ಫ್ರಾನ್ಸ್‌ ಸುಂದರಿಯ ಹೃದಯ ಕದ್ದ ಬಿಹಾರಿಗ, ಸಪ್ತ ಸಾಗರ ದಾಟಿ ಬಂದು ಮದುವೆಯಾದ ಯುವತಿ!

First Published | Nov 22, 2021, 11:38 PM IST

ಫ್ರಾನ್ಸ್‌ನ ಪ್ಯಾರಿಸ್‌ನ ಹುಡುಗಿಯ ಹೃದಯ ಬಿಹಾರಿ ಹುಡುಗ ಕದ್ದಿದ್ದಾನೆ. ಮೊದಲು ದೆಹಲಿಯಲ್ಲಿ ಭೇಟಿಯಾದ ಇವರಿಬ್ಬರು ಬಳಿಕ ಫೋನ್‌ನಲ್ಲಿ ಮಾತನಾಡಲು ಪ್ರಾರಂಭಿಸಿದರು. 6 ವರ್ಷಗಳ ಕಾಲ ಮುಂದುವರೆದ ಈ ಮಾತುಕತೆ ಬಳಿಕ ಪ್ರೀತಿಗೆ ತಿರುಗಿದೆ. ಆಗ ಈ ದೇಸಿ ಹುಡುಗನನ್ನು ಮದುವೆಯಾಗಲು ವಧು ಮತ್ತು ಅವಳ ಇಡೀ ಕುಟುಂಬವು ಸಪ್ತ ಸಾಗರ ದಾಟಿ ಭಾರತ ತಲುಪಿತು. ಬಾಲಕ ಬಿಹಾರದ ಬೇಗುಸರಾಯ್ ನಿವಾಸಿ. ಮನೆಯವರ ಒಪ್ಪಿಗೆಯ ನಂತರ ಇಬ್ಬರೂ ಒಂದಾಗಿದ್ದಾರೆ. ಇಬ್ಬರೂ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಮದುವೆಯಲ್ಲಿ, ವಧುವಿನ ಕುಟುಂಬ ಸದಸ್ಯರು ಹಿಂದಿ ಮತ್ತು ಭೋಜ್‌ಪುರಿ ಹಾಡುಗಳಿಗೆ ಸೊಂಟ ಬಳುಕಿಸಿದ್ದಾರೆ. ಭಾರತೀಯ ಪದ್ಧತಿಯಂತೆ ನಡೆದ ಈ ಮದುವೆಯನ್ನು ನೋಡಲು ಸುತ್ತಮುತ್ತಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
 

ಭಗವಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಠಾರಿಯಾ ಗ್ರಾಮದ ನಿವಾಸಿ ರಾಮಚಂದ್ರ ಸಾಹ್ ಅವರ ಪುತ್ರ ರಾಕೇಶ್ ಕುಮಾರ್ ಅವರು ಪ್ಯಾರಿಸ್ ನಿವಾಸಿ ಮೇರಿ ಲೋರಿ ಹೆರ್ಲೆ ಅವರನ್ನು ಸನಾತನ ಸಂಪ್ರದಾಯದಂತೆ ವಿವಾಹವಾದರು. ಈ ಮದುವೆಯಲ್ಲಿ ಪಾಲ್ಗೊಳ್ಳಲು ಪ್ಯಾರಿಸ್‌ನಿಂದ ವಧುವಿನ ಇಡೀ ಕುಟುಂಬ ಹುಡುಗಿಯೊಂದಿಗೆ ಆಗಮಿಸಿತ್ತು.
 

ರಾಕೇಶ್ ಕುಮಾರ್ ದೆಹಲಿಯಲ್ಲಿ ಟೂರಿಸ್ಟ್ ಗೈಡ್‌ ಆಗಿ ಕೆಲಸ ಮಾಡುತ್ತಿದ್ದರು. ಸುಮಾರು 6 ವರ್ಷಗಳ ಹಿಂದೆ ಭಾರತಕ್ಕೆ ಭೇಟಿ ನೀಡಲು ಬಂದಿದ್ದ ಮೇರಿ ಅವರೊಂದಿಗೆ ಸ್ನೇಹ ಬೆಳೆಸಿದರು. ಭಾರತದಿಂದ ಹಿಂದಿರುಗಿದ ನಂತರ, ಇಬ್ಬರ ನಡುವೆ ಮಾತುಕತೆ ಮುಂದುವರೆಯಿತು. ಕ್ರಮೇಣ ಸ್ನೇಹ ಪ್ರೀತಿಗೆ ತಿರುಗಿತು. ಸುಮಾರು 3 ವರ್ಷಗಳ ಹಿಂದೆ ರಾಕೇಶ್ ಕೂಡ ಪ್ಯಾರಿಸ್ ಗೆ ತೆರಳಿದ್ದರು. ಅಲ್ಲಿ ಅವರು ಮೇರಿ ಸಹಭಾಗಿತ್ವದಲ್ಲಿ ಬಟ್ಟೆ ವ್ಯಾಪಾರವನ್ನು ಪ್ರಾರಂಭಿಸಿದರು. ಈ ವೇಳೆ ಇಬ್ಬರೂ ತುಂಬಾ ಆತ್ಮೀಯರಾದರು. ಈ ವಿಷಯ ತಿಳಿದ ಮೇರಿ ಸಂಬಂಧಿಕರು ಇಬ್ಬರ ಮದುವೆಗೆ ಅನುಮತಿ ನೀಡಿದ್ದಾರೆ.

Tap to resize

ಈ ಹಿಂದೆ ಇಬ್ಬರೂ ಪ್ಯಾರಿಸ್‌ನಲ್ಲಿಯೇ ಮದುವೆಯಾಗಲು ಯೋಚಿಸಿದ್ದರು. ಆದರೆ ಮೇರಿ ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತಿದ್ದರು. ಭಾರತಕ್ಕೆ ಬಂದು ರಾಕೇಶ್ ಕುಮಾರ್ ಅವರ ಹಳ್ಳಿಯಲ್ಲಿ ಮದುವೆಯಾಗಲು ಯೋಜನೆ ರೂಪಿಸಿದ್ದಳು. ಇದಾದ ನಂತರ ಮೇರಿ ತನ್ನ ತಂದೆ-ತಾಯಿ ಮತ್ತು ರಾಕೇಶ್ ಜೊತೆ ಗ್ರಾಮಕ್ಕೆ ಬಂದಿದ್ದಳು. ಅಲ್ಲಿ ಭಾನುವಾರ ರಾತ್ರಿ, ಭಾರತೀಯ ಸನಾತನ ಸಂಪ್ರದಾಯದ ಪ್ರಕಾರ, ಇಬ್ಬರೂ ವೇದ ಮಂತ್ರಗಳ ನಡುವೆ ವಿವಾಹವಾದರು.

ಗ್ರಾಮದಲ್ಲಿ ಹಿಂದೂ ಸಂಪ್ರದಾಯದಂತೆ ಇಬ್ಬರೂ ವಿವಾಹವಾಗಿದ್ದಾರೆ. ಇಡೀ ಕುಟುಂಬ ಜಯಮಾಲದಲ್ಲಿ ಒಟ್ಟಾಗಿ ಪಾಲ್ಗೊಂಡಿತ್ತು. ಇಬ್ಬರೂ ಮಾಲೆ ಹಾಕಿ ಸಂಪ್ರದಾಯ ನೆರವೇರಿಸಿದ್ದಾರೆ. ಅಷ್ಟೇ ಅಲ್ಲದೇ, ಮದುವೆಯಲ್ಲಿ ಎಲ್ಲಾ ವಿಧಿವಿಧಾನಗಳೂ ನಡೆದವು. ಮದುವೆಯಲ್ಲಿ ವಧುವಿನ ಕುಟುಂಬವು ಹಿಂದಿ ಮತ್ತು ಭೋಜ್‌ಪುರಿ ಹಾಡುಗಳ ಮೇಲೆ ಭರ್ಜರಿಯಾಗಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.

ಮದುವೆಯ ಮರುದಿನ ಸೋಮವಾರ, ವಿದೇಶಿ ವಧುವನ್ನು ನೋಡಲು ಸಂಬಂಧಿಕರು ಮತ್ತು ಗ್ರಾಮಸ್ಥರು ಮನೆಯಲ್ಲಿ ಜಮಾಯಿಸಿದ್ದರು. ವಧು-ವರರ ಜೋಡಿಯನ್ನು ನೋಡಿ ಕುಟುಂಬಸ್ಥರೆಲ್ಲ ಸಂತಸಗೊಂಡಿದ್ದಾರೆ. ಎಲ್ಲರೂ ಇಬ್ಬರಿಗೂ ಆಶೀರ್ವಾದ ಮಾಡುತ್ತಿದ್ದಾರೆ. ಮಂಗಳವಾರ ಬೆಳಗ್ಗೆ ನವವಿವಾಹಿತ ವಧು ತನ್ನ ಅತ್ತೆಯ ಮನೆಯಿಂದ ತೆರಳಿದ್ದಾಳೆ. ಮುಂದಿನ ವಾರ ಇಬ್ಬರೂ ಪ್ಯಾರಿಸ್‌ಗೆ ಹಿಂತಿರುಗುತ್ತಾರೆ.

Latest Videos

click me!