್ ಆರಂಭಿಸುವ ಅನುಮತಿಯನ್ನು ಹಿಂಪಡೆದುಕೊಳ್ಳಲಾಯ್ತು. ಬುಕ್‌ಸ್ಟಾಲ್, ಮೆಡಿಕಲ್ ಸ್ಟಾಲ್ ಮತ್ತು ಜನರಲ್ ಸ್ಟೋರ್ ಸ್ಟಾಲ್ ಎಂಬ ಮೂರು ಅಂಗಡಿ ತೆರೆಯಬಹುದಿತ್ತು. ಆದ್ರೆ ಈ ಅಂಗಡಿಗಳಿಂದಾಗಿ ಪ್ಲಾಟ್‌ಫಾರಂನಲ್ಲಿ ಜನಸಂದಣಿ ಹೆಚ್ಚಾಗಲಾರಂಭಿಸಿತು. ಪ್ಲಾಟ್‌ಫಾರಂನಲ್ಲಿ ಉಂಟಾಗುವ ಜನರ ಸಂಖ್ಯೆ ನಿಯಂತ್ರಣಕ್ಕಾಗಿ ನಿಯಮಗಳಲ್ಲಿ ಬದಲಾವಣೆ ಮಾಡಲಾಯ್ತು.
ಹೊಸ ನಿಯಮಗಳ ಪ್ರಕಾರ, ಪ್ಲಾಟ್‌ಫಾರಂಗಳಲ್ಲಿ ಮಲ್ಟಿ ಪರ್ಪಸ್ ಸ್ಟಾಲ್‌ಗಳು (MPS) ಬಂದವು. ಮೆಡಿಕಲ್ ಶಾಪ್‌ಗೆ ಜಾಗ ನೀಡದೇ ಇದೇ ಮಲ್ಟಿ ಪರ್ಪಸ್ ಸ್ಟಾಲ್‌ನಲ್ಲಿಯೇ ಪ್ರಯಾಣಿಕರಿಗೆ ಬೇಕಾಗುವ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಯ್ತು. ಸದ್ಯ ಭಾರತದ A One ಶ್ರೇಣಿಯ 21 ನಿಲ್ದಾಣಗಳಲ್ಲಿ ಮಾತ್ರ ಪ್ರತ್ಯೇಕ ಮೆಡಿಕಲ್ ಶಾಪ್‌ಗಳನ್ನು ನೋಡಬಹುದು. ಔಷಧಿ ಅಂಗಡಿ ತೆರೆಯುವ ಕುರಿತು ರೈಲ್ವೆ ಇಲಾಖೆಯಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
55
ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ಏನು ಮಾಡಬೇಕು?
ಪ್ರಯಾಣದ ಸಮಯದಲ್ಲಿ ಅಥವಾ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕರು ಅನಾರೋಗ್ಯಕ್ಕೊಳಗಾದ್ರೆ ರೈಲ್ವೆ ಇಲಾಖೆ ಬಲವಾದ ಎಮೆರ್ಜೆನ್ಸಿ ಸೇವೆಯನ್ನು ಹೊಂದಿದೆ. ಟಿಟಿಇಗಳು, ಗಾರ್ಡ್‌ಗಳು, ರೈಲು ಸೂಪರಿಂಟೆಂಡೆಂಟ್‌ಗಳು ಮತ್ತು ಸ್ಟೇಷನ್ ಮಾಸ್ಟರ್‌ಗಳು ಪ್ರಥಮ ಚಿಕಿತ್ಸೆಯಲ್ಲಿ ವಿಶೇಷವಾಗಿ ತರಬೇತಿ ಪಡೆದಿರುತ್ತಾರೆ. ಎಲ್ಲಾ ರೈಲು ನಿಲ್ದಾಣಗಳು ಪ್ರಥಮ ಚಿಕಿತ್ಸೆಯ ಕಿಟ್ ಹೊಂದಿರುತ್ತವೆ. ತುರ್ತು ಸಂದರ್ಭದಲ್ಲಿ ಸಿಬ್ಬಂದಿ, ಸಮೀಪ ಅಥವಾ ಸ್ಥಳೀಯ ವೈದ್ಯರನ್ನು ನಿಲ್ದಾಣಕ್ಕೆ ಕರೆಸಿಕೊಳ್ಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ