ಹಿಂದೂ ಯುವತಿಯರನ್ನು ಗರ್ಭಿಣಿ ಮಾಡೋದು ಫ್ಯಾಶನ್; ನಾನು ಮಚ್ಲಿ ಗ್ಯಾಂಗ್ ಸದಸ್ಯ ಎಂದ ಶಾದ್ ಸಿದ್ದಿಖಿ

Published : Oct 05, 2025, 12:31 PM IST

Machli gang member crime: ಶಾದ್ ಸಿದ್ದಿಖಿ ಅಲಿಯಾಸ್ ಸಚಿನ್ ಎಂಬಾತ ತನ್ನ ಗುರುತು ಮರೆಮಾಚಿ ಹಿಂದೂ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ನಂತರ ಅತ್ಯಾ*ಚಾರ ಎಸಗಿ, ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದಲ್ಲದೆ, ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ. 

PREV
16
ಶಾದ್ ಸಿದ್ದಿಖಿ ಅಲಿಯಾಸ್ ಸಚಿನ್

ಶಾದ್ ಸಿದ್ದಿಖಿ ಅಲಿಯಾಸ್ ಸಚಿನ್ ಎಂಬಾತನ ವಿರುದ್ಧ ಇಂದೋರನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಅತ್ಯಾ*ಚಾರ, ಬ್ಲ್ಯಾಕ್‌ಮೇಲ್ ಮತ್ತು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ ಆರೋಪದಡಿ ಎಫ್ಐಆರ್ ದಾಖಲಾಗಿದೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ. ಸಂತ್ರಸ್ತೆ ದೂರಿನ ಪ್ರಕಾರ, ಆರೋಪಿ ಮುಸ್ಲಿಮನಾಗಿದ್ದು, ತನ್ನ ಗುರುತು ಮರೆ ಮಾಡಿ ಸ್ನೇಹ ಬೆಳೆಸಿದ್ದನು.

26
ಮಚಲಿ ಗ್ಯಾಂಗ್ ಸದಸ್ಯ

ಹಿಂದೂ ಹೆಸರಿಟ್ಟುಕೊಂಡು ಯುವತಿಯರನ್ನು ಪ್ರೇಮದ ಬಲೆಗೆ ಬೀಳಿಸಿಕೊಂಡು ಗರ್ಭಿಣಿ ಮಾಡೋದು ನನ್ನ ಕೆಲಸ. ನಾನು ಮಚಲಿ ಗ್ಯಾಂಗ್ ಸದಸ್ಯ ಎಂದು ಶಾದ್ ಸಿದ್ದಿಖಿ ಅಲಿಯಾಸ್ ಸಚಿನ್ ಹೇಳಿದ್ದಾನೆ ಎಂಬುದಾಗಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆರಂಭದಲ್ಲಿ ಸಚಿನ್ ಎಂದು ಪರಿಚಯಿಸಿಕೊಂಡು ಕೆಲಸ ಕೊಡಿಸಲು ಸಹಾಯ ಮಾಡೋದಾಗಿ ಹೇಳಿದ್ದನು.

36
ಸಿದ್ದಿಖಿ ಜೊತೆ ಯುವತಿ ಸಂಬಂಧ

26 ವರ್ಷದ ಹಿಂದೂ ಯುವತಿ ಕೆಲಸ ಅರಸಿಕೊಂಡು ಬೋಪಾಲ್ ನಗರಕ್ಕೆ ಬಂದಿದ್ದನು. ಈ ವೇಳೆ ಪರಿಚಯವಾದವವೇ ಸಚಿನ್ ಅಲಿಯಾಸ್ ಶಾದ್ ಸಿದ್ದಿಖಿ. ನಂತರ ಯುವತಿ ಇಂದೋರ್‌ಗೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಈ ಸಮಯದಲ್ಲಿ ಶಾದ್ ಸಿದ್ದಿಖಿ ಜೊತೆ ಯುವತಿ ಸಂಬಂಧ ಶುರುವಾಗಿತ್ತು.

46
ಅತ್ಯಾ*ಚಾರ ಎಸಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡ ನೀಚ

ಜನವರಿ 3ರಂದು ಯುವತಿ ಮನೆಗೆ ಶಾದ್ ಸಿದ್ದಿಖಿ ಬಂದಿದ್ದಾನೆ. ಈ ವೇಳೆ ಯುವತಿಗೆ ಮೌಥ್ ಫ್ರೆಶನರ್ ತಿನ್ನಲು ನೀಡಿದ್ದಾನೆ. ಇದಾದ ಬಳಿಕ ಯುವತಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಈ ಸಮಯವನ್ನು ದುರುಪಯೋಗಪಡಿಸಿಕೊಂಡ ಶಾದ್ ಸಿದ್ದಿಖಿ ಅತ್ಯಾ*ಚಾರ ಎಸಗಿ, ಯುವತಿಯ ಖಾಸಗಿ ಫೋಟೋ ಮತ್ತು ವಿಡಿಯೋ ಸೆರೆ ಹಿಡಿದುಕೊಂಡಿದ್ದಾನೆ. ತನ್ನ ಮೇಲಿನ ದೌರ್ಜನ್ಯ ಖಂಡಿಸಿದಾಗ ಮದುವೆಯಾಗುವ ಭರವಸೆಯನ್ನು ನೀಡಿದ್ದನು.

56
ಷರತ್ತು ಹಾಕಲು ಆರಂಭಿಸಿದ ಶಾದ್ ಸಿದ್ದಿಖಿ

ಈ ಘಟನೆ ಬಳಿಕ ಸಚಿನ್ ಹಿಂದೂ ಅಲ್ಲ, ಆತ ಮುಸ್ಲಿಂ ಯುವಕನ ಆಗಿದ್ದು ಹೆಸರು ಶಾದ್ ಸಿದ್ದಿಖಿ ಎಂಬ ವಿಷಯ ಯುವತಿಗೆ ಗೊತ್ತಾಗಿದೆ. ಇದನ್ನು ಯುವತಿ ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ತನ್ನ ನಿಜವಾದ ಹೆಸರು ಹೇಳಿ. ತನ್ನೊಂದಿಗೆ ಜೀವನ ನಡೆಸಬೇಕಾದ್ರೆ ಮತಾಂತರಗೊಳ್ಳಬೇಕು. ಮುಸ್ಲಿಂ ಮಹಿಳೆಯಂತೆ ಬುರ್ಖಾ ಧರಿಸಬೇಕೆಂದು ಷರತ್ತುಗಳನ್ನು ವಿಧಿಸಿದ್ದಾನೆ.

ಇದನ್ನೂ ಓದಿ: ಬೆಡ್‌ರೂಮ್‌ನಲ್ಲಿ ಹೆಂಡತಿ ವಿಡಿಯೋ ಶೂಟ್ ಮಾಡಿದ ಗಂಡನ ಪ್ರಕರಣಕ್ಕೆ ಟ್ವಿಸ್ಟ್

66
ದೂರು ದಾಖಲಿಸಿದ ಯುವತಿ

ಶಾದ್ ಸಿದ್ದಿಖಿ ಕಿರುಕುಳದಿಂದ ಬೇಸತ್ತ ಯುವತಿ, ಕರ್ಣಿ ಸೇನಾ ಕಚೇರಿಗೆ ತೆರಳಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ. ರಾಜ್ಯ ಅಧ್ಯಕ್ಷ ಶೈಲೇಂದ್ರ ಸಿಂಗ್ ನೆರವಿನಿಂದ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ದೈಹಿಕವಾಗಿ ಹಲ್ಲೆ ನಡೆಸಿರುವ ಬಗ್ಗೆಯೂ ಮಾಹಿತಿ ಉಲ್ಲೇಖವಾಗಿದೆ.

ಇದನ್ನೂ ಓದಿ: ಗಂಡ ಸೆಕ್ಸುಯಲ್ಲಿ ಹೈಪರ್ ಆಕ್ಟಿವ್, ಅವನಿಗೆ ಮಕ್ಕಳಾಗಲ್ಲ: ಪತಿಯ ನೀಚತನ ಎಳೆ ಎಳೆಯಾಗಿ ಬಿಚ್ಚಿಟ್ಟ ಪತ್ನಿ

Read more Photos on
click me!

Recommended Stories