ಅಜಾದಿಕಾ ಅಮೃತ ಮಹೋತ್ಸವ, ಮಕ್ಕಳ ಜೊತೆ ತಿರಂಗ ಹಾರಿಸಿದ ಪ್ರಧಾನಿ ಮೋದಿ!

First Published | Aug 11, 2022, 5:14 PM IST

ಅಜಾದಿ ಕಾ ಅಮೃತ ಮಹೋತ್ಸವ ಸಂಭ್ರಮ ಇಮ್ಮಡಿಗೊಳಿಸಲು ದೇಶದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಆರಂಭಗೊಂಡಿದೆ. 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಕ್ಕಳ ಜೊತೆ ತಿರಂಹ ಹಾರಿಸಿ ಗಮನಸೆಳೆದಿದ್ದಾರೆ. ಇದೇ ವೇಳೆ ಮೋದಿ ಮಾಸ್ಟರ್ ಪ್ರಶ್ನೆಗೆ ಮಕ್ಕಳು ಉತ್ತರಿಸಿದ್ದಾರೆ.

ಭಾರತ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದೆ. ಅಜಾದಿ ಕಾ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಭಾರತ ಈಗಾಗಲೇ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ. ಇದರಲ್ಲಿ ಹರ್ ಘರ್ ತಿರಂಗಾ ಅಭಿಯಾನ ಕೂಡ ಒಂದು. ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಸ್ವಾತಂತ್ರ್ಯ ದಿನಾಚರಣೆಗೂ ಕೆಲೆ ದಿನ ಮೊದಲು ಮಕ್ಕಳ ಜೊತೆ ತಿರಂಗ ಹಾರಿಸಿದ್ದಾರೆ.

ಮುದ್ದು ಮಕ್ಕಳಿಗೆ  ಪ್ರಧಾನಿ ಮೋದಿ ತಮ್ಮ ಕೈಯಾರೆ ತಿರಂಗ ನೀಡಿದ್ದಾರೆ. ಬಳಿಕ ಮಕ್ಕಳ ಜೊತೆ ತಿರಂಗ ಹಾರಿಸಿದ್ದಾರೆ. ಪ್ರಧಾನಿ ಜೊತೆ ತಿರಂಗ ಹಾರಿಸುವ ಸಂಭ್ರಮದಲ್ಲಿ ಮಕ್ಕಳು ಅತೀವ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ  ಪಾಲ್ಗೊಂಡಿದ್ದರು. ಭಾರತ್ ಮಾತಾಕಿ ಜೈ, ವಂದೇ ಮಾತಾರಂ ಘೋಷಣೆಗಳು ಮೊಳಗಿತ್ತು.
 

Tap to resize

ದೇಶಕ್ಕೆ ಸ್ವಾತಂತ್ರ್ಯ ಯಾವಾಗ ಸಿಕ್ಕಿತ್ತು? ಸ್ವಾತಂತ್ರ್ಯ ದಿನಾಚರಣೆ ನಾವು ಏನು ಮಾಡುತ್ತೇವೆ ಸೇರಿದಂತೆ ಕೆಲ ಪ್ರಶ್ನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮಕ್ಕಳಲ್ಲಿ ಕೇಳಿದ್ದಾರೆ. ಮೋದಿ ಪ್ರಶ್ನೆಗೆ ಉತ್ತರಿಸಿದ ಮಕ್ಕಳು ಸಂಬ್ರಮದಲ್ಲಿ ತೇಲಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ದೇಶವು ಯಾವ ರೀತಿ ದೇಶಪ್ರೇಮದ ಉತ್ಸಾಹ ಕಂಡಿತೋ, ಅದೇ ಉತ್ಸಾಹವನ್ನು ಇಂದು ದೇಶದ ಯುವಕರಲ್ಲಿ ಮೂಡಿಸಬೇಕು. ಈ ಮೂಲಕ ಈ ಉತ್ಸಾಹವು ದೇಶ ನಿರ್ಮಾಣದಲ್ಲಿ ಪರಿವರ್ತನೆ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
 

ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಹಾಗೂ ಇತರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸ್ವಾತಂತ್ರ್ಯದ ಅಮೃತೋತ್ಸವದ ಭಾವನಾತ್ಮಕ ಕಂಪು, ಈ ಆಂದೋಲನದ ತಿರುಳಾಗಿದೆ ಎಂದು ಮೋದಿ ಹೇಳಿದ್ದಾರೆ. 
 

ಇದರಿಂದ ದೇಶಪ್ರೇಮದ ಅಲೆ ದೇಶದಲ್ಲಿ ಏಳುತ್ತದೆ. ಈ ಮೂಲಕ ದೇಶ ನಿರ್ಮಾಣದಲ್ಲಿ ಇದು ಪರಿವರ್ತನೆಗೊಳ್ಳಬೇಕು. ಹೀಗೆ ದೇಶ ಪರಿವರ್ತನೆ ಮಾಡುವಲ್ಲಿ ಈ ಆಂದೋಲನವೊಂದು ಸುವರ್ಣಾವಕಾಶ’ ಎಂದು ಬಣ್ಣಿಸಿದರು.
 

‘ಏಕ ಭಾರತ, ಶ್ರೇಷ್ಠ ಭಾರತ’ ಪರಿಕಲ್ಪನೆಯಲ್ಲಿ ದೇಶವನ್ನು ಒಗ್ಗೂಡಿಸಬೇಕು. ತ್ರಿವಣಧ್ವಜವು ಏಕತೆಯ ಪ್ರತೀಕ. ಇದರಿಂದ ದೇಶದಲ್ಲಿ ಧನಾತ್ಮಕತೆ ಹಾಗೂ ಸಮೃದ್ಧತೆ ಹೆಚ್ಚುತ್ತದೆ. ಯುವಕರ ಪಾಲಿಗೆ ಇದೊಂದು ಸಂಸ್ಕಾರ ಉತ್ಸವ. ಇಂದಿನ ಯುವಕರೇ ನಾಳಿನ ನಾಯಕರು ಎಂದಿದ್ದಾರೆ.  
 

ಹೀಗಾಗಿ ಯುವಕರಲ್ಲಿ ಕರ್ತವ್ಯ ಪ್ರಜ್ಞೆ ಬೆಳೆಸಬೇಕು. ಭಾರತವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆ ಕನಸುಗಳನ್ನು ನನಸು ಮಾಡಲು ಯುವಕರಲ್ಲಿ ಜವಾಬ್ದಾರಿ ಹಾಗೂ ಕರ್ತವ್ಯಪ್ರಜ್ಞೆ ಮೂಡಿಸಬೇಕು’ ಎಂದು ಕರೆ ನೀಡಿದರು.

Latest Videos

click me!