ನಾಲ್ಕು ವರ್ಷದಲ್ಲಿ ಒಟ್ಟು 8 ಬಾರಿ ದೇಶವನ್ನುದ್ದೇಶಿಸಿ ಮೋದಿ ಮಾತು!

First Published Apr 14, 2020, 6:01 PM IST

ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 1 ಸಾವಿರಕ್ಕೂ ಅಧಿಕವಾಗಿದೆ. ಹೀಗಿರುವಾಗ ಪಿಎಂ ಮೋದಿ ಮಂಗಳವಾರದಂದು ಕೊರೋನಾ ವೈರಸ್ ಸಂಬಂಧ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ ಹಾಗೂ ದೇಶದಲ್ಲಿ ವಿಧಿಸಲಾಗಿರುವ ಲಾಕ್‌ಡೌನ್ ವಿಸ್ತರಿಸಿದ್ದಾರೆ. ಇದಕ್ಕೂ ಮುನ್ನ ಮಾರ್ಚ್ 25 ರಂದು 21 ದಿನಗಳ ಲಾಕ್‌ಡೌನ್ ಹೇರಲಾಗಿತ್ತು. ಆದರೀಗ ಇದನ್ನು ಮೇ 3ವರೆಗೆ ವಿಸ್ತರಿಸಲಾಗಿದೆ. ಇನ್ನು ಕಳೆದ ನಾಲ್ಕು ವರ್ಷಗಳಲ್ಲಿ ಪಿಎಂ ಮೋದಿ ಒಟ್ಟು 8  ಬಾರಿ ದೇಶವನ್ನು ಸಂಭೋದಿಸಿದ್ದಾರೆ. ಈ ಎಂಟು ಬಾರಿ ವಿವಿಧ ವಿಚಾರಗಳಿಗೆ ಸಂಬಂಧಿಸಿಂತೆ ಮೋದಿ ಆದೇಶ, ಮಾಹಿತಿ ನೀಡಿದ್ದಾರೆ. ಈ ಕುರಿತಾದ ವಿವರ

ನವೆಂಬರ್ 8, 2016: ರಾತ್ರಿ ಎಂಟು ಗಂಟೆಗೆ ದೇಶವನ್ನುದ್ದೇಶಿಸಿದ್ದ ಪಿಎಂ ಮೋದಿ 500 ಹಾಗೂ 1000 ರೂ. ನೋಟು ಬ್ಯಾನ್ ಮಾಡಿದ್ದರು.
undefined
ಫೆಬ್ರವರಿ 15, 2019: ಪುಲ್ವಾಮಾದಲ್ಲಿ ನಡೆದಿದ್ದ ಉಗ್ರ ದಾಳಿಯಲ್ಲಿ CRPF ಪಡೆಯ ಒಟ್ಟು 40 ಮಂದಿ ಯೋಧರು ಹುತಾತ್ಮರಾಗಿದ್ದರು. ಹೀಗಿರುವಾಗ ದೇಶವನ್ನುದ್ದೇಶಿಸಿ ಮಾತನಾಡಿದ್ದ ಮೋದಿ , ಇವರ ಬಲಿದಾನ ಹಾಳಾಗಲು ಬಿಡುವುದಿಲ್ಲ ಎಂದಿದ್ದರು.
undefined
ಮಾರ್ಚ್ 27, 2019: ಮಿಷನ್ ಶಕ್ತಿ ಕುರಿತು ಮಾತನಾಡಿದ್ದ ಪಿಎಂ ಮೋದಿ, ಭಾರತ ಆಂಟಿ ಮಿಸೈಲ್‌ ಯಶಸ್ವಿ ಪರೀಕ್ಷೆ ನಡೆಸಿದ್ದ ನಾಲ್ಕನೇ ರಾಷ್ಟ್ರವಾಗಿದೆ ಎಂದಿದ್ದರು.
undefined
ಆಗಸ್ಟ್ 8, 2019: ಜಮ್ಮು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುತ್ತಿದ್ದ ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ, ರಾತ್ರಿ 8 ಗಂಟೆಗೆ ಪಿಎಂ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದರು.
undefined
ಮಾರ್ಚ್ 19, 2020: ಕೊರೋನಾ ವೈರಸ್ ದೇಶದಲ್ಲಿ ಹಆವಳಿ ಆರಂಭಿಸಿದ ಬಳಿಕ ಮೊದಲ ಬಾರಿ ಮಾತನಾಡಿದ್ದ ಮೋದಿ ಜನತಾ ಕರ್ಫ್ಯೂ ಪಾಲಿಸುವಂತೆ ಮನವಿ ಮಾಡಿದ್ದರು.
undefined
ಮಾರ್ಚ್ 24, 2020: ಪ್ರಧಾನಿ ಮೋದಿ ಕೊರೋನಾ ಕುರಿತಾಗಿ ಎರಡನೇ ಬಾರಿ ಮಾತನಾಡಿದ್ದು, ಈ ವೇಳೆ ಮಾರ್ಚ್ 25 ರಿಂದ ದೇಶದಾದ್ಯಂತ 21 ದಿನಗಳ ಲಾಕ್‌ಡೌನ್ ಹೇರಿದ್ದರು.
undefined
ಏಪ್ರಿಲ್ 3, 2020: ಕೊರೋನಾ ಸಂಬಂಧ ಮೂರನೇ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪಿಎಂ ಏಪ್ರಿಲ್ 5 ರಂದು ರಾತ್ರಿ ಒಂಭತ್ತು ಗಂಟೆಗೆ ಒಂಭತ್ತು ನಿಮಿಷದವರೆಗೆ ದೀಪ ಬೆಳಗಿಸುವ ಅಭಿಯಾನಕ್ಕೆ ಕರೆ ನೀಡಿದ್ದರು.
undefined
ಏಪ್ರಿಲ್ 14, 2020: ಮಂಗಳವಾರ ಬೆಳಗ್ಗೆ ಹತ್ತು ಗಂಟೆಗೆ ಮಾತನಾಡಿದ್ದ ಮೋದಿ ಲಾಕ್‌ಡೌನ್ ಪಾಲಿಸುವಂತೆ ಮನವಿ ಮಾಡಿದ್ದರಲ್ಲದೆ, ಲಾಕ್‌ಡೌನ್ ಮೇ 3ವರೆಗೆ ವಿಸ್ತರಿಸಿದ್ದಾರೆ.
undefined
click me!