ಡಾ.ಶಿಪ್ರಾ ಧಾರ್. MBBS,MD ವಾರಣಾಸಿಯಲ್ಲಿ ನರ್ಸಿಂಗ್ ಹೋಂ ನಡೆಸುತ್ತಿದ್ದಾರೆ. ಶಿ.ಶಿಪ್ರಾ ಅವರ ಈ ಕೆಲಸದಲ್ಲಿ ಬೆಂಬಲ ನೀಡುತ್ತಾರೆ ಅವರ ಪತಿ ಡಾ.ಎಂ.ಕೆ.ಶ್ರೀವಾಸ್ತವ ಕೂಡ.
ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಲು ಮತ್ತು ಹೆಣ್ಣು ಮಗುವಿನ ಜನನ ಹೆಚ್ಚಿಸಲು, ಈ ಇಬ್ಬರು ವೈದ್ಯ ದಂಪತಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ತಾರತಮ್ಯ ಮಾಡುವವರಿಗೆ ಸೂಕ್ತ ಉತ್ತರ ನೀಡುತ್ತಿರುವ ಡಾಕ್ಟರ್ ಇವರು.
ಹೆಣ್ಣು ಮಗುವಿನ ಜನನದ ನಂತರ, ಕುಟುಂಬದಲ್ಲಿ ಯಾರಾದ್ರೂ ದುಃಖಪಟ್ಟರೆ, ಒಂದು ವಿಶಿಷ್ಟ ಅಭಿಯಾನ ಕೈಗೊಂಡಿದ್ದಾರೆ. ಇದರ ಅಡಿಯಲ್ಲಿ, ಶಿಪ್ರ ಅವರ ನರ್ಸಿಂಗ್ ಹೋಂನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರೆ, ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಬದಲಾಗಿ ಆಸ್ಪತ್ರೆಯಲ್ಲಿ ಸ್ವೀಟ್ಸ್ ಹಂಚಲಾಗುತ್ತದೆ.
ಹೆಣ್ಣು ಮಗು ಹುಟ್ಟಿದರೆ, ಬಡತನದ ಕಾರಣದಿಂದ ಅನೇಕ ಬಾರಿ ಜನರು ಅಳಲು ಶುರುಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಮುಗ್ಧ ಮಗುವನ್ನು ಜನರು ಸಂತೋಷದಿಂದ ಸ್ವೀಕರಿಸಲಿ ಎಂದು ನಾನು ಫೀಸ್ ಮತ್ತು ಹಾಸಿಗೆಗಳ ಫೀಸ್ ಅನ್ನು ವಿಧಿಸುವುದಿಲ್ಲ ಎನ್ನುತ್ತಾರೆ ಡಾ. ಶಿಪ್ರ.
ಇದು ನನಗೆ ಆರ್ಥಿಕವಾಗಿ ತುಂಬಾ ತೊಂದರೆಯಾಗುತ್ತದೆ. ಕೆಲವೊಮ್ಮೆ, ಆಸ್ಪತ್ರೆಯನ್ನು ನಡೆಸಲು ನನಗೆ ಹಣದ ಕೊರತೆ ಉಂಟಾಗುತ್ತದೆ. ಆದರೆ, ಸಮಾಜಕ್ಕಾಗಿ ಏನಾದರೂ ಮಾಡುವಾಗ ತೊಂದರೆಗಳನ್ನು ಅನುಭವಿಸಬೇಕಾತುತ್ದೆ, ಎನ್ನುತ್ತಾರ ಈ ಡಾಕ್ಟರ್.
ಶಿಪ್ರಾ ವಾರಣಾಸಿಯ ಪಹಡಿಯಾ ಪ್ರದೇಶದಲ್ಲಿ ಕಾಶಿ ಮೆಡಿಕೇರ್ ಹೆಸರಿನಲ್ಲಿ ನರ್ಸಿಂಗ್ ಹೋಂ ನಡೆಸುತ್ತಿದ್ದಾರೆ. ಹೆಣ್ಣು ಮಗು ಹುಟ್ಟಿದರೆ ಸಿಸೇರಿಯನ್ ಹೆರಿಗೆ ಆದರೂ ಒಂದು ಪೈಸೆ ಫೀಸ್ ತೆಗೆದುಕೊಳ್ಳಲ್ಲ ಈ ಲೇಡಿ ಡಾಕ್ಟರ್.
ವಾರಣಾಸಿಗೆ ಭೇಟಿ ನೀಡಿದಾಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಡಾಕ್ಟರ್ ಶಿಪ್ರಾ ಬಗ್ಗೆ ತಿಳಿದು ತುಂಬಾ ಪ್ರಭಾವಿತರಾಗಿ. ನಂತರ ಪ್ರಧಾನಮಂತ್ರಿ ತಮ್ಮ ಭಾಷಣದಲ್ಲಿ ದೇಶದ ಎಲ್ಲಾ ವೈದ್ಯರಿಗೆ ಪ್ರತಿ ತಿಂಗಳು 9 ರಂದು ಜನಿಸಿದ ಹೆಣ್ಣು ಮಗುವಿಗೆ ಯಾವುದೇ ಶುಲ್ಕ ವಿಧಿಸಬಾರದು ಎಂದು ಕರೆ ನೀಡಿದ್ದರು.
ಮಕ್ಕಳು ಮತ್ತು ಕುಟುಂಬಗಳನ್ನು ಅಪೌಷ್ಟಿಕತೆಯಿಂದ ರಕ್ಷಿಸಲು, ಡಾ. ಶಿಪ್ರಾ ಧಾನ್ಯ ಬ್ಯಾಂಕ್ ಸಹ ನಿರ್ವಹಿಸುತ್ತಿದ್ದಾರೆ. ಅವರು ಪ್ರತಿ ತಿಂಗಳ ಮೊದಲ ದಿನದಂದು ಅತ್ಯಂತ ಬಡ ವಿಧವೆಯರು ಮತ್ತು 38 ಅಸಹಾಯಕ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ಒದಗಿಸುತ್ತಾರೆ. ತಲಾ 10 ಕೆಜಿ ಗೋಧಿ ಮತ್ತು 5 ಕೆಜಿ ಅಕ್ಕಿ ನೀಡಲಾಗುತ್ತದೆ. ಇವರಿಂದ ಇನ್‌ಸ್ಪೈರ್ ಆಗಿ ಈಗ ನಗರದ ಇತರ ವೈದ್ಯರೂ ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.