ಸೌದಿ ಪುರುಷರು ಪಾಕ್ ಸೇರಿದಂತೆ ಈ 4 ದೇಶದವರನ್ನು ಮದುವೆಯಾಗುವಂತಿಲ್ಲ!

Published : May 05, 2025, 10:24 AM ISTUpdated : May 05, 2025, 10:26 AM IST

ಪಾಕಿಸ್ತಾನಿ ಯುವತಿಯನ್ನು ಮದುವೆಯಾದ ಸಿಆರ್‌ಪಿಎಫ್ ಸೈನಿಕ ಮುನೀರ್ ಖಾನ್ ಕೆಲಸ ಕಳೆದುಕೊಂಡಿದ್ದಾರೆ. ಈ ಘಟನೆಯ ಬೆನ್ನಲ್ಲೇ ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನ ಸೇರಿದಂತೆ ನಾಲ್ಕು ದೇಶಗಳ ಮಹಿಳೆಯರನ್ನು ಮದುವೆಯಾಗುವುದಕ್ಕೆ ಇರುವ ನಿಷೇಧ ಮತ್ತೆ ಚರ್ಚೆಗೆ ಬಂದಿದೆ.

PREV
16
ಸೌದಿ ಪುರುಷರು ಪಾಕ್ ಸೇರಿದಂತೆ ಈ 4 ದೇಶದವರನ್ನು ಮದುವೆಯಾಗುವಂತಿಲ್ಲ!

ಜಮ್ಮು ಕಾಶ್ಮೀರದ 41ನೇ ಬಟಾಲಿಯನ್‌ನಲ್ಲಿದ್ದ ಸಿಆರ್‌ಪಿಎಫ್ ಸೈನಿಕ ಮುನೀರ್ ಖಾನ್ ಎಂಬಾತ ಕಾನೂನು ನಿಯಮಗಳನ್ನು ಉಲ್ಲಂಘಿಸಿ ಪಾಕಿಸ್ತಾನದ ಯುವತಿಯನ್ನು ಮದುವೆಯಾಗಿ ಕೆಲಸ ಕಳೆದುಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ವೈರತ್ವವಿದ್ರೂ ಎರಡೂ ದೇಶದ ಯುವಕ-ಯುವತಿಯರು ಮದುವೆಯಾಗುತ್ತಿರುತ್ತಾರೆ.

26

ಪಹಲ್ಗಾಮ್ ದಾಳಿ ಬಳಿಕ ವೀಸಾದಡಿಯಲ್ಲಿರೋ ಎಲ್ಲಾ ಪಾಕಿಸ್ತಾನಿಗಳಿಗೆ ಹಿಂದಿರುಗುವಂತೆ ಭಾರತ ಸರ್ಕಾರ ಆದೇಶ ನೀಡಿತ್ತು. ಇಲ್ಲಿಯ ಯುವಕರನ್ನು ಮದುವೆಯಾಗಿ ಭಾರತಕ್ಕೆ ಬಂದಿದ್ದ ಪಾಕ್ ಮಹಿಳೆಯರು ಮತ್ತೆ ತಮ್ಮ ದೇಶಕ್ಕೆ ತೆರಳಿದ್ದಾರೆ. ಕೆಲ ಮಹಿಳೆಯರು ಪಾಕಿಸ್ತಾನಕ್ಕೆ ಕಣ್ಣೀರು ಹಾಕುತ್ತಲೇ ತೆರಳಿದ್ದಾರೆ. ಮುಸ್ಲಿಂ ರಾಷ್ಟ್ರವಾಗಿರುವ ಸೌದಿ ಅರೇಬಿಯಾದ ಪುರುಷರು ನಾಲ್ಕು ದೇಶದ ಮಹಿಳೆಯರನ್ನು ಮದುವೆಯಾಗುವಂತಿಲ್ಲ.

36

ಹೌದು, ಸೌದಿ ಅರೇಬಿಯಾ ಸರ್ಕಾರ ಪಾಕಿಸ್ತಾನ ಸೇರಿದಂತೆ ನಾಲ್ಕು ದೇಶದ ಮಹಿಳೆಯರನ್ನು ಮದುವೆಯಾಗೋದನ್ನು ನಿಷೇಧಿಸಿದೆ. ಈ ನಿಯಮ ಹಲವು ವರ್ಷಗಳಿಂದ ಜಾರಿಯಲ್ಲಿದ್ದು, ಸಿಆರ್‌ಪಿಎಫ್ ಸೈನಿಕ ಮುನೀರ್ ಖಾನ್ ಪ್ರಕರಣದ ಬಳಿಕ ಈ ನಿಯಮ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

46

ಯಾವ ದೇಶದ ಮಹಿಳೆಯರಿಗೆ ನಿಷೇಧ?

ಸೌದಿ ಅರೇಬಿಯಾ ತನ್ನ ಪುರುಷ ನಾಗರಿಕರು ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್ ಮತ್ತು ಮ್ಯಾನ್ಮಾರ್‌ನ ಮಹಿಳೆಯರನ್ನು ಮದುವೆಯಾಗುವುದನ್ನು ನಿಷೇಧಿಸಿದೆ. ಒಂದು ವೇಳೆ ಮದುವೆಯಾಗೋದಾದ್ರೆ ಇಲ್ಲಿಯ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ. 

56

ಸೌದಿ ಅರೇಬಿಯಾ ಯುವಕರು ವಿದೇಶಿ ಮಹಿಳೆಯರನ್ನು ಮದುವೆಯಾಗುವ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ. ವಿದೇಶಿ ಮಹಿಳೆಯನ್ನು ಮದುವೆಯಾಗಲು ಇಚ್ಛಿಸುವವರು  ಸರ್ಕಾರಿ ಅನುಮತಿ ಪಡೆದುಕೊಳ್ಳಬೇಕು. ಸರ್ಕರದ ಅಧಿಕೃತ ಕಚೇರಿಗಳ ಮೂಲಕ ಅರ್ಜಿ ಸಲ್ಲಿಸಬೇಕು.

66

ಮದುವೆಯಾಗಲು ಬಯಸುವ ಪುರುಷರು 25 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ತಮ್ಮ ಗುರುತಿನ ಚೀಟಿ ಸೇರಿದಂತೆ ಇಲಾಖೆ ಕೇಳುವ ದಾಖಲೆ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗುತ್ತದೆ. ಈಗಾಗಲೇ ವಿವಾಹಿತರಾಗಿದ್ರೆ ಹೆಚ್ಚಿನ ನಿಯಮಗಳನ್ನು ಪಾಲಿಸಬೇಕು. ವಿಚ್ಛೇದಿತ ಪುರುಷರು ಅರ್ಜಿ ಸಲ್ಲಿಸುವ ಮೊದಲು ಆರು ತಿಂಗಳು ಕಾಯಬೇಕಾಗುತ್ತದೆ.

Read more Photos on
click me!

Recommended Stories