ಈ ಯುವತಿ ಪಾಕಿಸ್ತಾನಿ ಸ್ಪೈ; ಭಾರತಕ್ಕೆ ಬಂದ ಮೊದಲ ದಿನವೇ ಸಿಕ್ಕಿಬಿದ್ದ ವಿಡಿಯೋ ವೈರಲ್!

Published : Dec 18, 2025, 05:01 PM IST

ಇನ್‌ಸ್ಟಾಗ್ರಾಮ್‌ನಲ್ಲಿ 'ಭಾರತದಲ್ಲಿ ಪಾಕಿಸ್ತಾನಿ ಸ್ಪೈ' ಎಂಬ ಹೊಸ ರೀಲ್ಸ್ ಟ್ರೆಂಡ್ ವೈರಲ್ ಆಗಿದೆ. ಈ ತಮಾಷೆಯ ವೀಡಿಯೋಗಳ ನಡುವೆಯೇ ಪಾಕ್ ಯುವತಿ ಸ್ಪೈ ಆಗಿ ಬಂದು ಸಿಕ್ಕಿಬಿದ್ಇರುವ ವಿಡಿಯೋ ಭಾರೀ ವೈರಲ್ ಆಗಿದೆ. ಸಂಪೂರ್ಣ ಮಾಹಿತಿ ತಿಳಿಯಲು ಓದಿ.

PREV
19

ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ವೇದಿಕೆಗಳಲ್ಲಿ 'ಧುರಂಧರ್' (Dhurandhar) ಶೈಲಿಯ ರೀಲ್ಸ್‌ಗಳು ಸಖತ್ ಸದ್ದು ಮಾಡುತ್ತಿವೆ. 'ಪಾಕಿಸ್ತಾನದಲ್ಲಿ ಭಾರತೀಯ ಗೂಢಚಾರನ ಮೊದಲ ದಿನ' ಎಂಬ ಟ್ರೆಂಡ್ ಭಾರತೀಯ ಯುವಜನತೆಯಲ್ಲಿ ಹೊಸ ಕ್ರೇಜ್ ಸೃಷ್ಟಿಸಿದೆ.

29

ಆದರೆ ಈ ಹಾಸ್ಯಭರಿತ ವೀಡಿಯೋಗಳ ಬೆನ್ನಲ್ಲೇ ಗಂಭೀರ ರಾಜಕೀಯ ಚರ್ಚೆಯೊಂದು ಶುರುವಾಗಿದೆ. ಇದೀಗ ಇದೇ ಶೈಲಿಯಲ್ಲಿ ಪಾಕಿಸ್ತಾನಿ ಯುವತಿಯೊಬ್ಬಳು ಭಾರತದಲ್ಲಿ ಪಾಕಿಸ್ತಾನ ಸ್ಪೈ ಮೊದಲ ದಿನ ಎಂಬ ಶೀರ್ಷಿಕೆಯಡಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾಳೆ. ಈ ವಿಡಿಯೋ ಭಾರತದಲ್ಲಿಯೂ ಕೂಡ ವೈರಲ್ ಆಗುತ್ತಿದೆ.

39

ಏನಿದು 'ಸ್ಪೈ' ಟ್ರೆಂಡ್?: ಭಾರತೀಯ ಕಂಟೆಂಟ್ ಕ್ರಿಯೇಟರ್‌ಗಳು ಪಾಕಿಸ್ತಾನದಲ್ಲಿ ಗೂಢಚಾರರಾಗಿ ಹೋದಾಗ ಹೇಗೆ ಸಿಕ್ಕಿಬೀಳುತ್ತಾರೆ ಎಂಬ ಬಗ್ಗೆ ತಮಾಷೆಯ ವೀಡಿಯೋಗಳನ್ನು ಮಾಡುತ್ತಿದ್ದಾರೆ. ಉದಾಹರಣೆಗೆ, ಅಭ್ಯಾಸಬಲದಿಂದ 'ನಮಸ್ತೆ' ಮಾಡುವುದು ಅಥವಾ 'ಜೈ ಶ್ರೀರಾಮ್' ಎಂದು ಘೋಷಣೆ ಕೂಗುವುದು, ಹಸುಗಳು ಕಂಡಾಗ ಅದನ್ನು ಮುಟ್ಟಿ ನಮಸ್ಕರಿಸುವುದು, ದೇವಸ್ಥಾನ ಬಂದಾಗ ನಮಿಸುವುದು ಹೀಗೆ ಮಾಡುವ ಮೂಲಕ ಪಾಕಿಸ್ತಾನದಲ್ಲಿ ಸಿಕ್ಕಿಬೀಳುವ ದೃಶ್ಯಗಳು ವೈರಲ್ ಆಗುತ್ತಿವೆ.

49

ಇದಕ್ಕೆ ಪ್ರತಿಯಾಗಿ ಪಾಕಿಸ್ತಾನಿಗಳು ಕೂಡ 'ಭಾರತದಲ್ಲಿ ಪಾಕಿಸ್ತಾನಿ ಸ್ಪೈ' ಎಂಬ ಟ್ರೆಂಡ್ ಆರಂಭಿಸಿದ್ದಾರೆ. ಕೇಸರಿ ಬಟ್ಟೆ ಧರಿಸಿ, ತಿಲಕವಿಟ್ಟುಕೊಂಡು ಭಾರತದಲ್ಲಿ ತಮಾಷೆಯಾಗಿ ಸಿಕ್ಕಿಬೀಳುವ ವೀಡಿಯೋಗಳನ್ನು ಅವರು ಹಂಚಿಕೊಳ್ಳುತ್ತಿದ್ದಾರೆ.

59

ಅತುಲ್ ಕುಮಾರ್ ಮಿಶ್ರಾ ಅವರ ಮಾರ್ಮಿಕ ವಿಶ್ಲೇಷಣೆ: ಈ ಕುರಿತು ಟ್ವೀಟ್ ಮಾಡಿರುವ ಅತುಲ್ ಕುಮಾರ್ ಮಿಶ್ರಾ ಅವರು ಈ ಟ್ರೆಂಡ್‌ನ ಹಿಂದಿನ ಒಂದು ಕಹಿ ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ. 'ಪಾಕಿಸ್ತಾನಿ ಕಂಟೆಂಟ್ ಕ್ರಿಯೇಟರ್‌ಗಳು ಒಂದು ಮುಖ್ಯ ವಿಷಯವನ್ನು ಮರೆತಿದ್ದಾರೆ. ಭಾರತದಲ್ಲಿರುವ ಪಾಕಿಸ್ತಾನಿ ಗೂಢಚಾರರಿಗೆ ಯಾವುದೇ ವೇಷ ಮರೆಸುವ ಅಥವಾ ಮೇಕಪ್ ಮಾಡಿಕೊಳ್ಳುವ ಅಗತ್ಯವಿಲ್ಲ. ಅವರು ಇಲ್ಲಿ ತುಂಬಾ ಮುಕ್ತವಾಗಿ ಮತ್ತು ಆರಾಮವಾಗಿ ಓಡಾಡುತ್ತಿರುತ್ತಾರೆ' ಎಂದು ಅವರು ಕುಟುಕಿದ್ದಾರೆ.

69

ಭಾರತದಲ್ಲಿರುವ ಪಾಕಿಸ್ತಾನಿ ಏಜೆಂಟ್‌ಗಳು ಯಾವುದೇ ರಹಸ್ಯ ತಂತ್ರಗಳನ್ನು ಬಳಸದೆ, ಅತ್ಯಂತ ಶಾಂತಿಯುತವಾಗಿ ಜೀವನ ನಡೆಸುತ್ತಿರುತ್ತಾರೆ. ಈ ಹಿಂದೆ ಕೆಲವು ರಾಜ್ಯ ಸರ್ಕಾರಗಳೇ ಇಂತಹವರಿಗೆ ರಕ್ಷಣೆ ನೀಡಿದ ಉದಾಹರಣೆಗಳಿವೆ. ಇಂದಿಗೂ ಕೆಲವು ಸರ್ಕಾರಗಳು ಇಂತಹವರಿಗೆ ಸಹಾಯ ಮಾಡಲು ತುದಿಗಾಲಿನಲ್ಲಿ ನಿಂತಿರುತ್ತವೆ.

79

ಹಾಗಾಗಿ, ಪಾಕಿಸ್ತಾನಿ ಗೂಢಚಾರರಿಗೆ ಭಾರತದಲ್ಲಿ ಯಾವುದೇ ಕಷ್ಟವಿಲ್ಲ, ಅವರು ಕೇವಲ ಸರಿಯಾದ ರಾಜ್ಯವನ್ನು ಆಯ್ದುಕೊಂಡರೆ ಸಾಕು, ಅವರ ಭವಿಷ್ಯವೇ ಬದಲಾಗುತ್ತದೆ ಎಂದು ಮಿಶ್ರಾ ಅವರು ಮಾರ್ಮಿಕವಾಗಿ ಟೀಕಿಸಿದ್ದಾರೆ. ಒಟ್ಟಾರೆಯಾಗಿ, ಜಾಲತಾಣದಲ್ಲಿ ಇದು ಕೇವಲ ತಮಾಷೆಯ ರೀಲ್ಸ್ ಆಗಿ ಕಂಡರೂ, ಗಡಿ ಭದ್ರತೆ ಮತ್ತು ಆಂತರಿಕ ವ್ಯವಸ್ಥೆಯ ಬಗ್ಗೆ ಒಂದು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

89

ಇನ್ನು ಗ್ರಾಮಂದ್ನೂರ್ (gramandnoor) ಎಂಬ ಕಂಟೆಂಟ್ ಕ್ರಿಯೇಟರ್ ಒಬ್ಬರು ಈ ಬಗ್ಗೆ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಕೇವಲ ಒಂದು ದಿನದಲ್ಲಿ 2.9 ಮಿಲಿಯನ್ (29 ಲಕ್ಷಕ್ಕಿಂತ ಅಧಿಕ) ಜನರು ವೀಕ್ಷನೆ ಮಾಡಿದ್ದಾರೆ. 1.23 ಲಕ್ಷ ಜನರು ಲೈಕ್ ಮಾಡಿದ್ದಾರೆ. ಜೊತೆಗೆ 3 ಸಾವಿರಕ್ಕೂ ಅಧಿಕ ಕಾಮೆಂಟ್‌ಗಳನ್ನು ಮಾಡಿದ್ದಾರೆ.

99

ಈ ಯುವತಿ ಭಾರತಕ್ಕೆ ಬಂದಿರುವ ಪಾಕಿಸ್ತಾನಿ ಏಜೆಂಟ್ ವೇಷ ಧರಿಸಿದ್ದರೂ, ಭಾರತೀಯ ವೇಷ-ಭೂಷಣವನ್ನು ಸೂಕ್ತವಾಗಿ ಧರಿಸಿದ್ದಾರೆ. ಇನ್ನು ಮಾತನಾಡುವಾಗ ಕೆಲವೆಡೆ ತೊದಲಿಸಿದ್ದಾರೆ. ಕೊನೆಯದಾಗಿ ಪಾಕಿಸ್ತಾನ ಸರ್ಕಾರದಿಂದ ಯುವಜನರಿಗೆ ನೀಡಲಾಗುವ ಮುಖ್ಯಮಂತ್ರಿ ಲ್ಯಾಪ್‌ಟಾಪ್ ಯೋಜನೆಯ ಬ್ಯಾಗ್ ಅನ್ನು ತೆಗೆದುಕೊಂಡು ಬಂದಿರುವುದು ಭಾರತೀಯರಿಗೆ ಗೊತ್ತಾಗುತ್ತದೆ. ಆಗ ನೀವು ಪಾಕಿಸ್ತಾನದ ಏಜೆಂಟ್ ಎಂದು ಅವರನ್ನು ನಾಶ ಮಾಡುತ್ತಾರೆ ಎಂಬುದನ್ನು ವಿಡಿಯೋ ಮೂಲಕ ತೋರಿಸಿದ್ದಾರೆ.

Read more Photos on
click me!

Recommended Stories