Rain: ಜೂನ್‌ ಮುಗಿದ್ರೂ ಈ ವರ್ಷ 40% ಮಳೆ ಕಡಿಮೆ; ಜುಲೈ, ಆಗಸ್ಟ್‌ನಲ್ಲಿ ಮಳೆ ಆಗುತ್ತಾ? ಸಮಸ್ಯೆ ತಂದಿಟ್ಟ El Nino

Published : Jul 03, 2026, 02:49 PM IST

Rain in india this week: ಭಾರತದಲ್ಲಿ ಕೃಷಿಗೆ ಮುಂಗಾರು ಮಳೆ ತುಂಬ ಮುಖ್ಯ. ಜೂನ್ ತಿಂಗಳ ಕೊನೆ ಆದರೂ ಕೂಡ ಹೆಚ್ಚು ಮಳೆ ಆಗಿಲ್ಲ. ನಮ್ಮ ದೇಶದಲ್ಲಿ ಶೇಕಡಾ 40 ರಷ್ಟು ಮಳೆ ಕೊರತೆಯಾಗಿದೆ. 'ಎಲ್ ನಿನೋ' (El Nino - ಜಾಗತಿಕ ಹವಾಮಾನ ಬದಲಾವಣೆ) ಪ್ರಭಾವದಿಂದಾಗಿ ಮಳೆ ಮತ್ತಷ್ಟು ಕಡಿಮೆಯಾಗಲಿದೆ.

PREV
14
ಕೃಷಿಯ ಮೇಲಾದ ತಕ್ಷಣದ ಪರಿಣಾಮಗಳೇನು?

ಮಳೆ ಇಲ್ಲದ ಕಾರಣ ರೈತರಿಗೆ ಕೃಷಿ ಮಾಡೋದು ಕಷ್ಟ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಳೆಗಳ ಬಿತ್ತನೆ ಕಡಿಮೆ ಆಗಿದೆ.

ಎಣ್ಣೆಕಾಳುಗಳ ಬಿತ್ತನೆಯು ಶೇ. 53 ರಷ್ಟು ಕಡಿಮೆ ಆಗಿದೆ

ಬೇಳೆಕಾಳುಗಳ ಬಿತ್ತನೆ ಶೇ. 30 ರಷ್ಟು ಕಡಿಮೆಯಾಗಿದೆ.

ಭತ್ತ ಬಿತ್ತನೆ ಶೇ. 25 ರಷ್ಟು ಕಡಿಮೆ ಆಗಿದೆ

24
ಯಾವ ಪ್ರದೇಶಗಳಿಗೆ ಹೆಚ್ಚು ತೊಂದರೆ?

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ತೆಲಂಗಾಣ ಮುಂತಾದ ರಾಜ್ಯಗಳಿಗೆ ತೊಂದರೆ ಆಗಿವೆ. ಈ ರಾಜ್ಯಗಳಲ್ಲಿ ಜಲಾಶಯಗಳ ನೀರಿನ ಮಟ್ಟವು ಕಳೆದ ವರ್ಷಕ್ಕಿಂತ ಸಿಕ್ಕಾಪಟ್ಟೆ ಕಡಿಮೆಯಾಗಿದೆ. ಇಲ್ಲಿ ದೇಶದ ಒಟ್ಟು ಸೋಯಾಬೀನ್, ಹತ್ತಿ, ಕಬ್ಬು, ಬೇಳೆಕಾಳುಗಳನ್ನು ಹೆಚ್ಚು ಬೆಳೆಯಲಾಗುತ್ತಿತ್ತು.

34
ಸಾಮಾನ್ಯ ಜನರ ಮೇಲೆ ಇದರ ಪ್ರಭಾವವೇನು? (ಆಹಾರ ಹಣದುಬ್ಬರ)

ಮಳೆ ಕಡಿಮೆಯಾದರೆ ಬೆಳೆಗಳ ಉತ್ಪಾದನೆ ಕಡಿಮೆ ಆಗುತ್ತದೆ, ಅಕ್ಕಿ, ಬೇಳೆಕಾಳುಗಳು, ಅಡುಗೆ ಎಣ್ಣೆ, ತರಕಾರಿಗಳ ಕೊರತೆ ಆಗುತ್ತದೆ.

44
ಜುಲೈ, ಆಗಸ್ಟ್‌ನಲ್ಲಿ ಮಳೆ?

ದೇಶದಲ್ಲೇ ಆಹಾರ ಕಡಿಮೆ ಆದರೆ, ಸರ್ಕಾರವು ಬೇರೆ ದೇಶಗಳಿಗೆ ಆಹಾರ ಧಾನ್ಯಗಳನ್ನು ರಫ್ತು ಮಾಡುವುದನ್ನು ನಿಲ್ಲಿಸಬೇಕು. ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಮಳೆ ಆದರೆ ಕೃಷಿ ಮಾಡಬಹುದು ಎನ್ನಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories