ನಾರಿ ಶಕ್ತಿ: ಮೋದಿ ಮನ್ ಕೀ ಬಾತ್ ನಲ್ಲಿ ಸದ್ದು ಮಾಡಿದ ಈ ಪುಟ್ಟ ಹುಡುಗಿ ಯಾರು?

First Published Feb 23, 2020, 2:56 PM IST

ಪ್ರಧಾನಿ ಮೋದಿ ಭಾನುವಾರದಂದು ದೇಶವನ್ನುದ್ದೆಶಿಸಿ ಮನ್ ಕೀ ಬಾತ್ ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರು ಆಟೋಟ ದಿಂದ ಹಿಡಿದು ಹಬ್ಬ ಹೀಗೆ ಎಲ್ಲಾ ವಿಚಾರಗಳ ಕುರಿತು ಮಾತನಾಡಿದ್ದಾರೆ. ಈ ಮಾತಿನಲ್ಲಿ ಅವರು 12 ವರ್ಷದ ವಿದ್ಯಾರ್ಥಿನಿ ಕಾಮ್ಯಾ ಕಾರ್ತಿಕೇಯನ್ ಹೆಸರನ್ನೂ ಉಲ್ಲೇಖಿಸಿದ್ದಾರೆ. ಅಷ್ಟಕ್ಕೂ ಈ ಕಾಮ್ಯಾ ಯಾರು? ಇಲ್ಲಿದೆ ವಿವರ

ಕಾಮ್ಯಾ ಏಷ್ಯಾದಿಂದ ಹೊರಗೆ ಅತಿ ಎತ್ತರದ ಶಿಖರದಲ್ಲಿ ಭಾರತದ ಧ್ವಜವನ್ನು ಹಾರಿಸಿ ದಾಖಲೆ ಬರೆದಿದ್ದಾರೆ.
undefined
7 ನೇ ತರಗತಿ ವಿದ್ಯಾರ್ಥಿನಿಯಾಗಿರುವ ಕಾಮ್ಯಾ ತಂದೆ ಎಸ್. ಕಾರ್ತಿಕೇಯನ್ ನೌಕಾಪಡೆಯಲ್ಲಿ ಕಮಾಂಡರ್ ಆಗಿದ್ದಾರೆ. ತಾಯಿ ಶಿಕ್ಷಕಿಯಾಗಿದ್ದಾರೆ.
undefined
ಮನ್ ಕೀ ಬಾತ್ ನಲ್ಲಿ ಮಾತನಾಡಿದ ಮೋದಿ ಕಾಮ್ಯಾ ಕಾರ್ತಿಕೇಯನ್ ಕೇವಲ 12 ವರ್ಷದ ಹರೆಯದಲ್ಲಿ ಮೌಂಟ್ ಎಕಾಂಕ್ವಾವನ್ನು ಏರಿದ್ದಾರೆ. ಈ ಶಿಖರ ಸುಮಾರು 7000 ಮೀಟರ್ ಎತ್ತರದಲ್ಲಿದೆ ಎಂದಿದ್ದಾರೆ.
undefined
ಕಾಮ್ಯಾರ ಈ ಸಾಧನೆ ಜನರಿಗೆ ಫಿಟ್ ಆಗಿರಲು ಪ್ರೇರೇಪಿಸುತ್ತದೆ. ಯಾರು ಫಿಟ್ ಆಗಿರುತ್ತಾರೋ ಅವರೇ ಹಿಟ್ ಆಗುತ್ತಾರೆ. ಇಂತ ಸಾಧನೆ ಮಾಡಿದ ಕಾವ್ಯಾಗೆ ಅಭಿನಂದನೆಗಳು ಎಂದು ಮೋದಿ ಹೇಳಿದ್ದಾರೆ.
undefined
ಕಾಮ್ಯಾ ಅತಿ ಎತ್ತರದ ಪರ್ವತ ಎಕಾಂಕ್ವಾವನ್ನೇರಿದ್ದಾರೆ. ದಕ್ಷಿಣ ಅಮೆರಿಕಾದ ಅರ್ಜೆಂಟಿನಾದಲ್ಲಿರುವ ಈ ಪರ್ವತ, ಇಂಡೀಸ್ ಪರ್ವತಮಾಲೆಯ ಅತ್ಯಂತ ಎತ್ತರದ ಪರ್ವತವಾಗಿದೆ. ಇದು 6962 ಮೀಟರ್ ಎತ್ತರದಲ್ಲಿದೆ.
undefined
ಕಾಮ್ಯಾ 6962 ಮೀಟರ್ ಎತ್ತರದ ಎಕಾಂಕ್ವಾವನ್ನು ಫೆಬ್ರವರಿ 1 ರಂದು ಏರಿದ್ದರು. ಈ ವೇಳೆ ಹಲವಾರು ಕಷ್ಟಗಳನ್ನೆದುರಿಸಿದ್ದ ಕಾಮ್ಯಾ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದಕ್ಕಾಗಿ ಅವರು ದೀರ್ಘ ಸಮಯದ ತಯಾರಿ ನಡೆಸಿದ್ದರು.
undefined
ಮುಂಬೈ ನಿವಾಸಿಯಾಗಿರುವ ಕಾಮ್ಯಾ ಮೂರು ವರ್ಷವಿದ್ದಾಗಲೇ ಪರ್ವತಾರೋಹಣ ಪ್ರ್ಯಾಕ್ಟೀಸ್ ಆರಂಭಿಸಿದ್ದರು. ಇವರು ಲೋನಾವಾಲಾದಲ್ಲಿ ಬೇಸಿಕ್ ಟ್ರೆಕ್ಕಿಂಗ್ ಗೆ ತೆರಳುತ್ತಿದ್ದರು.
undefined
click me!