ಪತ್ನಿಗಾಗಿ ತಾಜ್‌ ಮಹಲ್‌ನಂತೆ ಮನೆ ಕಟ್ಟಿಸಿದ ಪತಿ..!

First Published Nov 22, 2021, 6:22 PM IST

ಪ್ರೀತಿಯನ್ನು(Love) ವ್ಯಕ್ತಪಡಿಸುವ ರೀತಿ ಒಬ್ಬರಿಂದ ಇನ್ನೊಬ್ಬರಿಗೆ ಬಹಳಷ್ಟು ಭಿನ್ನವಾಗಿರುತ್ತದೆ. ಕೆಲವರು ಮಾತುಗಳ ಮೂಲಕ, ಇನ್ನು ಕೆಲವರು ಉಡುಗೊರೆ(Gift) ಮೂಲಕ. ಈ ರೀತಿ ಡಿಫರೆಂಟ್. ಇಲ್ಲೊಬ್ಬರು ಪತ್ನಿಗಾಗಿ ತಾಜ್ ಮಹಲ್(Taj Mahal) ಕಟ್ಟಿದ್ದಾರೆ

ಆಗ್ರಾದ ತಾಜ್ ಮಹಲ್‌ನ ರೆಪ್ಲಿಕಾವನ್ನು ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿ ಮಾಡಲಾಗಿದೆ. ಇದು ಚಿಕ್ಕ ಮಾಡೆಲ್ ಅಲ್ಲ. ನಿಜವಾಗಿಯೂ ತಾಜ್ ಮಹಲ್ ರೆಪ್ಲಿಕಾ ಮಾಡಲಾಗಿದೆ.

ತಾಜ್‌ಮಹಲನ್ನು ಬೆಲೆಬಾಳುವ ಮನೆಯಾಗಿ ನಿರ್ಮಿಸಲಾಗಿದೆ. ಷಹಜಹಾನ್ ತನ್ನ ಹೆಂಡತಿಯ ಮೇಲಿನ ಪ್ರೀತಿಯ ಸಂಕೇತವಾಗಿ ಪ್ರಸಿದ್ಧ ತಾಜ್‌ ಮಹಲ್(Taj Mahal) ಸ್ಮಾರಕವನ್ನು ಮಾಡಿದಂತೆಯೇ, ಈ ಕಟ್ಟಡವು ವ್ಯಕ್ತಿಯೊಬ್ಬರು ಸಂಗಾತಿಗೆ ಕೊಟ್ಟ ಉಡುಗೊರೆಯಾಗಿತ್ತು.

ಬುರ್ಹಾನ್‌ಪುರದ ನಿವಾಸಿ ಆನಂದ್ ಚೋಕ್ಸೆ ಅವರು ಯಾವಾಗಲೂ ತಮ್ಮ ನಗರವಾದ ಬುರ್ಹಾನ್‌ಪುರದಲ್ಲಿ ತಾಜ್‌ಮಹಲ್ ಅನ್ನು ಏಕೆ ನಿರ್ಮಿಸಲಿಲ್ಲ ಎಂದು ಯೋಚಿಸುತ್ತಿದ್ದರು. ಅವರ ಯೋಚನೆಯ ಪರಿಣಾಮವೇ ಈ ರೆಪ್ಲಿಕಾ

ಶಾಜಹಾನ್ ಅವರ ಪತ್ನಿ ಮುಮ್ತಾಜ್ ಆ ನಗರದಲ್ಲಿ ನಿಧನರಾದರು. ತಾಜ್ ಮಹಲ್ ಅನ್ನು ತಪತಿ ನದಿಯ ದಡದಲ್ಲಿ ನಿರ್ಮಿಸಬೇಕಾಗಿತ್ತು. ಆದರೆ ನಂತರ ಆಗ್ರಾದಲ್ಲಿ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ.

ತಾಜ್ ಮಹಲ್‌ನ ನಿಖರವಾದ ಪ್ರತಿರೂಪವಾಗಿರುವ 4 ಮಲಗುವ ಕೋಣೆಗಳ ಮನೆಯನ್ನು ನಿರ್ಮಿಸಲು ಬರೋಬ್ಬರಿ ಮೂರು ವರ್ಷಗಳು ಬೇಕಾಗಿದೆ.

ಮನೆ ನಿರ್ಮಾಣದಲ್ಲಿ ಹಲವು ಸವಾಲುಗಳಿತ್ತು ಎಂದು ಮನೆ ನಿರ್ಮಿಸಿದ ಎಂಜಿನಿಯರ್ ಹೇಳಿದ್ದಾರೆ. ಅವರು ನಿಜವಾದ ತಾಜ್ ಮಹಲ್ ಅನ್ನು ಹತ್ತಿರದಿಂದ ಅಧ್ಯಯನ ಮಾಡಿದ್ದಾರೆ. ಮನೆಯೊಳಗಿನ ಕೆತ್ತನೆಗಾಗಿ ಅವರು ಬಂಗಾಳ ಮತ್ತು ಇಂದೋರ್‌ನ ಕಲಾವಿದರಿಂದ ಸಹಾಯ ಪಡೆದಿದ್ದಾರೆ.

ಮನೆಯ ಗುಮ್ಮಟ 29 ಅಡಿ ಎತ್ತರದಲ್ಲಿದೆ. ಇದು ತಾಜ್ ಮಹಲ್ ತರಹದ ಗೋಪುರಗಳನ್ನು ಹೊಂದಿದೆ. ಮನೆಯ ನೆಲಹಾಸನ್ನು ರಾಜಸ್ಥಾನದ 'ಮಕ್ರಾನಾ'ದಿಂದ ಮಾಡಲಾಗಿದೆ. ಪೀಠೋಪಕರಣಗಳನ್ನು ಮುಂಬೈನ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ.

ಇದು ದೊಡ್ಡ ಸಭಾಂಗಣ, ಕೆಳಗೆ 2 ಮಲಗುವ ಕೋಣೆಗಳು, ಮೇಲಿನ ಮಹಡಿಯಲ್ಲಿ 2 ಮಲಗುವ ಕೋಣೆಗಳು, ಗ್ರಂಥಾಲಯ ಮತ್ತು ಧ್ಯಾನ ಕೊಠಡಿಯನ್ನು ಹೊಂದಿದೆ.

ಅಷ್ಟೇ ಅಲ್ಲ, ಮನೆಯ ಒಳಗೂ ಹೊರಗೂ ದೀಪಾಲಂಕಾರ ಮಾಡಿದ್ದು ನಿಜವಾದ ತಾಜ್ ಮಹಲ್ ನಂತೆಯೇ ಈ ಮನೆಯೂ ಕತ್ತಲಲ್ಲಿ ಹೊಳೆಯುತ್ತದೆ.

ಇದು ದೊಡ್ಡ ಸಭಾಂಗಣ, ಕೆಳಗೆ 2 ಮಲಗುವ ಕೋಣೆಗಳು, ಮೇಲಿನ ಮಹಡಿಯಲ್ಲಿ 2 ಮಲಗುವ ಕೋಣೆಗಳು, ಗ್ರಂಥಾಲಯ ಮತ್ತು ಧ್ಯಾನ ಕೊಠಡಿಯನ್ನು ಹೊಂದಿದೆ.

ಅಷ್ಟೇ ಅಲ್ಲ, ಮನೆಯ ಒಳಗೂ ಹೊರಗೂ ದೀಪಾಲಂಕಾರ ಮಾಡಿದ್ದು ನಿಜವಾದ ತಾಜ್ ಮಹಲ್ ನಂತೆಯೇ ಈ ಮನೆಯೂ ಕತ್ತಲಲ್ಲಿ ಹೊಳೆಯುತ್ತದೆ.

ಇದೀಗ ತಾಜ್‌ ಮಹಲ್ ರೆಪ್ಲಿಕಾ ಮನೆಯ ಫೋಟೋಗಳು(Photos) ಎಲ್ಲೆಡೆ ವೈರಲ್ ಆಗಿವೆ. ಥೇಟ್ ತಾಜ್‌ಮಹಲ್‌ನಂತೆಯೇ ಕಾಣುತ್ತಿರುವ ಅದ್ಭುತ ಬಂಗಲೆ ಮೆಚ್ಚುಗೆ ಗಳಿಸಿದೆ.

click me!