ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಿದ್ದು, ಭಾರತ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದೆ. ಪ್ರಧಾನಿ ನರೇಂದ್ರ ಮೋದಿ ಖುದ್ದು ಟ್ರಂಪ್‌ರನ್ನು ಆಲಂಗಿಸಿ ಸ್ವಾಗತಿಸಿದ್ದಾರೆ. ಎರಡು ದಿನ ಭಾರತ ಪ್ರವಾಸದಲ್ಲಿರುವ ಟ್ರಂಪ್ ತಮ್ಮ ಪತ್ನಿ ಮೆಲೇನಿಯಾ ಜೊತೆ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್‌ಗೂ ಭೇಟಿ ನೀಡಲಿದ್ದಾರೆ. ಹೀಗಿರುವಾಗ ಅಮೃತಶಿಲೆಯಲ್ಲಿ ನಿರ್ಮಿಸಿರುವ ತಾಜ್ ಮಹಲ್ ನವ ವಧುವಿನಂತೆ ಕಂಗೊಳಿಸುತ್ತಿವೆ. ಟ್ರಂಪ್ ಭೇಟಿ ಹಿನ್ನೆಲೆ ತಾಜ್‌ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸದ್ಯ ತಾಜ್ ಹೇಗಿದೆ? ಇಲ್ಲಿದೆ ನೋಡಿ ಲೇಟೆಸ್ಟ್ ಫೋಟೋಸ್