ಮೋದಿ, ಅಡ್ವಾಣಿ ಜೊತೆ ರಾಮಾಯಣದ ಸೀತೆ, ವೈರಲ್ ಆಯ್ತು ಫೋಟೋ!

Published : Apr 13, 2020, 05:51 PM IST

ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ 90ರ ದಶಕದ ಎಲ್ಲರಿಗೂ ಬಹಳಷ್ಟು ಅಚ್ಚುಮೆಚ್ಚಿನ ಟಿವಿ ಕಾರ್ಯಕ್ರಮವಾಗಿತ್ತು. ವರ್ಷಗಳುರುಳಿದಂತೆ ಈ ಕಾರ್ಯಕ್ರಮ ಪ್ರಸಾರ ಸ್ಥಗಿತಗೊಳಿಸಲಾಗಿತ್ತು. ಆದರೀಗ ಕೊರೋನಾದಿಂದಾಗಿ ಲಾಕ್‌ಡೌನ್ ಹೇರಿದ ಬೆನ್ನಲ್ಲೇ ಮತ್ತೆ ಹಳೆ ಕಾರ್ಯಕ್ರಮಗಳು ಪ್ರಸಾರವಾಗಲಾರಂಭಿಸಿದೆ. ಅದರಲ್ಲೂ ರಾಮಾಯಣ ಮತ್ತೆ ಪ್ರಸಾರ ಕಂಡ ನಂತರ ದೂರದರ್ಶನದ ಟಿಆರ್‌ಪಿ ನಂಬರ್‌ 1 ಸ್ಥಾನ ಪಡೆದುಕೊಂಡಿದೆ. ಹೀಗಿರುವಾಗ ರಾಮಾಯಣದ ಸೀತೆ, ದೀಪಿಕಾ ಚಿಕ್ಲಿಯಾ ಕೂಡಾ ಟ್ವಿಟರ್‌ ಖಾತೆಯನ್ನು ತೆರೆದಿದ್ದು, ನಿರಂತರವವಾಗಿ ಹಳೆಯ ಫೋಟೋಗಳನ್ನು ಶೇರ್ ಮಾಡಿಕೊಳ್ಳಲಾರಂಭಿಸಿದ್ದಾರೆ. ಸದ್ಯ ಅವರು ಮೋದಿ ಹಾಗೂ ಅಡ್ವಾಣಿ ಜೊತೆಗಿನ ಹಳೆಯ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ರಾಮಾಯಣದ ದೀಪಿಕಾ ಓರ್ವ ರಾಜಕಾರಣಿಯೂ ಆಗಿದ್ದರೆಂಬುವುದು ಕೆಲವರಿಗಷ್ಟೇ ತಿಳಿದಿರುವ ವಿಚಾರ.

PREV
110
ಮೋದಿ, ಅಡ್ವಾಣಿ ಜೊತೆ ರಾಮಾಯಣದ ಸೀತೆ, ವೈರಲ್ ಆಯ್ತು ಫೋಟೋ!
ರಾಮಾಯಣದ ಸೀತೆಯಾಗೇ ದೇಶದಾದ್ಯಂತ ಫೇಮಸ್ ಆಗಿರುವ ದೀಪಿಕಾ ಚಿಕ್ಲಿಯಾ ತಮ್ಮ ಪಾತ್ರದ ಮೂಲಕ 90ರ ದಶಕದಲ್ಲಿ ಎಲ್ಲರ ಮನಗೆದ್ದಿದ್ದರು.

210
ರಾಮಾಯಣ ಟಿವಿ ಕಾರ್ಯಕ್ರಮ ಪ್ರಸಾರ ಆರಂಭವಾಗುತ್ತಿದ್ದಂತೆಯೇ ಮನೆ ಮಂದಿಯೆಲ್ಲಾ ಕೆಲಸ ಮುಗಿಸಿ ಟಿವಿ ಎದುರು ಕಾರ್ಯಕ್ರಮ ವೀಕ್ಷಣೆಗೆ ಹಾಜರಾಗುತ್ತಿದ್ದರು.

310
ಅಂದಿನ ಟಾಪ್‌ ಶೋ ಆಗಿದ್ದ ರಾಮಾಯಣ, ಬಳಿಕ ಸದ್ದಿಲ್ಲದೇ ಮರೆಯಾಗಿತ್ತು.

410
ಆದರೀಗ ಲಾಕ್‌ಡೌನ್‌ನಿಂದಾಗಿ ರಾಮಾಯಣ ಮತ್ತೆ ತೆರೆ ಕಂಡಿದ್ದು, ಮತ್ತೆ ದೂರದರ್ಶನ ಹಾಗೂ ರಾಮಾಯಣ ವೀಕ್ಷಿಸುವವರ ಸಂಖ್ಯೆ ಹೆಚ್ಚಿದೆ.

510
ಹೀಗಿರುವಾಗ ರಾಮಾಯಣದ ರಾಮ, ಸೀತೆ ಹಾಗೂ ಲಕ್ಷ್ಮಣ ಪಾತ್ರ ನಿಭಾಯಿಸಿದ್ದ ಪಾತ್ರಧಾರಿಗಳೂ ಫೇಮಸ್ ಆಗಿದ್ದಾರೆ.

610
ಸದ್ಯ ರಾಮಾಯಣದಲ್ಲಿ ಸೀತೆ ಪಾತ್ರ ನಿಭಾಯಿಸಿದ್ದ ದೀಪಿಕಾ ಚಿಕ್ಲಿಯಾ ಟ್ವಿಟರ್‌ ಖಾತೆಗೂ ಎಂಟ್ರಿ ಕೊಟ್ಟಿದ್ದು, ಆಕ್ಟಿವ್ ಆಗಿರುತ್ತಾರೆ.

710
ಹಳೇ ಫೋಟೋಗಳನ್ನು ಶೇರ್ ಮಾಡಿ ತಮ್ಮ ಅನುಭವ ಹಂಚುತಿರುತ್ತಾರೆ.

810
ಆದರೆ ಸೀತೆಯಾಗಿ ಎಲ್ಲರಿಗೂ ಪರಿಚಿತರಾಗಿರುವ ದೀಪಿಕಾ ಓರ್ವ ರಾಜಕಾರಣಿ ಎಂಬುವುದು ಕೆಲವರಿಗಷ್ಟೇ ತಿಳಿದಿರುವ ವಿಚಾರ.

910
ಈ ಸಂಬಂಧ ಹಳೆ ಫೋಟೋ ಶೇರ್ ಮಾಡಿಕೊಂಡಿರುವ ದೀಪಿಕಾ ನಾನು ಸದ್ಯ ವಡೋಧರಾ ಎಂದು ಕರೆಯಲಾಗುತ್ತಿರುವ, ಅಂದಿನ ಬರೋಡಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ ತೆಗೆದ ಫೋಟೋ ಎಂದಿದ್ದಾರೆ. ಅಲ್ಲದೇ

1010
ಈ ಫೋಸ್ಟ್ ಮೂಲಕ ತಾನು ರಾಜಕಾರಣದಲ್ಲೂ ಸಕ್ರಿಯಳಾಗಿದ್ದೆ ಎಂಬುವುದನ್ನು ದೀಪಿಕಾ ನೆನಪಿಸಿಕೊಂಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories