ನೌಕಾಪಡೆಯಲ್ಲಿ ಬರೋಬ್ಬರಿ 30 ವರ್ಷಗಳ ಕಾಲ ರಾಷ್ಟ್ರ ಸೇವೆ ಮಾಡಿರುವ ಈ ನೌಕೆಗೆ ಕೇಂದ್ರ ಹಡಗು ಸಚಿವ ಮನ್ಸುಖ್ ಮಾಂಡವೀಯ ಅವರು ಸೋಮವಾರ ಬೀಳ್ಕೊಡುಗೆ ನೀಡಿದರು
ಈ ವೇಳೆ ಮಾತನಾಡಿದ ಅವರು, ಈ ನೌಕೆಯನ್ನು ವಸ್ತು ಸಂಗ್ರಹಾಲಯ (ಮ್ಯೂಸಿಯಂ) ಮಾಡುವ ಕುರಿತು ಪ್ರಯತ್ನಗಳು ನಡೆದವು.
ಈ ಸಂಬಂಧ ಹಲವು ಸುತ್ತಿನ ಸಮಾಲೋಚನೆಗಳು ಜರುಗಿದವು. ಕೇಂದ್ರ ಸರ್ಕಾರ 400ರಿಂದ 500 ಕೋಟಿ ರು. ಖರ್ಚು ಮಾಡಲು ಸಿದ್ಧವಿತ್ತು. ಆದರೆ ಮ್ಯೂಸಿಯಂ ಮಾಡಿದರೂ ಈ ನೌಕೆ ಹೆಚ್ಚೆಂದರೆ ಒಂದು ದಶಕದವರೆಗೆ ಮಾತ್ರ ಬಳಕೆಗೆ ಸಿಗಬಹುದು ಎಂದು ತಜ್ಞರ ಸಮಿತಿ ವರದಿ ನೀಡಿತು.
ಕಬ್ಬಿಣಾಂಶ ಹೆಚ್ಚು ದಿನ ಬಾಳಿಕೆ ಬಾರದ ಕಾರಣ ಅಪಘಾತಗಳಾಗಬಹುದು ಎಂದು ಎಚ್ಚರಿಸಿತು.
ಹೀಗಾಗಿ ನಾವು ನೌಕೆಗೆ ವಿದಾಯ ಹೇಳಬೇಕಾಯಿತು ಎಂದು ವಿವರಿಸಿದರು. ಈ ನೌಕೆ ಒಟ್ಟಾರೆ 11 ಲಕ್ಷ ಕಿ.ಮೀ. ಓಡಿದೆ. ಇದು ಇಡೀ ವಿಶ್ವವನ್ನೇ 27 ಬಾರಿ ಸುತ್ತುವುದಕ್ಕೆ ಸಮ ಎಂದು ತಿಳಿಸಿದರು.
1959ರಲ್ಲಿ ಬ್ರಿಟನ್ ನೌಕಾಪಡೆಯಲ್ಲಿ ಹಮ್ಸ್‌ರ್ ಹೆಸರಿನಲ್ಲಿ ಸೇವೆಯಲ್ಲಿದ್ದ ಈ ನೌಕೆ 1984ರಲ್ಲಿ ನಿವೃತ್ತವಾಗಿತ್ತು.
ಭಾರತ ಅದನ್ನು ಖರೀದಿಸಿ ಐಎನ್‌ಎಸ್ ವಿರಾಟ್ ಹೆಸರಿನಲ್ಲಿ 1987ರಲ್ಲಿ ಸೇವೆ ಸೇರ್ಪಡೆ ಮಾಡಿಕೊಂಡಿತ್ತು. 2017ರಲ್ಲಿ ಸೇವೆಯಿಂದ ನಿವೃತ್ತವಾಗಿತ್ತು.