ಪೂರ್ವ ಲಡಾಕ್‌ನಲ್ಲಿ ಕಳೆದ ಹಲವು ತಿಂಗಳುಗಳಿಂದ ಚೀನಾದ ಮಾಡುತ್ತಿರುವ ಕ್ಯಾತೆ ನಡುವೆ ಭಾರತೀಯ ಸೇನೆಯ ಈ ಸೇನಾ ಶಕ್ತಿ ಅನಾವರಣ ಮಹತ್ವ ಪಡೆದುಕೊಂಡಿದೆ.
ಈಗಾಗಲೇ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತ ತನ್ನ ಯುದ್ಧನೌಕೆಗಳ ನಿಯೋಜನೆ ಮಾಡುತ್ತ ಬಂದಿದೆ.
ಪೂರ್ವ ಲಡಾಖ್‌ನಲ್ಲಿ ಸೇನೆ ನಿಯೋಜನೆ ಸೇರಿದಂತೆ ಈಗಿರುವ ಭದ್ರತಾ ವ್ಯವಸ್ಥೆಯಲ್ಲಿ ಯಾವುದೆ ಬದಲಾವಣೆ ಇಲ್ಲ.
ಪೂರ್ವ ಲಡಾಖ್‌ನ ಚೀನಾದ ಪೀಪಲ್ಸ್ ಲಿಬರೇಶನ್ ಸೈನ್ಯ ಮಾಡುತ್ತಿರುವ ತಂತ್ರಗಳಿಗೆ ಭಾರತೀಯ ಸೇನೆ ಪ್ರತಿತಂತ್ರ ಸಿದ್ಧಮಾಡಿಕೊಂಡಿದೆ.
'ನಿರ್ಭಯ್', ಸೂಪರ್ಸಾನಿಕ್ ಕ್ಷಿಪಣಿ 'ಬ್ರಹ್ಮೋಸ್' ಮತ್ತು 'ಆಕಾಶ್' ಕ್ಷಿಪಣಿಗಳನ್ನು ಭಾರತ ನಿಯೋಜನೆ ಮಾಡಿಕೊಂಡಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆ ಎಲ್ಲ ಅಡೆತಡೆಗಳಿಗೆ ಕ್ಲೀಯರೆನ್ಸ್ ನೀಡಿದ್ದು ಸೇನೆಗೆ ಸರ್ವ ಸ್ವಾತಂತ್ರ್ಯ ನೀಡಲಾಗಿದೆ.
ನೌಕಾಪಡೆ ಮತ್ತು ವಾಯುಪಡೆಗೆ ಸುಮಾರು 970 ಕೋಟಿ ರೂ. ಹೆಚ್ಚುವರಿ ನೀಡಲಾಗಿದೆ.
ನವೆಂಬರ್ 23 ರಂದು, ಭಾರತೀಯ ಮತ್ತು ಆಸ್ಟ್ರೇಲಿಯಾದ ನೌಕಾಪಡೆಗಳು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಎರಡು ದಿನಗಳ ಕಾಲ ಶಕ್ತಿ ಅನಾವರಣ ಮಾಡಲಿವೆ.
ನೌಕಾ ಶಕ್ತಿಯ ಸಾಮರ್ಥ್ಯ, ಯುದ್ಧ ವಿಮಾನಗಳು, ಮಿಲಿಟರಿ ಶಕ್ತಿ ಪ್ರದರ್ಶನವಾಗಲಿದೆ.
ಜಾರಿಯಲ್ಲಿರುವ ಮ್ಯೂಚುಯಲ್ ಲಾಜಿಸ್ಟಿಕ್ಸ್ ಸಪೋರ್ಟ್ ಅಗ್ರಿಮೆಂಟ್ (ಎಂಎಲ್ಎಸ್ಎ) ಪ್ರಕಾರ ದೇಶಗಳು ಪರಸ್ಪರ ತಮ್ಮ ನೆಲೆಗಳನ್ನು ಇನ್ನೊಂದು ದೇಶದ ಬಳಕೆಗೆ ನೀಡಬಹುದಾಗಿದೆ. ಭಾರತ, ಯುಎಸ್ಎ, ಫ್ರಾನ್ಸ್, ಸಿಂಗಾಪುರ್ ಮತ್ತು ಜಪಾನ್ ಈ ಒಪ್ಪಂದಗಳಿಗೆ ಸಹಿ ಹಾಕಿವೆ.