Indian Army robotic mule features: ಭಾರತೀಯ ಸೇನೆಯು ಆಧುನಿಕ ತಂತ್ರಜ್ಞಾನದ ದಿಕ್ಕಿನಲ್ಲಿ ದಾಪುಗಾಲಿಡುತ್ತಿದೆ. ಈ ಕ್ರಾಂತಿಕಾರಿ ಪಯಣದಲ್ಲಿ, 'ರೋಬೋಟಿಕ್ ಮ್ಯೂಲ್' ಎಂಬ ಸ್ವಯಂಚಾಲಿತ ಯಂತ್ರವನ್ನು ಗಡಿ ಕಣ್ಗಾವಲು ಮತ್ತು ಕಾರ್ಯಾಚರಣೆಗಳಿಗಾಗಿ ನಿಯೋಜಿಸಲಾಗಿದೆ. ಚೀನಾ ಮತ್ತು ಪಾಕಿಸ್ತಾನದ ಸೂಕ್ಷ್ಮ ಗಡಿಗಳಲ್ಲಿ ಸಕ್ರಿಯವಾಗಿರುವ ಈ ರೋಬೋಟ್, ಮಾನವ ಸೈನಿಕರಿಗೆ ಶಕ್ತಿಶಾಲಿ ಸಂಗಾತಿಯಾಗಿ ಮಾರ್ಪಟ್ಟಿದೆ.
ರೋಬೋಟಿಕ್ ಮ್ಯೂಲ್ ವಿಶೇಷತೆ ಏನು?
ಈ ರೋಬೋಟಿಕ್ ಮ್ಯೂಲ್ ಸಾಮಾನ್ಯ ಯಂತ್ರವಲ್ಲ. AK-47, INSAS, LMG, ಸ್ನೈಪರ್ ರೈಫಲ್‌ನಂತಹ ಶಸ್ತ್ರಾಸ್ತ್ರಗಳನ್ನು ಹೊಂದಬಲ್ಲ ಈ ಯಂತ್ರ, 12-15 ಕೆಜಿ ತೂಕದ ಮಿಲಿಟರಿ ಸಾಮಗ್ರಿಗಳನ್ನು ಅನಮತ್ತಾಗಿ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಗುಡ್ಡಗಾಡು, ಮರಳು, ಹಿಮ, ಮೆಟ್ಟಿಲುಗಳು, ಚರಂಡಿಗಳು ಮತ್ತು ನೀರಿನಂತಹ ದುರ್ಗಮ ಪ್ರದೇಶಗಳಲ್ಲೂ ಇದು ಸುಲಭವಾಗಿ ಚಲಿಸಬಲ್ಲದು. ಗಂಟೆಗೆ 18 ಕಿಮೀ ವೇಗದಲ್ಲಿ 3.5 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಬಲ್ಲ ಈ ರೋಬೋಟ್, ಕೇವಲ ಒಂದು ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗಿ 21 ಗಂಟೆಗಳ ಕಾಲ ಕೆಲಸ ಮಾಡಬಲ್ಲದು.