ಇರಾನ್-ಇಸ್ರೇಲ್‌ ಯುದ್ಧ: ಭಾರತೀಯರನ್ನು ಬಲವಂತವಾಗಿ ಕರೆಸಿಕೊಳ್ಳಲಾಗುತ್ತಿದೆಯಾ? ಏನಿದು ವಿವಾದ

Published : Jun 21, 2025, 08:33 PM IST

ಇಸ್ರೇಲ್‌ನಲ್ಲಿ ಭಾರತೀಯರ ಬಲವಂತದ ಹಿಂದಿರುಗುವಿಕೆ ಕುರಿತ ಸಾಮಾಜಿಕ ಮಾಧ್ಯಮದ ಸುದ್ದಿಗಳು ನಕಲಿ ಎಂದು ಭಾರತೀಯ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. ತುರ್ತು ಸಂದರ್ಭಗಳಲ್ಲಿ ಸಹಾಯ ಪಡೆಯಲು ರಾಯಭಾರ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕೋರಿದೆ.

PREV
14

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉಂಟಾಗುತ್ತಿರುವ ಗಂಭೀರ ಉದ್ವಿಗ್ನತೆಯ ಮಧ್ಯೆ ಇಸ್ರೇಲ್‌ನಲ್ಲಿರುವ ಭಾರತೀಯರನ್ನು "ಬಲವಂತವಾಗಿ ಭಾರತಕ್ಕೆ ಹಿಂತಿರುಗಿ ಕರೆತರಲು ಒತ್ತಾಯಿಸಲಾಗುತ್ತಿದೆ" ಎಂಬ ಸಂದೇಶಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿದ್ದು, ಇವು ಸಂಪೂರ್ಣ ನಕಲಿ ಎಂದು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗೆ ಸ್ಪಂದಿಸಿರುವ ರಾಯಭಾರ ಕಚೇರಿ, ಇಸ್ರೇಲ್‌ನಲ್ಲಿರುವ ಭಾರತೀಯ ಕಾರ್ಮಿಕರು ನೋಂದಾಯಿಸದಿದ್ದರೆ ಅವರಿಗೆ ಜೈಲು ಅಥವಾ ದಂಡ ವಿಧಿಸಲಾಗುತ್ತದೆ ಎಂಬುದು ಸುಳ್ಳು. ಇಂತಹ ಹುಚ್ಚು ಸಂದೇಶಗಳಿಗೆ ಬಲಿಯಾಗಬೇಡಿ, ಈ ರೀತಿಯ ಸಂದೇಶಗಳನ್ನು ಹಂಚಿಕೊಳ್ಳಬೇಡಿ ಎಂದು ಎಚ್ಚರಿಸಿದೆ.‌

24

ಇದರ ಬದಲಿಗೆ, ಇಸ್ರೇಲ್‌ನಲ್ಲಿರುವ ಭಾರತೀಯ ನಾಗರಿಕರು ಯಾವುದೇ ತುರ್ತು ಪರಿಸ್ಥಿತಿಯ ನಿರ್ವಹಣೆಗೆ ಮತ್ತು ಭಾರತ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ರಾಯಭಾರ ಕಚೇರಿಯ ಅಧಿಕೃತ ವೆಬ್‌ಸೈಟ್ ಅಥವಾ @Indemtel ಎಂಬ ಟ್ವಿಟ್ಟರ್ ಖಾತೆಯ ಮೂಲಕ ನಿಜವಾದ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದು ಕಚೇರಿ ಸಲಹೆ ನೀಡಿದೆ. 

34

ಭಾರತ ಸರ್ಕಾರದಿಂದ ಆಪರೇಷನ್ ಸಿಂಧು, ಸಕ್ರಿಯ ಸ್ಥಳಾಂತರ ಕಾರ್ಯಾಚರಣೆ

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಇಸ್ರೇಲ್-ಇರಾನ್ ಸಂಘರ್ಷದ ಹಿನ್ನಲೆಯಲ್ಲಿ, ಭಾರತ ತನ್ನ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು 'ಆಪರೇಷನ್ ಸಿಂಧು' ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಈ ಮುಂದುವರಿದ ಪ್ರಯತ್ನದ ಭಾಗವಾಗಿ, ಇಸ್ರೇಲ್ ಮತ್ತು ಇರಾನ್‌ನಿಂದ ಎರಡು ಹಂತದ ವಿಶೇಷ ವಿಮಾನಗಳ ಮೂಲಕ ಸಾವಿರಕ್ಕೂ ಹೆಚ್ಚು ಭಾರತೀಯರು ದೆಹಲಿಗೆ ಮರಳಿದ್ದಾರೆ. ಶುಕ್ರವಾರ ತಡರಾತ್ರಿ, 290 ಮಂದಿ ಭಾರತೀಯರನ್ನು ಹೊತ್ತಿರುವ ಒಂದು ವಿಶೇಷ ವಿಮಾನ ಇರಾನ್‌ನಿಂದ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿತು. ಈ ಪ್ರಯಾಣಿಕರಲ್ಲಿ ವಿದ್ಯಾರ್ಥಿಗಳು, ಧಾರ್ಮಿಕ ಯಾತ್ರಿಕರು ಸೇರಿದ್ದಾರೆ. ಶನಿವಾರದಂದು, ಮಹಾನ್ ಏರ್‌ನ ಮತ್ತೊಂದು ವಿಮಾನದಲ್ಲಿ ಇಸ್ಲಾಮಿಕ್ ರಿಪಬ್ಲಿಕ್‌ನಿಂದ ಬಂದ 256 ಮಂದಿ ಭಾರತೀಯ ವಿದ್ಯಾರ್ಥಿಗಳು ದೆಹಲಿಗೆ ಸುರಕ್ಷಿತವಾಗಿ ಬಂದಿದ್ದಾರೆ. ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರದವರು ಎನ್ನಲಾಗಿದೆ.

44

ನೋಂದಣಿ ಅಗತ್ಯವಿದೆ

ರಾಯಭಾರ ಕಚೇರಿಯು ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯರನ್ನು ತಮ್ಮ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಲು ಪೂರಕವಾಗಿ ಕೇಳಿಕೊಂಡಿದೆ. ನೋಂದಣಿಯು ತುರ್ತು ಪರಿಸ್ಥಿತಿಗಳಲ್ಲಿ ಅವರ ಸಂಪರ್ಕವನ್ನು ಸುಗಮಗೊಳಿಸುವುದರ ಜೊತೆಗೆ, ಸರ್ಕಾರದ ಸಹಾಯಯೋಜನೆಗಳನ್ನು ಪಡೆಯಲು ಸಹ ಉಪಯುಕ್ತವಾಗುತ್ತದೆ. ನೋಂದಣಿಗೆ ಸಂಪರ್ಕದ ಲಿಂಕ್:

https://www.indembassyisrael.gov.in/indian_national_reg

ತುರ್ತು ಸಂಪರ್ಕ ಸಂಖ್ಯೆ (24/7):

+972 54-7520711

+972 54-3278392

Email: cons1.telaviv@mea.gov.in

ಈ ಘಟನೆಯ ನಡುವೆಯೂ, ಭಾರತ ಸರ್ಕಾರ ತನ್ನ ಪ್ರಜೆಗಳ ಸುರಕ್ಷತೆಗೆ ಬದ್ಧವಾಗಿದೆ ಎಂಬುದನ್ನು ಈ ಕ್ರಮಗಳು ಮತ್ತೊಮ್ಮೆ ಸಾಬೀತುಪಡಿಸಿವೆ.

Read more Photos on
click me!

Recommended Stories