Published : May 08, 2025, 11:04 AM ISTUpdated : May 18, 2025, 07:49 PM IST
ಭಾರತೀಯ ಸೇನೆಯ “ಆಪರೇಷನ್ ಸಿಂಧೂರ್”ನಲ್ಲಿ ಬಳಸಲಾದ ಆತ್ಮಹುತಿ ಡ್ರೋನ್‌ಗಳು ಬೆಂಗಳೂರಿನಲ್ಲಿ ತಯಾರಾಗಿವೆ. ಈ ಡ್ರೋನ್‌ಗಳು ಗುರಿಯನ್ನು ಪತ್ತೆಹಚ್ಚಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದ್ದು, ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತವೆ.
ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಜಂಟಿಯಾಗಿ ನಡೆಸಿದ “ಆಪರೇಷನ್ ಸಿಂಧೂರ್”ನಲ್ಲಿ (Operation Sindoor) ಆತ್ಮಾಹುತಿ ಡ್ರೋನ್‌ಗಳು (SkyStriker suicide drones) ಪ್ರಮುಖ ಪಾತ್ರ ವಹಿಸಿವೆ. ಪಾಕ್ ಆಕ್ರಮಿತ ಕಾಶ್ಮೀರ (POK) ಮತ್ತು ಪಾಕಿಸ್ತಾನದಲ್ಲಿರುವ ಒಂಬತ್ತು ಉಗ್ರಗಾಮಿ ನೆಲೆಗಳ ಮೇಲಿನ ಈ ಪ್ರತೀಕಾರದ ದಾಳಿಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಡ್ರೋನ್‌ಗಳನ್ನು ಬಳಸಲಾಗಿದೆ.
28
ಆತ್ಮಾಹುತಿ ಡ್ರೋನ್ (Suicide Drones) ಅಥವಾ ಲಾಯ್ಟರಿಂಗ್ ಮ್ಯೂನಿಷನ್ (loitering munitions) ಒಂದು ರೀತಿಯ ಸ್ವಯಂಚಾಲಿತ ಆಯುಧ. ಇವು ಸಾಮಾನ್ಯ ಡ್ರೋನ್‌ಗಳಂತೆ ಗಾಳಿಯಲ್ಲಿ ಹಾರಾಡುತ್ತವೆ, ಆದರೆ ಗುರಿಯನ್ನು ಪತ್ತೆ ಹಚ್ಚಿದ ತಕ್ಷಣ ಅದರ ಮೇಲೆ ನೇರವಾಗಿ ದಾಳಿ ಮಾಡಿ ಸ್ಫೋಟಗೊಳ್ಳುತ್ತವೆ. ಅದಕ್ಕಾಗಿಯೇ ಇವುಗಳನ್ನು “ಕಾಮಿಕಾಜೆ ಡ್ರೋನ್‌ಗಳು” ಎಂದೂ ಕರೆಯುತ್ತಾರೆ. ಬಾಲಕೋಟ್ ದಾಳಿ ಬಳಿಕ ಈ ಡ್ರೋನ್‌ಗಳನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು.
38
ಬೆಂಗಳೂರಿನಲ್ಲಿ ಸಿದ್ಧವಾಗುವ ಡ್ರೋನ್
ಬುಧವಾರ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಬಳಕೆಯಾದ ಡ್ರೋನ್‌ಗಳು ಬೆಂಗಳೂರಿನಲ್ಲಿಯೇ ಸಿದ್ಧಗೊಂಡಿದ್ದವು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪಶ್ಚಿಮ ಬೆಂಗಳೂರಿನ ಕೈಗಾರಿಕಾ ಪ್ರದೇಶದಲ್ಲಿ ಈ ಆತ್ಮಹತ್ಯಾ ಡ್ರೋನ್‌ಗಳ ನಿರ್ಮಾಣವಾಗಿದೆ. ಆಲ್ಫಾ ಡಿಸೈನ್ ಮತ್ತು ಇಸ್ರೇಲ್‌ನ ಎಲ್ಬಿಟ್ ಸೆಕ್ಯುರಿಟಿ ಸಿಸ್ಟಮ್ಸ್ ಜಂಟಿಯಾಗಿ ಡ್ರೋನ್ ತಯಾರಿಕೆಯನ್ನು ಮಾಡುತ್ತವೆ. ಈ ಎರಡು ಕಂಪನಿಗಳ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ.
ಭಾರತೀಯ ಸೇನೆ ವಿಶೇಷ 100 ಡ್ರೋನ್ ಖರೀದಿಗೆ ಆರ್ಡರ್ ನೀಡಿತ್ತು. 100 ಕಿಮೀ ದೂರದವರೆಗೆ ಚಲಿಸಬಲ್ಲ ಈ ಡ್ರೋನ್‌ಗಳು 5 ರಿಂದ 10 ಕೆಜಿ ಸಿಸ್ಟಮ್‌ನ್ನುತ ತೆಗೆದುಕೊಂಡು ಸಾಮರ್ಥ್ಯವನ್ನು ಹೊಂದಿವೆ. ಕಡಿಮೆ ಎತ್ತರದಲ್ಲಿ ಕಾರ್ಯನಿರ್ವಹಿಸುವ ಈ ಡ್ರೋನ್‌ಗಳ ಚಲನೆ ಮಾತ್ರ ನಿಶ್ಯಬ್ಧವಾಗಿರುತ್ತವೆ. ಹಾಗಾಗಿ ಇವುಗಳ ಚಲನೆ ರಹಸ್ಯವಾಗಿರುತ್ತದೆ.
58
ಈ ಡ್ರೋನ್‌ಗಳ ಪ್ರತಿಕ್ರಿಯಿಸಲು ಆಲ್ಫಾ ಡಿಸೈನ್‌ನ ಸಿಎಂಡಿ, ಕರ್ನಲ್ (ನಿವೃತ್ತ) ಎಚ್‌ಎಸ್ ಶಂಕರ್ ನಿರಾಕರಿಸಿದ್ದಾರೆ. ಈ ರೀತಿಯ ಪ್ರಶ್ನೆಗಳಿಗೆ ಸರ್ಕಾರ ಅಥವಾ ಸರ್ಕಾರಿ ಅಧಿಕಾರಿಗಳು ಉತ್ತರಿಸಬೇಕಾಗುತ್ತದೆ. ತಾವು ಇಂತಹ ಪ್ರಶ್ನೆಗಳಿಗೆ ಉತ್ತರಿಸೋದು ಸಮಂಜಸವಲ್ಲ ಎಂದು ಹೇಳಿದ್ದಾರೆ.
68
Suicide Bomber
ಡ್ರೋನ್‌ಗಳ ವಿಶೇಷತೆ
ಗುರಿಯನ್ನು ಪತ್ತೆಹಚ್ಚಿ ದಾಳಿ ಮಾಡುವ ಸಾಮರ್ಥ್ಯ, ನಿಗಾ ವ್ಯವಸ್ಥೆಯನ್ನು ಹೊಂದಿವೆ. ಮೊದಲು ಗಾಳಿಯಲ್ಲಿ ಸುತ್ತುತ್ತಾ ಗುರಿಗಳನ್ನು ಗುರುತಿಸುತ್ತದೆ. ಮಾನವ ಹಸ್ತಕ್ಷೇಪವಿಲ್ಲದೆ ಕೆಲಸ ಮಾಡಬಲ್ಲ ಸ್ವಯಂಚಾಲಿತ ವ್ಯವಸ್ಥೆಯನ್ನು ಹೊಂದಿದೆ.
78
ಹೆಚ್ಚು ನಿಖರತೆಯನ್ನು ಹೊಂದಿರುವ ಈ ಡ್ರೋನ್‌ಗಳು ಅತ್ಯಂತ ನಿಖರವಾಗಿ ಗುರಿಯನ್ನು ಹೊಡೆಯುವ ಸಾಮರ್ಥ್ಯ ಹೊಂದಿವೆ. ಒಂದೇ ಮಷಿನ್‌ನಲ್ಲಿ ನಿಗಾ ಇರಿಸೋದು ಮತ್ತು ದಾಳಿ ಮಾಡುವ ತಂತ್ರಜ್ಞಾನವನ್ನು ಹೊಂದಿದೆ.
88
ನಿಗಾ ಇರಿಸಿ ದಾಳಿ ಮಾಡುವ ಕಾರ್ಯಾಚರಣೆಗಳಲ್ಲಿ ಈ ಡ್ರೋನ್‌ಗಳನ್ನು ಬಳಕೆ ಮಾಡಲಾಗುತ್ತದೆ. ಇಂದು ಮಿಲಿಟರಿ ಕಾರ್ಯತಂತ್ರದ ಕೇಂದ್ರಬಿಂದುವಾಗಿ ಡ್ರೋನ್‌ಗಳು ಕೆಲಸ ಮಾಡುತ್ತಿವೆ.