ಲಾಕ್‌ಡೌನ್ ನಡುವೆ ಹೀಗೆ ನಡೆಯಿತು ಸಿಎಂ ಯೋಗಿ ತಂದೆ ಅಂತಿಮ ಕ್ರಿಯೆ!
First Published | Apr 21, 2020, 5:04 PM ISTಮಂಗಳವಾರ ಬೆಳಗ್ಗೆ ಉತ್ತರಾಖಂಡ್‌ನ ಯಮಕೇಶ್ವರದ ಫೂಲ್‌ಚಟ್ಟೀ ರುದ್ರಭೂಮಿಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಂದೆ ಆನಂದ್ ಸಿಂಗ್ ವಿಷ್ಟ್ ಅಂತ್ಯಕ್ರಿಯೆ ನಡೆಯಿತು.ಸಿಎಂ ಯೋಗಿ ಹಿರಿಯ ಅಣ್ಣ ಮಾನೇಂದ್ರ ವಿಷ್ಟ್ ತಂದೆ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ. ಈ ವೆಳೆ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ವಿಧಾನಸಭೆ ಅಧ್ಯಕ್ಷ ಪ್ರೇಮ್‌ಚಂದ್ ಅಗರ್ವಾಲ್, ಕ್ಯಾಬಿನೆಟ್ ಸಚಿವ ಮದನ್ ಕೌಶಿಕ್, ಸಂಸದ ತೀರಥ್ ಸಿಂಗ್ ರಾವತ್, ಬಾಬಾ ರಾಮ್‌ದೇವ್, ಸ್ವಾಮಿ ಚಿದಾನಂದ್ ಸರಸ್ವತಿ ಸೇರಿದಂತೆ ಅನೇಕ ಇನ್ನಿತರ ಗಣ್ಯರು ಹಾಜರಾಗಿದ್ದರು. ಲಾಕ್‌ಡೌನ್ ಹಿನ್ನೆಲೆ ಸಿಎಂ ಯೋಗಿ ಆದಿತ್ಯನಾಥ್ ಗೈರಾಗಿದ್ದು, ಲಾಕ್‌ಡೌನ್ ಅಂತ್ಯಗೊಂಡ ಬಳಿಕ ಮನೆಗೆ ಭೇಟಿ ನೀಡಲಿದ್ದಾರೆ.