ಲಾಕ್‌ಡೌನ್‌ ಉಲ್ಲಂಘನೆ, ಲೇಡಿ ಪೊಲೀಸ್‌ ಕೊಡ್ಸಿದ್ರು ಬಿಸಿ ಬಿಸಿ ಕಜ್ಜಾಯ!

First Published Apr 22, 2020, 2:52 PM IST

ಜನರು ಲಾಕ್‌ಡೌನ್ ಉಲ್ಲಂಘಿಸದಿರಲಿ ಎಂದು ಪೊಲೀಸ್ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಒಂದೆಡೆ ಜನ ಸಾಮಾನ್ಯರಿಗೆ ಪರಿಸ್ಥಿತಿ ಎಷ್ಟು ಗಂಭಿರವಾಗಿದೆ ಎಂದು ಅರ್ಥೈಸುತ್ತಿದ್ದರೆ, ಮತ್ತೊಂದೆಡೆ ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಪಾಠವನ್ನೂ ಕಲಿಸುತ್ತಿದ್ದಾರೆ. ಸದ್ಯ ಕೊರೋನಾ ವೈರಸ್ ಹಾಟ್‌ಸ್ಪಾಟ್‌ ಆಗಿರುವ ಇಂದೋರ್‌ನಲ್ಲಿ ಓರ್ವ ಮಹಿಳಾ TI, ಅಗತ್ಯವಿಲ್ಲದೇ ಓಡಾಡುತ್ತಿದ್ದವರಿಗೆ ಲಾಠಿ ಮೂಲಕ ತಮ್ಮದೇ ದಾಟಿಯಲ್ಲಿ ತಿಳಿ ಹೇಳಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ.

ಈ ಲೇಡಿ ಆಫೀಸರ್ ಬೇರಾರೂ ಅಲ್ಲ,ಇಂದೋರ್‌ನ ಸರಫಾ ಠಾಣೆಯ ಇನ್ಸ್‌ಪೆಕ್ಟರ್ ಅಮೃತಾ ಸೋಲಂಕಿ. ಇವರು ಈ ಹಿಂದಿನಿಂದಲೂ ತಮ್ಮದೇ ಸ್ಟೈಲ್‌ಗೆ ಗುರುತಿಸಿಕೊಂಡವರು. ಸೋಮವಾರ ರಾತ್ರಿ ಇಬ್ರು ಗೆಳೆಯರು ಅನಗತ್ಯವಾಗಿ ಓಡಾಡುತ್ತಿರುವುದನ್ನು ನೊಡಿ ತಮ್ಮ ಲಾಠಿ ಬೀಸಿದ್ದಾರೆ. ಇನ್ನು ಕಜ್ಜಾಯ ತಿಂದ ಯುವಕ ಬೆದರಿಕೆ ಹಾಕಲು ಮುಂದಾದಾ, ಯಾರ ಬಳಿ ದೂರು ನೀಡುತ್ತೀಯೋ ನೀಡು, ನಾನು ಯಾರಿಗೂ ಎದರಲ್ಲ ಎಂದು ಗುಡುಗಿದ್ದಾರೆ.
undefined
ಇನ್ನು ಈ ಲೇಡಿ ಆಫೀಸರ್ ಇಬ್ಬರ ಕೈಗೆ ಕೋಲು ಕೊಟ್ಟು ಪರಸ್ಪರ ಹೊಡೆಯಲು ಸೂಚಿಸಿದ್ದಾರೆ. ಇನ್ನು ಪೊಲೀಸರ ಭಯದಿಂದ ಇಬ್ಬರೂ ಒಡೆಯುವಾಗ ಈ ಆಫೀಸರ್ ನಡುವೆ, ನೀನು ಅವನಿಗೆ ಸರಿಯಾಗಿ ಹೊಡೆಯಲಿಲ್ಲ, ನನಗೆ ಸೌಂಡ್ ಕೇಳಿಲ್ಲ ಎಂದಿದ್ದಾರೆ.
undefined
ಇನ್ನು ಇಬ್ಬರೂ ಪರಸ್ಪರ ಏಟು ಕೊಟ್ಟು, ತಿಂದು ಸುಸ್ತಾಗಿ ನೆಲದ ಮೇಲೆ ಕುಳಿತಾಗ, ಹೇಗನಿಸುತ್ತೆ? ಪ್ರತಿ ದಿನ ಬಂದು ನಿಮಗೆ ಬುದ್ದೀ ಹೇಳಿ ಹೇಳಿ ಸಾಕಾಗಿದೆ ಎಂದಿದ್ದಾರೆ.
undefined
ಅಮೃತಾ ಸೋಲಂಕಿ ಇಂದೋರ್‌ಗಿಂತ ಮೊದಲು ರಾಜ್‌ಘಡದಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ಇಲ್ಲಿ ಅವರು ಓರ್ವ ಚಿಉನಾವಣಾ ಅಭ್ಯರ್ಥಿಯ ವಾಹನವನ್ನು ತಡೆದಿದ್ದರು. ಈ ಘಟನೆಯಿಂದಾಗಿ ಅಲ್ಲಿನ ಎಸ್‌ಪಿ ಅವರನ್ನು ಅಮಾನತ್ತುಗೊಳಿಸಿದ್ದರು. ಆದರೆ ಕೋರ್ಟ್‌ ಅಮೃತಾ ನಡೆಯನ್ನು ಸರಿ ಎಂದಿತ್ತು ಹಾಗೂ ಭಡ್ತಿ ನೀಡಿ ಸೇವೆಗೆ ಹಾಜರಾಗುವಣತೆ ಸೂಚಿಸಿತ್ತು.
undefined
ಇಂದೋರ್‌ನ ಮಾಜಿ ಡಿಐಜಿ ರುಚಿ ವರ್ಧನ್ ಮಿಶ್ರಾ, ಅಮೃತಾ ಸೋಲಂಕಿಯನ್ನು ಇಂದೋರ್ ಟಿಐ ಆಗಿ ನೇಮಿಸಿ ಕಳುಹಿಸಿದರು.
undefined
ಟಿಐ ಅಮೃತಾ ಸೋಲಂಕಿ ಸಾಮಾನ್ಯವಾಗಿ ತಮ್ಮ ಕಾರ್ಯ ವೈಖರಿಯಿಂದಾಗಿ ಸದ್ದು ಮಾಡುತ್ತಿರುತ್ತಾರೆ. ಅವರು ಕೆಲಸದ ಜೊತೆಗೆ ಸೋಶಿಯಲ್ ಮಿಡಿಯಾದಲ್ಲೂ ಬಹಳಷ್ಟು ಆಕ್ಟಿವ್ ಆಗಿದ್ದಾರೆ.
undefined
click me!