ದೇಶದಲ್ಲಿಯೇ ಹೆಚ್ಚು ಕೊರೋನಾ ವೈರಸ್ ಸೋಂಕಿತರು ಇರುವುದು ಮಹಾರಾಷ್ಟ್ರದಲ್ಲಿ. ಆಗಲೇ 4,200 ಮಂದಿಯನ್ನು ಸೋಂಕು ಕಾಡಿದ್ದು, ಹಲವರು ಅಸುನೀಗಿದ್ದಾರೆ. ಅದರಲ್ಲಿಯೂ ಮುಂಬೈ ಅಂದರೆ ನೆನಪಾಗುವುದು ಅಲ್ಲಿಯ ಅತೀ ದೊಡ್ಡ ಸ್ಲಂ. ಅಲ್ಲಿಗೆ ಮಾತ್ರ ಸೋಂಕು ತಾಗದಿರಲಿ ಎನ್ನುವುದು ಎಲ್ಲರ ಆಶಯವಾಗಿತ್ತು. ಆದರೆ, ದುಷ್ಟ ಕ್ರಿಮಿ ಅಲ್ಲೀಯವರನ್ನು ಹೇಗೆ ಬಿಡುತ್ತೆ? ಆಗಲೇ ಅಲ್ಲಿ 168 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 11 ಮಂದಿ ಅಸುನೀಗಿದ್ದಾರೆ. ವೈದ್ಯರು ತಂಡೋಪ ತಂಡವಾಗಿ ಇಲ್ಲಿನ ನಿವಾಸಿಗಳನ್ನು ಪರೀಕ್ಷಿಸುತ್ತಿದ್ದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಹೇಗಿದೆ ನೋಡಿ ಅಲ್ಲಿಯ ಚಿತ್ರಣ?