ವಿದೇಶಿ ನಾಯಕರಿಗೆ ತರವಲ್ಲ ತಾಜ್, ಭೇಟಿಯ ಕೆಲವೇ ತಿಂಗಳಲ್ಲಿ ಡೈವೋರ್ಸ್!

First Published Feb 24, 2020, 4:41 PM IST

ಆಗ್ರಾದಲ್ಲಿ ನಿರ್ಮಾಣವಾದ ಪ್ರೇಮ ಸೌಧ, ಇದರ ಸೌಂದರ್ಯ ಹಾಗೂ ಪ್ರೀತಿಯ ಕತೆ ವಿಶ್ವದಾದ್ಯಂತ ಫೇಮಸ್ ಆಗಿದೆ. ಬಹುಶಃ ಇದೇ ಕಾರಣದಿಂದ ವಿಶ್ವದೆಲ್ಲೆಡೆಯಿಂದ ಜನರು ಇದನ್ನು ವೀಕ್ಷಿಸಲು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ ಆಗ್ರಾದ ತಾಜ್ ಇತಿಹಾಸದ ಮೇಲೆ ಕಣ್ಣು ಹಾಯಿಸಿದರೆ, ಇದು ಹಲವು ವಿದೇಶೀ ನಾಯಕರು ಹಾಗೂ ಸೆಲೆಬ್ರಿಟಿಗಳ ಪಾಲಿಗೆ ಕಹಿ ನೆನಪಾಗಿ ಉಳಿದಿದೆ. ಇಲ್ಲಿಗೆ ಭೇಟಿ ನೀಡಿದ ಕೆಲವೇ ತಿಂಗಳಲ್ಲಿ ಇವರು ತಮ್ಮ ಜೋಡಿಯಿಂದ ದೂರವಾಗಿದ್ದಾರೆ. ಇಂತಹ ಕೆಲ ಗಣ್ಯರ ಪಟ್ಟಿ ಇಲ್ಲಿದೆ ನೋಡಿ

ವ್ಲಾಡಿಮಿರ್‌ ಪುಟಿನ್‌: 2000 ಇಸವಿಯಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ತನ್ನ ಹೆಂಡತಿ ಲುಡ್ಮೀಲಾ ಜೊತೆ ಭಾರತಕ್ಕೆ ಆಗಮಿಸಿದ್ದರು. ಈ ವೇಳೆ ಅವರು ತಮ್ಮ ಪತ್ನಿಯೊಂದಿಗೆ ತಾಜ್ ಮಹಲ್ ನೋಡಲು ತೆರಳಿದ್ದರು. ಆದರೆ ಇಬ್ಬರ ಜೀವನದಲ್ಲಿ ತಾಜ್ ಕಹಿ ನೆನಪಾಗಿ ಉಳಿಯಿತು. ಕೇವಲ 3 ವರ್ಷದೊಳಗೆ ಇವರು ವಿಚ್ಛೇದನ ಪಡೆದುಕೊಂಡರು.
undefined
ಬೋರಿಸ್ ಬೆಕರ್: 2012ರಲ್ಲಿ ಟೆನಿಸ್ ಆಟಗಾರ ಬೋರಿಸ್ ಬೆಕರ್ ಭಾರತಕ್ಕೆ ಬಂದಿದ್ದರು. ಅಂದು ಅವರ ಪತ್ನಿ ಕೂಡಾ ಅವರೊಂದಿಗೆ ಆಗಮಿಸಿದ್ದರು. ಇದಾದ ಬಳಿಕ ಇಬ್ಬರೂ ಡೈವೋರ್ಸ್ ಪಡೆದುಕೊಂಡಿದ್ದರು.
undefined
ರಸೆಲ್ ಬ್ರಾಂಡ್: 2009ರಲ್ಲಿ ಹಾಲಿವುಡ್ ನ ಪ್ರಸಿದ್ಧ ಕಾಮಿಡಿಯನ್ ಆ್ಯಕ್ಟರ್ ರಸೆಲ್ ಬ್ರಾಂಡ್ ತಮ್ಮ ಪ್ರಯತಮೆ ಕ್ಯಾಟಿ ಪೈರೀ ಜೊತೆ ಭಾರತಕ್ಕೆ ಪ್ರವಾಸ ಕೈಗೊಂಡಿದ್ದರು. ಇಲ್ಲಿಂದ ಮರಳಿದ್ದ ಈ ಜೋಡಿ ಮದುವೆಯಾಗಿದ್ದರು. ಆದರೆ ಈ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ,. ಇಬ್ಬರೂ ಕೇವಲ 14 ತಿಂಗಳೊಳಗೆ ವಿಚ್ಛೇದನ ಪಡೆದುಕೊಂಡರು.
undefined
ಟಾಮ್ ಕ್ರೂಜ್: ತಮ್ಮ ಲುಕ್ ಹಾಗೂ ನಟನೆಯಿಂದ ಎಲ್ಲರ ಮನಕದ್ದ ಟಾಮ್ ಕ್ರೂಜ್ ತಮ್ಮ ಸಿನಿಮಾ ಪ್ರಚಾರಕ್ಕಾಗಿ 2011ರಲ್ಲಿ ಭಾರತಕ್ಕೆ ಆಗಮಿಸಿದ್ದರು. ಅಂದು ಟಾಮ್ ತಾಜ್ ಮಹಲ್ ಗೆ ಭೇಟಿ ನೀಡಿದ್ದರು. ಇಲ್ಲಿಂದ ಮರಳಿದ ಕೇವಲ 3 ತಿಂಗಳೊಳಗೆ ಅವರು ತಮ್ಮ ಮೂರನೇ ಪತ್ನಿ ಕ್ಯಾಟಿ ಹೋಮ್ಸ್ ಗೆ ವಿಚ್ಛೇದನ ನೀಡಿದ್ದರು.
undefined
ರಾಜಕುಮಾರಿ ಡಯಾನಾ: ರಾಜಕುಮಾರಿ ಡಯಾನಾ ಜೀವನ ಬಹಳಷ್ಟು ವಿವಾದಮಯವಾಗಿದೆ. ಆದರೆ ತಾಜ್ ಮಹಲ್ ಭೇಟಿ ಕೂಡಾ ಅವರ ಜೀವನದಲ್ಲಿ ಕಹಿಯಾಗಿ ಪರಿಣಮಿಸಿದೆ. ಅವರು 1992ರಲ್ಲಿ ಭಾರತಕ್ಕೆ ಬಂದಿದ್ದರು. ಅಂದು ಅವರು ಏಕಾಂಗಿಯಾಗಿಯೇ ಆಗಮಿಸಿದ್ದರು. ಅಂದು ಅವರಲ್ಲಿ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ಕುರಿತು ಪ್ರಶ್ನಿಸಿದಾಗ 'ಅವರು ಕೂಡಾ ಜೊತೆಗಿದ್ದರೆ ಚೆನ್ನಾಗಿರುತ್ತಿತ್ತು' ಎಂದು ಉತ್ತರಿಸಿದ್ದರು. ಆದರೆ ಕಾಕತಾಳೀಯವೆಂಬಂತೆ ಇಲ್ಲಿಗೆ ಭೇಟಿ ನೀಡಿ ಮರಳಿದ 10 ತಿಂಗಳೊಳಗೆ ಇಬ್ಬರೂ ವಿಚ್ಛೇದನ ಪಡೆದುಕೊಂಡರು.
undefined
ಜಾಕ್ಲೀನ್ ಕೆನಡಿ: ಅಮೆರಿಕಾದ ಮಾಜಿ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ಪತ್ನಿ 1962ರಲ್ಲಿ ಭಾರತಕ್ಕೆ ಬಂದಿದ್ದರು. ಅಂದು ಅವರು ತಾಜ್ ಮಹಲ್ ಗೂ ಭೇಟಿ ನೀಡಿದ್ದರು. ಆದರೆ ಇಲ್ಲಿಂದ ಮರಳಿದ ಕೆಲವೇ ತಿಂಗಳಲ್ಲಿ ಇಬ್ಬರೂ ದೂರವಾದರು,. ಇಬ್ಬರೂ ಡೈವೋರ್ಸ್ ಪಡೆದಿರಲಿಲ್ಲವಾದರೂ, 1963ರಲ್ಲಿ ಅವರ ಪತಿಯ ಹತ್ಯೆ ನಡೆದಿತ್ತು.
undefined
ಹೀಗಂತ ತಾಜ್ ಎಲ್ಲರ ಬಾಳಲ್ಲೂ ಕಹಿ ಅನುಭವ ನೀಡಿಲ್ಲ. ಇಲ್ಲಿಗೆ ಭೇಟಿ ನೀಡಿದ ಅನೇಕ ಗಣ್ಯರು ಇಂದಿಗೂ ತಮ್ಮ ಸಂಗಾತಿ ಜೊತೆ ಪ್ರೀತಿಯಿಂದ ಇದ್ದಾರೆ ಹಾಗೂ ವಿಶ್ವಕ್ಕೇ ಮಾದರಿಯಾಗಿದ್ದಾರೆ.
undefined
ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಹಾಗೂ ಅವರ ಪತ್ನಿ ಹಿಲರಿ ಕ್ಲಿಂಟನ್ ತಾಜ್ ಗೆ ಭೇಟಿ ನೀಡಿದ್ದು, ಇಂದಿಗೂ ಪ್ರೀತಿಯಿಂದಿದ್ದಾರೆ.
undefined
ಕ್ರಿಕೆಟರ್ ಡಿವಿಲಿಯರ್ಸ್ ಹಾಗೂ ಪತ್ನಿ ಡೇನಿಯಲ್ ಡಿವಿಲಿಯರ್ಸ್ ಇಲ್ಲಿಗೆ ಭೇಟಿ ನೀಡಿದ್ದರು. ವಿಶೇಷವೆಂದರೆ ಎಬಿಡಿ ತನ್ನ ಜೊತೆಗಾರ್ತಿಗೆ ಪ್ರೊಪೋಸ್ ಮಾಡಿದ್ದು ಕೂಡಾ ಇಲ್ಲೇ.
undefined
click me!