76ನೇ ಸ್ವಾತಂತ್ರೋತ್ಸವಕ್ಕಾಗಿ ಧ್ವಜಾರೋಹಣ ಮಾಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ ರಾಜ್‌ಘಾಟ್‌ನಲ್ಲಿ ಮಹಾತ್ಮಾ ಗಾಂಧೀಜಿ ಅವರ ಸಮಾಧಿಗೆ ನಮನ ಸಲ್ಲಿಸಿದರು.
ನವದೆಹಲಿಯ ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ತ್ರಿವರ್ಣ ಧ್ವಜವನ್ನು ಹಾರಿಸಿದ ಆಕರ್ಷಕ ಕ್ಷಣ. ಆ ಬಳಿಕ ನೀಡಿದ ಭಾಷಣದಲ್ಲಿ ಹಲವಾರು ವಿಚಾರಗಳನ್ನು ಮೋದಿ ಪ್ರಸ್ತಾಪಿಸಿದರು.
ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಾಡಿದ ಕ್ಷಣ. ಈ ವೇಳೆ ಮೂರೂ ಸೇನೆಯ ಬ್ಯಾಂಡ್ಸ್‌ಮನ್‌ಗಳು ಕೆಂಪುಕೋಟೆಯ ಸ್ಥಳದಲ್ಲಿದ್ದರು.
ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಡ್ರೋನ್ ವಿರೋಧಿ ವ್ಯವಸ್ಥೆಯನ್ನೂ ಬಳಕೆ ಮಾಡಲಾಗಿತ್ತು.
ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ನೆರೆದಿದ್ದ ಜನರತ್ತ ಕೈಬೀಸಿ ನಿರ್ಗಮಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ತಂಡಗಳನ್ನು ಭೇಟಿ ಮಾಡಿದರು.
ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರೂ ಸೇನೆಗಳ ವತಿಯಿಂದ ಗೌರವ ವಂದನೆ ನೀಡಲಾಯಿತು.
76ನೇ ಸ್ವಾತಂತ್ರೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ನಿಂತಿ ಭಾಷಣ ಮಾಡಿದ ಕ್ಷಣ. ಅಂದಾಜು 83 ನಿಮಿಷಗಳ ಕಾಲ ಮೋದಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಂಪುಕೋಟೆಯಲ್ಲಿ ಸೇನಾಪಡೆಗಳ ವತಿಯಿಂದ ಗೌರವ ವಂದನೆ ನೀಡಿದ ಕ್ಷಣ. ದೇಶದ ವಿವಿಧೆಡೆಯ ಸಾಂಸ್ಕೃತಿಕ ಕಾರ್ಯಕ್ರಮದ ತಂಡಗಳು ಕೂಡ ಇದ್ದವು.
ಸ್ವಾತಂತ್ರ್ಯೋತ್ಸವದ ಭಾಷಣದ ಬಳಿಕ ನರೇಂದ್ರ ಮೋದಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಗಮಿಸಿದ ದೇಶಾದ್ಯಂತದ ಶಾಲಾ ಮಕ್ಕಳನ್ನು ಈ ವೇಳೆ ಭೇಟಿ ಮಾಡಿ ಮಾತನಾಡಿದರು.
ಕೆಂಪುಕೋಟೆಯಲ್ಲಿ ಭಾಷಣದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲಾ ಮಕ್ಕಳನ್ನು ಮೋದಿ ಮಾತನಾಡಿಸಿದರು. ಕರ್ನಾಟಕದ ಶಾಲಾ ಮಕ್ಕಳೊಂದಿಗೆ ಮೋದಿ ಬೆರೆತ ಕ್ಷಣ