ಎಲೆಕ್ಟ್ರಾನಿಕ್ಸ್ ಮತ್ತು ಶಸ್ತ್ರಾಸ್ತ್ರಗಳು
ವಿಯಾನ್(Wion)ವರದಿಯ ಪ್ರಕಾರ, ರಫೇಲ್ ಜೆಟ್‌ಗಳು ತಮ್ಮ ಅರೆ ರಹಸ್ಯ ಏರ್‌ಫ್ರೇಮ್‌ನಿಂದಾಗಿ(semi-stealth airframe)ಕಡಿಮೆ ರಾಡಾರ್ ವೀಕ್ಷಣಾ ಸಾಮರ್ಥ್ಯವನ್ನು ಹೊಂದಿವೆ. ಜೊತೆಗೆ ಅವುಗಳು ಸುಧಾರಿತ AESA ರಾಡಾರ್ (RBE2-AA) ಅನ್ನು ಸಹ ಹೊಂದಿವೆ.
ಮೊದಲೇ ಹೇಳಿದಂತೆ, ಈ ರಫೇಲ್ ಜೆಟ್‌ಗಳು ಸ್ಕಲ್ಪ್ (ಸ್ಟಾರ್ಮ್ ಶ್ಯಾಡೋ) ಕ್ಷಿಪಣಿಗಳು ಮತ್ತು ಹ್ಯಾಮರ್ ಬಾಂಬ್‌ಗಳೊಂದಿಗೆ ಸಜ್ಜುಗೊಂಡಿವೆ. ಅಂಗ್ಲ ಮಾಧ್ಯಮ ಇಂಡಿಯಾ ಟುಡೇ ವರದಿ ಮಾಡಿದಂತೆ ಭಾರತಕ್ಕಾಗಿ ಉತ್ಪಾದಿಸಲ್ಪಟ್ಟ ರಫೇಲ್‌ಗಳು ನಿರ್ದಿಷ್ಟವಾದ 13 ಸುಧಾರಣೆಗಳೊಂದಿಗೆ ಸಿದ್ಧಗೊಂಡಿವೆ. ಇದರಲ್ಲಿ ಮೆಟಿಯರ್ ಬಿಯಾಂಡ್-ವಿಶುವಲ್-ರೇಂಜ್ (BVR) ಕ್ಷಿಪಣಿ, ಸುಧಾರಿತ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್‌ಗಳು, ಉನ್ನತ ರಾಡಾರ್ ಮತ್ತು ಸಂವಹನ ವ್ಯವಸ್ಥೆಗಳು ಸೇರಿವೆ. ರಫೇಲ್ ಸರಣಿಯಲ್ಲಿ ರಫೇಲ್‌ನ SPECTRA EW ಸೂಟ್ ಅತ್ಯುತ್ತಮದ್ದಾಗಿದೆ. ಇದು ಸಕ್ರಿಯ ಜಾಮಿಂಗ್, ಬೆದರಿಕೆ ಗುರುತಿಸುವಿಕೆ, ರಾಡಾರ್ ಡಿಕಾಯ್‌ಗಳು(radar decoys) ಮತ್ತು ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳು ಮತ್ತು ಶತ್ರು ರಾಡಾರ್‌ಗೆ ಹಾನಿ ಮಾಡುವ ಸಾಮರ್ಥ್ಯ ಹೊಂದಿದೆ.