ಅಮಿನಲ್ ಹಖ್ ತಾನು ಭಾರತೀಯ ಎಂದು ಸಾಬೀತು ಪಡಿಸಲು ಕೋರ್ಟ್‌ಗೆ 16 ದಾಖಲೆ ನೀಡಿದ್ದಾರೆ. ಆದರೆ ಹೈಕೋರ್ಟ್ ವಿದೇಶಿ ಎಂದು ಐತಿಹಾಸಿಕ ತೀರ್ಪು ನೀಡಿದೆ. ಕೋರ್ಟ್ ತೀರ್ಪಿಗೆ ಭಾರಿ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಏನಿದು ಪ್ರಕರಣ?
ಭಾರತೀಯ ಎಂದು ಸಾಬೀತುಪಡಿಸಲು ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ 16 ದಾಖಲೆಗಳನ್ನು ಹೈಕೋರ್ಟ್‌ಗೆ ಸಲ್ಲಿಕೆ ಮಾಡಿದ್ದಾನೆ. ಆದರೆ ಈ 16 ದಾಖಲೆಗಳು ಅಮಿನಲ್ ಹಖ್‌ನ ಕಾಪಾಡಲಿಲ್ಲ. ವಿದೇಶಿ ಕಾಯ್ದೆ 1964ರ ಸೆಕ್ಷನ್ 9ರ ಅಡಿ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. 16 ದಾಖೆಗಳಿದ್ದರೂ ಪೌರತ್ವ ಸಾಬೀತುಪಡಿಸಲು ಯಾಕೆ ಸಾಧ್ಯವಾಗಲಿಲ್ಲ. ಏನಿದು ಪ್ರಕರಣ?
26
ಸಾಬೀತುಪಡಿಸುವ ಜವಾಬ್ದಾರಿ ಆತನದ್ದೇ
ಅಸ್ಸಾಂ ಗೌವ್ಹಾಟಿ ಹೈಕೋರ್ಟ್‌ನ ಜಸ್ಟಿಸ್ ಕಲ್ಯಾಣ್ ರೈ ಸುರಾನ ಹಾಗೂ ಶಮಿಮಾ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಅಮಿನಲ್ ಹಕ್ ವಲಸೆ ಕಾರ್ಮಿಕ ಎಂದು ಕೋರ್ಟ್‌ನಲ್ಲಿ ವಾದಿಸಲಾಯಿತು. ಆದರೆ ಭಾರತೀಯ ಎಂದು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಒಬ್ಬ ಪೌರನ ಪೌರತ್ವದ ಮೇಲೆ ಅನುಮಾನ ವ್ಯಕ್ತವಾದರೆ ಅದನ್ನು ಸಾಬೀತುಪಡಿಸುವ ಜವಾಬ್ದಾರಿ ಆತನದ್ದೇ ಆಗಿರುತ್ತದೆ ಎಂದು ತೀರ್ಪಿನಲ್ಲಿ ಹೈಕೋರ್ಟ್ ಉಲ್ಲೇಖಿಸಿದೆ.
36
ಶಾಲಾ ಪ್ರಮಾಣ ಪತ್ರವೂ ರಿಜೆಕ್ಟ್
ಅಸ್ಸಾಂ ಕಾರ್ಮಿಕ ಅಮಿನಲ್ ಹಖ್ ವಿದೇಶಿಗ ಎಂದು ಕೋರ್ಟ್ ತೀರ್ಪು ನೀಡಿದೆ. ಕುಟುಂಬ ಹಲವು ದಶಗಳಿಂದ ಅಸ್ಸಾಂನಲ್ಲಿ ನೆಲೆಸಿದೆ. ಅಜ್ಜ ಅಜ್ಜಿಯ ದಾಖಲೆ, ತಂದೆ ತಾಯಿಯ ದಾಖಲೆ, 1966ರಿಂದ 2017ರ ವರೆಗಿನ ಮತದಾರರ ಪಟ್ಟಿಯಲ್ಲಿನ ಹೆಸರು, ಜಮೀನು ಖರೀದಿ ಪತ್ರ, ಪ್ಯಾನ್ ಕಾರ್ಡ್, ಶಾಲಾ ಪ್ರಮಾಣ ಪತ್ರ ಸೇರಿದಂತೆ 16 ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿತ್ತು. ದಾಖಲೆ ಪರಿಶೀಲಿಸಿದ ಕೋರ್ಟ್, ದಾಖಲೆ ತಿರಸ್ಕರಿಸಿ ಹಖ್ ವಿರುದ್ದ ತೀರ್ಪು ನೀಡಿದೆ.
ಹೈಕೋರ್ಟ್‌ಗೆ ಅಮಿನಲ್ ಹಕ್ ಎನ್‌ಸಿಆರ್ ದಾಖಲೆ ನೀಡಿದ್ದರು. ಆದರೆ 1951ರ ಎನ್‌ಸಿಆರ್ ಪ್ರತಿ ಕೇವಲ ಕಂಪ್ಯೂಟರ್ ಜನರೇಟೆಡ್ ಪ್ರಿಂಟ್ಔಟ್ ಆಗಿತ್ತು. ಇದು ಸರ್ಕಾರದಿಂದ ನೀಡಿದ ಅಧಿಕೃತ ದಾಖಲೆಯಲ್ಲ ಅನ್ನೋದು ಪರಿಶೀಲನೆ ವೇಳೆ ಸಾಬೀತಾಗಿತ್ತು. ಇನ್ನು ತಂದೆಯ ಹೆಸರು ಹಲವು ದಾಖಲೆಗಳಲ್ಲಿ ಬೇರೆ ಬೇರೆಯಾಗಿತ್ತು. ಜೊತೆಗೆ ವಲಸೆ ಹೋದ ಯಾವುದೇ ದಾಖಲೆ ಎಲ್ಲೂ ಇರಲಿಲ್ಲ.
56
ತಂದೆ ಸಾಕ್ಷ್ಯ ನುಡಿದರೂ ದಾಖಲೆ ಇಲ್ಲ
ಶಾಲೆಯ ಮುಖ್ಯೋಪಾದ್ಯಯರು ನೀಡಿದ ಸರ್ಟಿಫಿಕೇಟ್ ಸಾಬೀತುಪಡಿಸಲು ಕೋರ್ಟ್‌ಗೆ ಹೆಡ್‌ಮಾಸ್ಟರ್ ಹಾಜರಾಗಿಲ್ಲ. ಇತ್ತ ಅಮಿನಲ್ ಹಕ್ ಸಾಕ್ಷಿ ನುಡಿದರೂ ಸಾಬೀತುಪಡಿಸುವ ಯಾವುದೇ ದಾಖಲೆ ಅವರ ಬಳಿ ಇರಲಿಲ್ಲ. ಹೀಗಾಗಿ ಕೋರ್ಟ್ ಹಮಿನಲ್ ಹಕ್ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ ವಿದೇಶಿಗ ಎಂದು ತೀರ್ಪು ನೀಡಿದೆ.
66
ಪಾಸ್‌ಪೋರ್ಟ್ ದಾಖಲೆ ಬೆನ್ನಲ್ಲೇ ತೀರ್ಪು
ಇತ್ತೀಚೆಗೆ ವಿದೇಶಾಂಗ ಇಲಾಖೆ ಭಾರತೀಯ ಪೌರತ್ವಕ್ಕೆ ಪಾಸ್‌ಪೋರ್ಟ್ ದಾಖಲೆ ಅಲ್ಲಎಂದಿತ್ತು. ಇದರ ಬೆನ್ನಲ್ಲೇ ಗೌವ್ಹಾಟಿ ಹೈಕೋರ್ಟ್ ನೀಡಿದ ತೀರ್ಪು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ