ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ 9 ಟೆರರ್ ಕ್ಯಾಂಪ್‌ಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಪಾಕಿಸ್ತಾನ ತೀಕ್ಷ್ಣ ಪ್ರತಿಕ್ರಿಯೆ ನೀಡುವುದಾಗಿ ಹೇಳಿದೆ. ಗಡಿಯಲ್ಲಿ ಗುಂಡಿನ ಚಕಮಕಿ ಮತ್ತು ಶೆಲ್ ದಾಳಿ ನಡೆದಿದೆ.
ಭಾರತ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಟೆರರ್ ಕ್ಯಾಂಪ್‌ಗಳ ಮೇಲೆ ಬುಧವಾರ ಬೆಳಗಿನ ಜಾವ ಕ್ಷಿಪಣಿ ದಾಳಿ ನಡೆಸಿದೆ. ಇದರಲ್ಲಿ ಅಪಾರ ಪ್ರಮಾಣದ ಸಾವು ನೋವು ಉಂಟಾಗಿದೆ ಎಂದು ವರದಿಯಾಗಿದೆ.
28
ಇನ್ನೊಂದೆಡೆ ಭಾರತದಿಂದ ದಾಳಿ ಆಗಿರುವುದನ್ನು ಪಾಕಿಸ್ತಾನ ಕೂಡ ಖಚಿತಪಡಿಸಿದೆ. ಪಂಜಾಬ್ ಪ್ರಾಂತ್ಯದ ಬಹವಾಲ್ಪುರ್, ಮುರಿಡ್ಕೆ, ಪಾಕ್ ಆಕ್ರಮಿಯ ಕಾಶ್ಮೀರದ ಮುಜಫರಾಬಾದ್, ಕೋಟ್ಲಿ, ಬಾಗ್‌ನಲ್ಲಿ ದಾಳಿ ಆಗಿದೆ ಎಂದು ತಿಳಿಸಿದೆ.
38
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೆಚ್ಚಿನ ವಿವರಗಳನ್ನು ನೀಡದೇ, ಭಾರತದ ಈ ದಾಳಿಗೆ ತೀಕ್ಷ್ಣ ಪ್ರತಿಕ್ರಿಯೆಯನ್ನು ತಮ್ಮ ದೇಶ ನೀಡುತ್ತಿದ ಎಂದು ಹೇಳಿದ್ದಾರೆ.
ಈ ನಡುವೆ, ಭಾರತ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಿಭಜಿಸುವ ನಿಯಂತ್ರಣ ರೇಖೆಯುದ್ದಕ್ಕೂ ಭಾರೀ ಗುಂಡಿನ ಚಕಮಕಿ ಮತ್ತು ಶೆಲ್ ದಾಳಿ ನಡೆದಿದೆ ಎಂದು ವರದಿಗಳು ತಿಳಿಸಿವೆ.
58
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಅಧಿಕಾರಿಗಳು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಮದರಸಾಗಳು ಹಾಗೂ ಮಸೀದಿಗಳಿಂದ ಹೊರಗಿರುವಂತೆ ಜನರಿಗೆ ಅಲರ್ಟ್ ನೀಡಿದೆ.
68
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಬುಧವಾರ ಬೆಳಗಿನ ಜಾವ ಭಾರತೀಯ ಪಡೆಗಳು ಕ್ಷಿಪಣಿ ದಾಳಿ ನಡೆಸಿದೆ. ನಿಷೇಧಿತ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಗುಂಪುಗಳ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
78
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಪರಿಸ್ಥಿತಿಯನ್ನು "ನಾಚಿಕೆಗೇಡಿನ ಸಂಗತಿ" ಎಂದು ಕರೆದಿದ್ದು, "ಇದು ಬೇಗನೆ ಕೊನೆಗೊಳ್ಳುತ್ತದೆ" ಎಂದು ಆಶಿಸಿದ್ದಾರೆ.
88
ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣದಲ್ಲಿ ನಾಗರಿಕರ ಮೇಲೆ ನಡೆದ ಮಾರಕ ದಾಳಿಗೆ ಭಾರತ ಪಾಕಿಸ್ತಾನವನ್ನು ದೂಷಿಸಿದೆ. ಪಾಕಿಸ್ತಾನ ಈ ಆರೋಪಗಳನ್ನು ತಿರಸ್ಕರಿಸಿದೆ.