ಭಾರತಕ್ಕೆ ಮರಳುತ್ತಿದ್ದಾರ ವಿಜಯ್ ಮಲ್ಯ? ಹೈಕೋರ್ಟ್‌ಗೆ ಮಹತ್ವದ ಅಫಿಡವಿಟ್ ಸಲ್ಲಿಸಿದ ಉದ್ಯಮಿ, ಇತ್ತೀಚೆಗೆ ಬಾಂಬೆ ಹೈಕೋರ್ಟ್ ಉದ್ಯಮಿ ಭಾರತಕ್ಕೆ ಮರಳಿ ಕೋರ್ಟ್‌ಗೆ ಹಾಜರಾಗದ ಹೊರತು ವಿಚಾರಣೆ ನಡೆಸುವುದಿಲ್ಲ ಎಂದಿತ್ತು. ಇದರ ಬೆನ್ನಲ್ಲೇ ಉದ್ಯಮಿ ಮಹತ್ವದ ಅಫಿಡವಿಟ್ ಸಲ್ಲಿಸಿದ್ದಾರೆ.
ಕಿಂಗ್‌ಫಿಶರ್ ಸಾಮ್ರಾಜ್ಯ ಕಟ್ಟಿದ ಉದ್ಯಮಿ ವಿಜಯ್ ಮಲ್ಯ ಸಾವಿರಾರು ಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿದ್ದಾರೆ. ಬ್ಯಾಂಕ್‌ಗಳಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಆರೋಪ ಎದುರಿಸುತ್ತಿರುವ ವಿಜಯ್ ಮಲ್ಯರನ್ನು ಭಾರತಕ್ಕೆ ಗಡೀಪಾರು ಮಾಡಲು ಕಾನೂನು ಹೋರಾಟಗಳು ನಿರಂತರವಾಗಿ ನಡೆಯುತ್ತಿದೆ. ಮಲ್ಯ ನಲೆಸಿರುವ ಲಂಡನ್ ಹಾಗೂ ಭಾರತದ ಸುಪ್ರೀಂ ಕೋರ್ಟ್‌ನಿಂದ ಹಿಡಿದು ಹಲವು ಕೋರ್ಟ್‌ಗಳಲ್ಲಿ ಕೇಸ್ ನಡೆಯುತ್ತಿದೆ.ಇದೀಗ ಮಹತ್ವದ ಬೆಳವಣಿಗೆಯೊಂದು ನಡೆದಿದೆ.
25
ಬಾಂಬೆ ಹೈಕೋರ್ಟ್ ತಾಕೀತು
ಇತ್ತೀಚೆಗೆ ಬಾಂಬೆ ಹೈಕೋರ್ಟ್ ಉದ್ಯಮಿ ವಿಜಯ್ ಮಲ್ಯ ಪ್ರಕರಣದ ವಿಚಾರಣೆ ನಡೆಸಿತ್ತು. ಮಲ್ಯ ಪರ ವಕೀಲರು ಹಾಜರಾಗಿದ್ದರು. ಇದೇ ವೇಳೆ ವಿಜಯ್ ಮಲ್ಯ ಪ್ರಕರಣ ವಿಚಾರಣೆ ನಡೆಸಬೇಕಾದರೆ ಮಲ್ಯ ಭಾರತಕ್ಕೆ ಮರಳಬೇಕು, ಕೋರ್ಟ್‌ಗೆ ಹಾಜರಾಗಬೇಕು. ಇಲ್ಲದಿದ್ದರೆ ವಿಚಾರಣೆ ನಡೆಸುವುದಿಲ್ಲ ಎಂದಿತ್ತು.
35
ಬಾಂಬೆ ಹೈಕೋರ್ಟ್‌ಗೆ ಸ್ಟೇಟ್‌ಮೆಂಟ್ ಸಲ್ಲಿಕೆ
ಬಾಂಬೆ ಹೈಕೋರ್ಟ್ ಈ ಸೂಚನೆ ನೀಡಿದ ಬಳಿಕ ಇದೀಗ ವಿಜಯ್ ಮಲ್ಯ ವಕೀಲ, ಅಮಿತ್ ದೇಸಾಯಿ ಉದ್ಯಮಿ ಮಲ್ಯ ಅವರ ಮಹತ್ವದ ಸ್ಟೇಟ್‌ಮೆಂಟ್ ಸಲ್ಲಿಸಿದ್ದಾರೆ. ತನ್ನ ಪಾಸ್‌ಪೋರ್ಟ್ ಭಾರತ ಸರ್ಕಾರ ರದ್ದು ಮಾಡಿದೆ. ಹೀಗಾಗಿ ತನ್ನ ಬಳಿ ಸಕ್ರಿಯ ಪಾಸ್‌ಪೋರ್ಟ್ ಇಲ್ಲ.ಲಂಡನ್‌ನಲ್ಲೂ ಕಾನೂನು ಹೋರಾಟ ನಡೆಯುತ್ತಿದೆ. ಲಂಡನ್ ವ್ಯಾಪ್ತಿ ಬಿಟ್ಟು ಹೋಗುವಂತಿಲ್ಲ ಎಂದು ಕೋರ್ಟ್ ಸೂಚಿಸಿದೆ. ಹೀಗಾಗಿ ತನಗೆ ಈ ಸಮಯಕ್ಕೆ ಭಾರತಕ್ಕೆ ಮರಳುವ ದಿನಾಂಕ ನಿಗದಿಪಡಿಸಲು ಅಸಾಧ್ಯವಾಗುತ್ತಿದೆ ಎಂದು ಮಲ್ಯ ವಕೀಲರ ಮೂಲಕ ಸ್ಟೇಟ್‌ಮೆಂಟ್ ಸಲ್ಲಿಸಿದ್ದಾರೆ.
ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಆರೋಪಿ ಭಾರತದ ಕೋರ್ಟ್‌ಗಳ ಪ್ರಕರಣ ವಿಚಾರೆಯಲ್ಲಿ ಹಾಜರಾಗಬೇಕು ಎಂದಿಲ್ಲ. ಈ ಕುರಿತು ಭಾರತದ ಕಾನೂನು ಸ್ಪಷ್ಟಪಡಿಸುತ್ತದೆ. ಪರಾರಿಯಾಗಿರುವ ವಂಚಕ ಅನ್ನೋ ಹಣೆಪಟ್ಟಿ ಮಲ್ಯ ವಾಪಸ್ ಬಂದರೆ ಪರಾರಿ ಹೇಗಾಗುತ್ತೆ. ವಿಜಯ್ ಮಲ್ಯ ಭಾರತಕ್ಕೆ ಬರಲು, ಹಾಗೂ ಲಂಡನ್‌ನಿಂದ ಮರಳಲು ಕೆಲ ಕಾನೂನು ತೊಡಕುಗಳಿವೆ ಎಂದು ವಿಜಯ್ ಮಲ್ಯ ವಕೀಲರು ಕೋರ್ಟ್‌ಗೆ ಸ್ಪಷ್ಟಪಡಿಸಿದ್ದಾರೆ.
55
ಕೇಂದ್ರ ಸರ್ಕಾರದ ಸ್ಪಷ್ಟನೆ ಕೇಳಿದ ಕೋರ್ಟ್
ವಿಜಯ್ ಮಲ್ಯ ತಮ್ಮ ಹೇಳಿಕೆಯನ್ನು ವಕೀಲರ ಮೂಲಕ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ ಬಳಿಕ ನಡೆದ ವಿಚಾರಣೆಯಲ್ಲಿ ಬಾಂಬೆ ಹೈಕೋರ್ಟ್ ಈ ಕುರಿತು ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ. ಮಲ್ಯ ಪ್ರಕರಣದ ಕುರಿತು ಕೇಂದ್ರ ಸರ್ಕಾರದ ನಿಲುವು, ಆಗ್ರಹವೇನು ಎಂದು ಪ್ರಶ್ನಿಸಿದೆ.
ಕೇಂದ್ರ ಸರ್ಕಾರದ ಸ್ಪಷ್ಟನೆ ಕೇಳಿದ ಕೋರ್ಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ