ನೇಪಾಳ ಎಮ್ಮೆಗಳಿಗೆ ಭಾರತದ ಕೋಣಗಳ ವೀರ್ಯದಾನ!

Published : Jul 19, 2026, 08:54 AM IST

ಭಾರತವು ನೇಪಾಳಕ್ಕೆ 50,000 ಡೋಸ್ ಮುರ್ರಾ ಕೋಣಗಳ ವೀರ್ಯವನ್ನು ದಾನವಾಗಿ ನೀಡಿದೆ. ಈ ಯೋಜನೆಯು ನೇಪಾಳದಲ್ಲಿ ಉನ್ನತ ತಳಿಯ ಎಮ್ಮೆಗಳನ್ನು ಉತ್ಪಾದಿಸಿ, ಹಾಲಿನ ಇಳುವರಿಯನ್ನು ಹೆಚ್ಚಿಸುವ ಮೂಲಕ ರೈತರ ಆರ್ಥಿಕ ಪ್ರಗತಿಗೆ ನೆರವಾಗುವ ಗುರಿ ಹೊಂದಿದೆ.

PREV
16
ಕೋಣಗಳ ವೀರ್ಯದಾನ

ಭಾರತ ಬೇರೆ ದೇಶಗಳಿಗೆ ಏನೇನನ್ನೋ ದಾನ ಮಾಡಿದ್ದನ್ನು ಕೇಳಿದ್ದೇವೆ. ಆದರೆ ಕೋಣಗಳ ವೀರ್ಯ ದಾನ ಮಾಡಿದ್ದನ್ನು ಕೇಳಿದ್ದೀರಾ? ನಿಜ. ನೇಪಾಳಕ್ಕೆ ಭಾರತದ ಮುರ್ರಾ ಕೋಣಗಳ 50,000 ವೀರ್ಯದ ಡೋಸ್‌ ದಾನ ಮಾಡಲಾಗಿದೆ. ಅದನ್ನು ಅಲ್ಲಿನ ರೈತರಿಗೆ ವಿತರಿಸಲಾಗಿದೆ.

26
ಭಾರತೀಯ ಕೋಣ-ಎಮ್ಮೆಗಳ ಸಂತತಿ ಹೆಚ್ಚಳ

ಸ್ಥಳೀಯ ಎಮ್ಮೆಗಳು ಒಂದು ಅವಧಿಯಲ್ಲಿ 1500 ಲೀ. ಹಾಲು ಕೊಡುತ್ತಿದ್ದರೆ, ಈ ಭಾರತೀಯ ಮುರ್ರಾ ತಳಿ 5000 ಲೀ. ಹಾಲು ಕೊಡುತ್ತವಂತೆ. ಇನ್ನು ನೇಪಾಳದಲ್ಲಿ ಭಾರತೀಯ ಕೋಣ-ಎಮ್ಮೆಗಳ ಸಂತತಿ ಹೆಚ್ಚುವುದಂತೂ ಖಚಿತ. ನೇಪಾಳದ ಕೃಷಿ ಮತ್ತು ಪಶುಸಂಗೋಪನೆ ಸಚಿವಾಲಯದ ಪಶುಸೇವಾ ಇಲಾಖೆಯು ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ದೇಶಾದ್ಯಂತ ಹೈ-ಬ್ರೀಡ್ (ಉನ್ನತ ತಳಿ) ಎಮ್ಮೆಗಳನ್ನು ಉತ್ಪಾದಿಸಲು ಮತ್ತು ಹಾಲಿನ ಇಳುವರಿಯನ್ನು ಗರಿಷ್ಠ ಮಟ್ಟಕ್ಕೆ ಕೊಂಡೊಯ್ಯಲು ರೈತರಿಗೆ ಸುಮಾರು 50,000 ವೀರ್ಯದ ಡೋಸ್‌ಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ.

36
15 ಮುರ್ರಾ ಕೋಣಗಳಿಂದ ಸಂಗ್ರಹ

ನೇಪಾಳಕ್ಕೆ ಭಾರತದಿಂದ ಕೊಡುಗೆಯಾಗಿ ಬಂದಿದ್ದ ಒಟ್ಟು 15 ಉನ್ನತ ಗುಣಮಟ್ಟದ ಮುರ್ರಾ ತಳಿಯ ಎಮ್ಮೆ ಕೋಣಗಳಿಂದ (Murrah Buffalo Bulls) ಈ ವೀರ್ಯದ ಡೋಸ್‌ಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಲಾಗಿದೆ ಎಂದು ಪಶುಸಂಗೋಪನಾ ಇಲಾಖೆಯು ಸ್ಪಷ್ಟಪಡಿಸಿದೆ.

46
ಭಾರತ ಸರ್ಕಾರದ ರಾಜತಾಂತ್ರಿಕ ಕೊಡುಗೆ

ಹಿಮಾಲಯದ ಮಡಲಿನಲ್ಲಿರುವ ನೇಪಾಳ ರಾಷ್ಟ್ರಕ್ಕೆ ಈ ಅಮೂಲ್ಯ ಮುರ್ರಾ ತಳಿಯ ಕೋಣಗಳನ್ನು ಭಾರತ ಸರ್ಕಾರವು ಉಡುಗೊರೆಯಾಗಿ ನೀಡಿತ್ತು. ಉಭಯ ದೇಶಗಳ ನಡುವಿನ ಕೃಷಿ ಮತ್ತು ಪಶುಸಂಗೋಪನೆ ಅಭಿವೃದ್ಧಿಯ ಮೈತ್ರಿಯ ಭಾಗವಾಗಿ ಭಾರತ ಈ ಕೊಡುಗೆಯನ್ನು ಹಸ್ತಾಂತರಿಸಿತ್ತು.

56
ಮಾಜಿ ಪ್ರಧಾನಿ 'ಪ್ರಚಂಡ' ಅವರ ಭಾರತ ಪ್ರವಾಸದ ಫಲಶ್ರುತಿ

ನೇಪಾಳದ ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಾಲ್ "ಪ್ರಚಂಡ" ಅವರು ಮೂರು ವರ್ಷಗಳ ಹಿಂದೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಮುರ್ರಾ ತಳಿಯ ಕೋಣಗಳನ್ನು ಕೊಡುಗೆಯಾಗಿ ನೀಡುವ ಒಪ್ಪಂದವಾಗಿತ್ತು. ಆ ಪ್ರವಾಸದ ಫಲವಾಗಿ ಈ ಕೋಣಗಳು ನೇಪಾಳವನ್ನು ತಲುಪಿದ್ದವು.

66
ಹೈ-ಬ್ರೀಡ್ ಉತ್ಪಾದನೆ ಮತ್ತು ಆರ್ಥಿಕ ಪ್ರಗತಿಯ ಗುರಿ

ಈ ಯೋಜನೆಯ ಮೂಲಕ ನೇಪಾಳದ ಡೈರಿ ಉದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಅಲ್ಲಿನ ಕೃಷಿ ಸಚಿವಾಲಯ ಮುಂದಾಗಿದೆ. ಮುರ್ರಾ ತಳಿಯ ಮಿಶ್ರತಳಿ ಎಮ್ಮೆಗಳ ಉತ್ಪಾದನೆಯಿಂದ ರೈತರ ಆದಾಯ ಹೆಚ್ಚುವುದಲ್ಲದೆ, ದೇಶದ ಹಾಲಿನ ಸ್ವಾವಲಂಬನೆಗೂ ಇದು ದಾರಿಯಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories