ತಿರುಪತಿಯಲ್ಲಿ ಕರ್ನಾಟಕ ಭವನಕ್ಕೆ ಬಿಎಸ್‌ವೈ ಶಂಕು: 200 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ

First Published | Sep 25, 2020, 10:17 AM IST

ತಿರುಪತಿ(ಸೆ.25): ವಿಶ್ವಪ್ರಸಿದ್ಧ ತಿರಮಲದ ವೆಂಕಟೇಶ್ವರ ದೇವಸ್ಥಾನದ ಸನಿಹ 200 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಕರ್ನಾಟಕ ಭವನಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 

ಶಂಕುಸ್ಥಾಪನೆ ಸಂದರ್ಭದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್ಮೋಹನ ರೆಡ್ಡಿ ಕೂಡ ಹಾಜರಿದ್ದರು.
ಕರ್ನಾಟಕ ಭವನದಲ್ಲಿ ತಲೆಯೆತ್ತಲಿರುವ ಎರಡು ಬೃಹದಾಕಾರದ ಕಟ್ಟಡಗಳು
Tap to resize

ಈ ಕಟ್ಟಡಗಳಲ್ಲಿ ಕರ್ನಾಟಕದ ಭಕ್ತರು ತಂಗಲು ಸಕಲ ಸೌಲಭ್ಯಗಳುಳ್ಳ ಕೋಣೆಗಳ ನಿರ್ಮಾಣ ಹಾಗೂ ಕಲ್ಯಾಣ ಮಂಟಪವನ್ನೂ ಕಟ್ಟುವ ಯೋಜನೆ ಹಾಕಿಕೊಳ್ಳಲಾಗಿದೆ.
ಕರ್ನಾಟಕ ಸರ್ಕಾರ ಸಿದ್ಧಪಡಿಸಿರುವ ಯೋಜನೆಯ ಅನುಸಾರ ತಿರುಮಲ ಬೆಟ್ಟದ ಮೇಲುಸ್ತುವಾರಿ ನೋಡಿಕೊಳ್ಳುವ ತಿರುಪತಿ-ತಿರುಮಲ ದೇವಸ್ಥಾನ ಸಮಿತಿ (ಟಿಟಿಡಿ), ಕರ್ನಾಟಕ ಭವನ ನಿರ್ಮಿಸಲಿದೆ. ವೆಚ್ಚವನ್ನೂ ಕರ್ನಾಟಕ ಸರ್ಕಾರವೇ ಭರಿಸಲಿದೆ.
ಶಂಕುಸ್ಥಾಪನೆಗೂ ಮೊದಲು ಬೆಳಗ್ಗೆ ಶ್ರೀವಾರಿ ಬ್ರಹ್ಮರಥೋತ್ಸವದ ಈ ಶುಭ ಸಂದರ್ಭದಲ್ಲಿ ವೆಂಕಟೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಯಡಿಯೂರಪ್ಪ ಅವರನ್ನು ಮುಖ್ಯದ್ವಾರದಲ್ಲಿ ಸ್ವಾಗತಿಸಿದ ಜಗನ್‌ ಮೋಹನ್‌ ರೆಡ್ಡಿ
ಇಬ್ಬರೂ ಒಟ್ಟಾಗಿಯೇ ವೆಂಕಟೇಶ್ವರನ ದರ್ಶನ ಪಡೆದು, ಪೂಜೆ ಸಲ್ಲಿಸಿದ ಯಡಿಯೂರಪ್ಪ- ಜಗನ್‌ ಮೋಹನ್‌ ರೆಡ್ಡಿ
ಇದೇ ವೇಳೆ ಇಬ್ಬರೂ ಮುಖ್ಯಮಂತ್ರಿಗಳು, ಕೊರೋನಾ ನಿಯಂತ್ರಣಕ್ಕೆಂದು ಕಳೆದ 3 ತಿಂಗಳಿಂದ ನಡೆಯುತ್ತಿರುವ ‘ಸುಂದರಕಾಂಡ ಪಾರಾಯಣ’ದಲ್ಲಿ ಪಾಲ್ಗೊಂಡರು.

Latest Videos

click me!