ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಶುಭಕೋರಲು 2,000 ಕಿ.ಮೀ ಕಾಲ್ನಡಿಗೆ, ಸಂಚಲನ ಸೃಷ್ಟಿಸಿದ ಆಂಧ್ರದ ರೈತ

Published : Aug 09, 2022, 03:48 PM IST

ಬರೋಬ್ಬರಿ 2,000 ಕಿಲೋಮೀಟರ್ ಕಾಲ್ನಡಿಗೆ. ಇದು ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸಲು ಆಂಧ್ರ ಪ್ರದೇಶದ ರೈತನ ಅತೀ ದೊಡ್ಡ ಯಾತ್ರೆಯ.  ಈ ಯಾತ್ರೆ  ಕಳೆದ ತಿಂಗಳು ಆರಂಭಗೊಂಡಿದ್ದು, ಮುಂದಿನ ತಿಂಗಳು ದೆಹಲಿ ತಲುಪಲಿದೆ.  

PREV
18
ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಶುಭಕೋರಲು 2,000 ಕಿ.ಮೀ ಕಾಲ್ನಡಿಗೆ, ಸಂಚಲನ ಸೃಷ್ಟಿಸಿದ ಆಂಧ್ರದ ರೈತ

ಪ್ರಧಾನಿ ನರೇಂದ್ರ ಮೋದಿಯ ಆಡಳಿತ, ಜನಪ್ರಿಯತೆ ಮೆಚ್ಚಿ ಹಲವರು ಬೆಂಬಲಿಗರಾಗಿದ್ದಾರೆ. ಮತ್ತೆ ಕೆಲವರು ಮೋದಿ ಧೀರ್ಘಾಯುಷ್ಯಕ್ಕೆ ಪೂಜೆ, ಹೋಮಗಳನ್ನು ಮಾಡಿದ್ದಾರೆ. ಇದೀಗ ಆಂಧ್ರ ಪ್ರದೇಶ ರೈತ ನರಸಿಂಹ ಬದ್ವೇಲ್ ಗ್ರಾಮದಿಂದ ದೆಹಲಿಗೆ ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದಾರೆ. ಕಾರಣ, ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬ. ನವದೆಹಲಿಯಲ್ಲಿ ಮೋದಿ ಭೇಟಿಯಾಗಿ ಶುಭಕೋರಲು ರೈತ ನರಸಿಂಹ ಈ ಬೃಹತ್ ಯಾತ್ರೆ ಕೈಗೊಂಡಿದ್ದಾನೆ. 

28

ಕಳೆದ ತಿಂಗಳು ಅಂದರೆ ಜುಲೈ 17 ರಂದು ನರಸಿಂಹ ಅವರ ಕಾಲ್ನಡಿಗೆ ಯಾತ್ರೆ ಆರಂಭಗೊಂಡಿದೆ. ಮುಂದಿನ ತಿಂಗಳ 17ಕ್ಕೆ ದೆಹಲಿ ತಲುಪಲಿದ್ದಾರೆ. ಸೆಪ್ಟೆಂಬರ್ 17ಕ್ಕೆ ಪ್ರಧಾನಿ ಮೋದಿ 72ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ವೇಳೆ ಕಾಲ್ನಡಿಗೆಯಲ್ಲೇ ತೆರಳಿ ಮೋದಿಗೆ ಶುಭಕೋರಲು ನರಸಿಂಹ ನಿರ್ಧರಿಸಿದ್ದಾರೆ. ಇದಕ್ಕಾಗಿ ಬರೋಬ್ಬರಿ 2,000 ಕಿಲೋಮೀಟರ್ ಬೃಹತ್ ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದಾರೆ.
 

38

ಹರಿ ಎಂದೇ ಗುರುತಿಸಿಕೊಂಡಿರುವ ರೈತ ನರಸಿಂಹ ಸದ್ಯ ಮಹಾರಾಷ್ಟ್ರದ ಹಿಂಗನ್ ಘಾಟ್ ದಾಟಿ ಮುಂದೆ ಸಾಗಿದ್ದಾರೆ. ನವ ದೆಹಲಿ ತಲುಪಲು ಇನ್ನು 1,59 ಕಿಲೋಮೀಟರ್ ಬಾಕಿ ಉಳಿದಿದೆ. ಈಗಾಗಲೇ ಸರಿಸುಮಾರು 800 ಕಿ.ಮೀ ಕ್ರಮಿಸಿರುವ ನರಸಿಂಹ, ಸೆಪ್ಟೆಂಬರ್ 17ಕ್ಕೆ ಒಂದು ದಿನ ಮುಂಚಿತವಾಗಿ ದೆಹಲಿ ತಲುಪುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

48

ನರಸಿಂಹ ಪ್ರತಿ ದಿನ 35 ರಿಂದ 45 ಕಿಲೋಮೀಟರ್ ಕಾಲ್ನಾಡಿಗೆ ಯಾತ್ರೆ ಕೈಗೊಳ್ಳುತ್ತಾರೆ. ಹಳ್ಳಿ, ಪಟ್ಟಣದಲ್ಲಿ ಬಿಜೆಪಿ ಹಾಗೂ ಆರ್‌ಎಸ್ಎಸ್ ಮುಖಂಡರು ಊಟ ಹಾಗೂ ವಸತಿಯನ್ನು  ನೋಡಿಕೊಳ್ಳುತ್ತಿದ್ದಾರೆ. ಇನ್ನು ಬಿಜೆಪಿ ಹಾಗೂ ಆರ್‌ಎಸ್ಎಸ್ ಕೇಂದ್ರಗಳು ಇಲ್ಲದ ಸ್ಥಳಗಳಲ್ಲಿ ದೇವಸ್ಥಾನ, ಪೆಟ್ರೋಲ್ ಬಲ್ , ಸಮುದಾಯ ಭವನಗಳಲ್ಲಿ ತಂಗಿ ಮರುದಿನ ಯಾತ್ರೆ ಮುಂದವರಿಸುತ್ತಿದ್ದಾರೆ.

58

ಮೂಲತಃ ಕೃಷಿಕನಾಗಿರುವ ನರಸಿಂಹ, ಬದ್ವೇಲ್‌ನ ಸ್ಥಳೀಯ ರೆಸ್ಟೋರೆಂಟ್‌ನಲ್ಲಿ ವ್ಯವಸ್ಥಾಪಕ ನಿರ್ದೇಶರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಡಳಿತ, ನಾಯಕತ್ವವನ್ನು ಮೆಚ್ಚಿ ಈ ಯಾತ್ರೆ ಕೈಗೊಂಡಿರುವುದಾಗಿ ನರಸಿಂಹ ಹೇಳಿದ್ದಾರೆ. 

68

ಭಾರತ ಆಜಾದಿ ಕಾ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ. ಪ್ರಧಾನಿ ಮೋದಿ ತಮ್ಮ ಅತ್ಯುತ್ತಮ ಯೋಜನೆಗಳು ಹಾಗೂ ಅಭಿವೃದ್ಧಿಗಳ ಮೂಲಕ ಭಾರತ ಸಂಭ್ರಮ ಇಮ್ಮಡಿಗೊಳಿಸಿದ್ದಾರೆ. ಇಂತಹ ನಾಯಕನ ಹುಟ್ಟುಹಬ್ಬಕ್ಕೆ ಶುಭಕೋರಲು ಕಾಲ್ನಡಿಗೆ ಮೂಲಕವೇ ತೆರಳಿ ಮಾಡುವುದಾಗಿ ನರಸಿಂಹ ಹೇಳಿದ್ದಾರೆ.

78

ಭಾರತವನ್ನು ರಾಮರಾಜ್ಯ ಎಂದು ಕರೆಯುತ್ತಿದ್ದರೂ ಪ್ರಧಾನಿ ಮೋದಿಯಿಂದಲೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಇಂತಹ ಹಲವು ಐತಿಹಾಸಿಕಗಳಿಗೆ ಮುನ್ನಡಿ ಬರೆದ ಮೋದಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ನರಸಿಂಹ ಹೇಳಿದ್ದಾರೆ.

88

ಸರಾಸರಿ 35 ಕಿ.ಮೀ ಪ್ರತಿ ದಿನ ನಡೆಯುತ್ತೇನೆ. ಕೆಲ ಪ್ರದೇಶ, ಪಟ್ಟಣಗಳಲ್ಲಿ ಸಾಧ್ಯವಾಗುವುದಿಲ್ಲ. ಆದರೆ ಉದ್ದೇಶಿತ ಸ್ಥಳವನ್ನು ತಕ್ಕ ಸಮಯದಲ್ಲಿ ತಲುಪುತ್ತೇನೆ. ಸರಾಸರಿ ನಡಿಗೆಯಲ್ಲಿ ಕಡಿಮೆಯಾಗಿಲ್ಲ. ಮೋದಿ ಭೇಟಿಯಾಗಿ ಶುಭಕೋರುವುದೇ ಅತೀ ದೊಡ್ಡ ಆಸೆ ಎಂದು ನರಸಿಂಹ ಹೇಳಿದ್ದಾರೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories